ಸುರಪುರದ ಐತಿಹಾಸಿಕ ದೇಗುಲದ ಬಲ ಭಾಗದಲ್ಲಿ ವಿಶಾಲವಾದ ಕೆರೆಯಂಗಳವಿದೆ. ಅದಕ್ಕೆ ಹೊಂದಿಕೊಂಡಂತೆ ರಾಜ್ಯ ಹೆದ್ದಾರಿಯ ಹಳೆ ಬಸ್ ನಿಲ್ದಾಣದ ಪಕ್ಕದಲ್ಲಿ ಒಂದಿಷ್ಟು ಛಾವಣಿ
ಹಾಕಿದ ಮನೆಯಂತೆ ಕಾಣುತ್ತದೆ. ಒಳ ಪ್ರವೇಶ ಮಾಡಿ ಕಿಟಕಿಯ ಮೂಲಕ ಕಣ್ಣು ಹಾಯಿಸಿದರೆ ಕಾಣುವುದೇ ದಂಡಿನ ಮರಗಮ್ಮ ದೇಗುಲ. ಅದರ ಸುತ್ತಲು ಪಾದ ಮುಳುಗುವಷ್ಟು ನೀರು ನಿಂತಿವೆ. ಒಂದಿಷ್ಟು ಸ್ಚಚ್ಛತೆಯ ಅಭಾವ ಕಾಣುತ್ತದೆ.

ದೇಗುಲದ ಇತಿಹಾಸವನ್ನು ಕೇಳಿದರೆ ಮಾತ್ರ ಒಂದು ಕ್ಷಣ ಮೈ ಜುಮ್ಮೆನ್ನದೆ ಇರದು. `ಯುದ್ದಕ್ಕೆ ತೆರಳುವಾಗ ಸೈನಿಕರು ಆಸೆ ಆಮಿಷಗಳಿಗೆ ಬಲಿಯಾಗಬಾರದು. ತನ್ನ ಜೊತೆ ನಂಬಿದ ಯಾವುದೇ ವ್ಯಕ್ತಿಯಿಲ್ಲ. ಗುರಿ ಒಂದೇ ಆಗಿತ್ತು ಯುದ್ಧದಲ್ಲಿ ಗೆಲುವು. ಯುದ್ದಕ್ಕೆ ತೆರಳುವ ಮುನ್ನ ಸೈನಿಕರು ಪತ್ನಿಯ ಮಂಗಳಸೂತ್ರವನ್ನು ತೆಗೆದು ಮುನ್ನಡೆಸುವ ಕೇಂದ್ರ ಸ್ಥಳವೇ ದೈತ್ಯಶಕ್ತಿಯ ದೇವತೆ ದಂಡಿನ ಮರಗಮ್ಮ ಆಗಿದ್ದಳು. ಇತಿಹಾಸದ ಪುಟಗಳನ್ನು ಮೆಲುಕು ಹಾಕಿದಾಗ ಸ್ಥಳದ ಮಹತ್ವ ಕಂಡು ರೋಮಾಂಚನವಾಗುತ್ತದೆ.

