ಬುಧವಾರ, ಏಪ್ರಿಲ್ 21, 2021
23 °C

ಮಂಡೇಲಾ ಪ್ರತಿಮೆಗೆ ಪಂಜರ ನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊವಿಕ್, (ದಕ್ಷಿಣ ಆಫ್ರಿಕಾ) (ಎಎಫ್‌ಪಿ): ಬಿಳಿಯರ ವಿರುದ್ಧ ನೆಲ್ಸನ್ ಮಂಡೇಲಾ ಅವರು ಹೋರಾಟ ನಡೆಸಿ ಬಂಧನಕ್ಕೆ ಒಳಗಾಗಿ 50 ವರ್ಷಗಳು ಸಂದ ಸಂದರ್ಭವನ್ನು ವಿಶಿಷ್ಟವಾಗಿ ಆಚರಿಸಾಗುತ್ತಿದ್ದು, 50 ವರ್ಷಗಳ ಹಿಂದೆ ಮಂಡೇಲಾ ಅವರನ್ನು ಬಂಧಿಸಿದ್ದ ಗ್ರಾಮೀಣ ಹೆದ್ದಾರಿ ಪಕ್ಕ ಇರುವ ನೆಲ್ಸನ್  ಪ್ರತಿಮೆಗೆ ಈಗ ಕಬ್ಬಿಣದ ಸಲಾಕೆಗಳ ಸುಂದರ ಪಂಜರ ನಿರ್ಮಿಸಲಾಗಿದೆ.94 ವಯಸ್ಸಿನ ಮಂಡೇಲಾ 1962ರ ಆಗಸ್ಟ್ 5ರಂದು ಬಿಳಿಯರ ದಬ್ಬಾಳಿಕೆಯ ವಿರುದ್ಧ ಹೊವಿಕ್ ಪಟ್ಟಣದ ಬಳಿ ಹೋರಾಟವನ್ನು ಆರಂಭಿಸಿದ್ದರು.ಜೈಲನ್ನು ಹೋಲುವ ಮಾದರಿಯಲ್ಲಿ 50 ಸಲಾಕೆಗಳಲ್ಲಿ 10 ಮೀಟರ್ ಎತ್ತರಕ್ಕೆ ಪಂಜರ ನಿರ್ಮಿಸಲಾಗಿದೆ. ರಾಷ್ಟ್ರಾಧ್ಯಕ್ಷ ಜೇಕಬ್ ಜೂಮಾ ಹೊಸದಾಗಿ ನಿರ್ಮಿಸಲಾಗಿರುವ ಪಂಜರ ಮತ್ತು ನೆಲ್ಸನ್ ಮಂಡೆಲಾ ವಸ್ತು ಸಂಗ್ರಹಾಲಯದ ಉದ್ಘಾಟನೆ ನೆರವೇರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.