ಏನಿದು ದಂಡಿನ ಮರಗಮ್ಮ: ಸುರಪುರ ಸಂಸ್ಥಾನದ ರಾಜಾ ಪಿತಾಂಬರಿ ಬಹರಿ ಪಿಡ್ಡನಾಯಕ (1680-1860) ಅವಧಿಯಲ್ಲಿ ದೇಗುಲ ಸ್ಥಾಪನೆಗೊಂಡಿತು. ಯುದ್ದಕ್ಕೆ ತೆರಳುವಾಗ ಪೂರ್ವಭಾವಿ ಸಭೆಯಂತೆ ದೇವಸ್ಥಾನದ ಮುಂದುಗಡೆ ಸೈನಿಕರ ದಂಡು ಹಾಗೂ ಪತ್ನಿಯರು ಆಗಮಿಸುತ್ತಿದ್ದರು. ವೀರ ಸಂಕಲ್ಪದಿಂದ ಯುದ್ದ ಗ್ಲ್ಲೆಲುವ ಸಲುವಾಗಿ ಚಿಂತನೆ ನಡೆಯುವ ಕೇಂದ್ರವಾಗಿತ್ತು. ಎದುರಾಳಿ ಪಡೆಯನ್ನು ಹಿಮ್ಮೆಟ್ಟಿಸಿ ಯುದ್ದ ಗೆಲ್ಲುವುದು ನಮ್ಮ ಗುರಿಯೆಂದು ರಾಜರು ಹುರಿದುಂಬಿಸಿ ಸಂಸ್ಥಾನದ ಗೌರವ ಕಾಪಾಡುವ ಹೊಣೆ ನಿಮ್ಮಲ್ಲರ ಮೇಲಿದೆ. ಮುಂದೆ ಇಟ್ಟ ಹೆಜ್ಜೆ ಹಿಂದೆ ಇಡಬಾರದು. ಯುದ್ಧದಲ್ಲಿ ಮಗ್ನರಾಗಿರುವಾಗ ಯಾವುದೇ ಭೀತಿ ಹಾಗೂ ಆಸೆ ಬರಬಾರದು ಎನ್ನುವ ಉದ್ದೇಶದಿಂದಲೇ ಪತ್ನಿಯರ ಮಂಗಳ ಸೂತ್ರವನ್ನು ರಾಜರ ಆದೇಶದಂತೆ ತೆಗೆದು ದೇವಸ್ಥಾನದ ಮುಂದೆ ಇಡುತ್ತಿದ್ದರು.

ಯುದ್ಧದಲ್ಲಿ ಮಡಿದರೆ ಸ್ವರ್ಗ, ಗೆದ್ದರೆ ವಿಜೃಂಭಣೆಯಿಂದ ಮರಳಿ ಸಂಸ್ಥಾನಕ್ಕೆ ಆಗಮಿಸಿದಾಗ ಸಕಲ ಗೌರವದೊಂದಿಗೆ ಸೈನಿಕರಿಗೆ ಮರು ಮದುವೆ ಕಾರ್ಯವನ್ನು ಸ್ವತಃ ರಾಜರೇ ಮುಂದೆ ನಿಂತು ನೆರವೇರಿಸುತ್ತಿದ್ದರು ಎನ್ನುವ ಇತಿಹಾಸ ದಾಖಲೆಗಳು ಹೇಳುತ್ತವೆ ಎನ್ನುತ್ತಾರೆ ಭಾಸ್ಕರರಾವ ಮಡುಬೂಳ.
ಅಂದು ಪವಿತ್ರ ಭೂಮಿಯಾಗಿದ್ದ ದೇಗುಲ ಇಂದಿಗೂ ಅದರ ಕುರುಹು ಇದೆ. ಇವತ್ತಿಗೂ ಸುರಪುರ ಸಂಸ್ಥಾನದ ರಾಜವಂಶಜರಿಂದ ಪೂಜೆ ಕೈಂಕರ್ಯಗಳು ನಡೆಯುತ್ತಲಿವೆ. ದಂಡ್ ಅಥವಾ ದಂಡು ಸೈನ್ಯವನ್ನು ಯುದ್ದಕ್ಕೆ ಕಳುಹಿಸುವುದರಿಂದಲೇ ಮರಗಮ್ಮ ದೇವಿಗೆ ದಂಡಿನ ಮರಗಮ್ಮ ಎಂಬ ಹೆಸರು ಬಂದಿದೆ ಎನ್ನುವುದು ದಾಖಲೆಗಳು ಹೇಳುತ್ತವೆ.

ಇಂತಹ ಇತಿಹಾಸ ಭವ್ಯ ಪರಂಪರೆ ಸಾರುವ ದೇವಸ್ಥಾನ ಜೀರ್ಣೋದ್ದಾರ ಮಾಡುವುದು ಅತ್ಯಗತ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.