ಪಣಜಿ (ಪಿಟಿಐ): ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ವಿಷಯ ಪಕ್ಷದ ಕಾರ್ಯಸೂಚಿಯಲ್ಲಿ ಇದೆಯಾದರೂ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಅದಕ್ಕೆ ಹೆಚ್ಚು ಆದ್ಯತೆ ಕೊಡುವ ಬಗ್ಗೆ ಪರಿಗಣಿಸಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.

`ಅಯೋಧ್ಯೆ ನಮ್ಮ ಕಾರ್ಯಸೂಚಿಯಲ್ಲಿ ಇಲ್ಲ ಎಂದು ನಾವು ಯಾವತ್ತೂ ಹೇಳಿಲ್ಲ. ಆದರೆ ಬೆಲೆಯೇರಿಕೆ, ಭ್ರಷ್ಟಾಚಾರ ಹಾಗೂ ದುರಾಡಳಿತದಂತಹ ವಿಷಯಗಳಿಗೆ ಚುನಾವಣೆಯಲ್ಲಿ ಪ್ರಾಮುಖ್ಯ ಕೊಡಲಿದ್ದೇವೆ' ಎಂದು ಪಕ್ಷದ ಉಪಾಧ್ಯಕ್ಷ ಮುಕ್ತಾರ್ ಅಬ್ಬಾಸ್ ನಕ್ವಿ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

`ಗೋವಾದಲ್ಲಿ ಶುಕ್ರವಾರದಿಂದ ಶುರುವಾಗಲಿರುವ ಮೂರು ದಿನಗಳ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ರಾಜಕೀಯ ವಿಷಯಗಳನ್ನು ವಿಸ್ತೃತವಾಗಿ ಚರ್ಚಿಸಲಾಗುವುದು' ಎಂದು ಹೇಳಿದರು.

ಅವಧಿಗೆ ಮುನ್ನವೇ ಚುನಾವಣೆ ನಡೆಯುವ ಇಂಗಿತ ವ್ಯಕ್ತಪಡಿಸಿದ ನಕ್ವಿ, ಕಾರ್ಯಕಾರಣಿಯಲ್ಲಿ ಮುಂದಿನ ಲೋಕಸಭೆ ಚುನಾವಣೆ ಕುರಿತು ಕಾರ್ಯತಂತ್ರ ರೂಪಿಸಲಾಗುವುದು. ರಾಜಕೀಯ ಹಾಗೂ ದೇಶದ ಆಂತರಿಕ ಭದ್ರತೆ ಸೇರಿದಂತೆ ಹಲವು ವಿಷಯಗಳನ್ನು ಚರ್ಚಿಸಿ, ವಿವಿಧ ನಿರ್ಣಯಗಳನ್ನು ಅಂಗೀಕರಿಸಲಾಗುವುದು ಎಂದರು.

ಮೈತ್ರಿ ಕಡ್ಡಾಯವಲ್ಲ- `ಧರ್ಮ': ಮುಂಬರುವ ಚುನಾವಣೆಯಲ್ಲಿ ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಕಡ್ಡಾಯವೇನಿಲ್ಲ; ಅದು ನಮ್ಮ `ಧರ್ಮ' ಎಂದು ನಕ್ವಿ ಪ್ರತಿಕ್ರಿಯಿಸಿದರು.

`ಮೈತ್ರಿಕೂಟ ರಚಿಸಿಕೊಳ್ಳುವುದು ನಮಗೆ ಕಡ್ಡಾಯವಲ್ಲ. ಈ ಮೊದಲು ಮೈತ್ರಿಕೂಟ ರಚಿಸಿ ನಾವು ಸ್ಥಿರ ಆಡಳಿತ ನೀಡಿದ್ದೇವೆ. ಹೀಗಾಗಿ ಅದನ್ನು ಧರ್ಮ ಎಂದೇ ಪರಿಗಣಿಸುತ್ತೇವೆ' ಎಂದರು.

ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಎನ್ಡಿಎ ಮೈತ್ರಿಕೂಟ ಆಡಳಿತ ನಡೆಸಿದ್ದನ್ನು ಸ್ಮರಿಸಿದ ಅವರು, `ಅಭಿವೃದ್ಧಿಯೊಂದನ್ನೇ ಕಾರ್ಯಸೂಚಿಯಾಗಿ ಮಾಡಿಕೊಂಡು ಸ್ಥಿರ ಸರ್ಕಾರ ನಡೆಸಿದ್ದೇವೆ. ಮುಂದಿನ ದಿನಗಳಲ್ಲಿ ಎನ್ಡಿಎ ಮೈತ್ರಿಕೂಟವನ್ನು ವಿಸ್ತರಿಸಿ, ಬಲಿಷ್ಠಗೊಳಿಸಲಾಗುವುದು' ಎಂದರು.

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಲೋಕಸಭೆ ಚುನಾವಣೆ ಪ್ರಚಾರದಿಂದ ದೂರವಿಡುವಂತೆ ಮೈತ್ರಿಕೂಟದ ಯಾವುದೇ ಪಕ್ಷ ಒತ್ತಾಯಿಸಿಲ್ಲ ಎಂದು ನಕ್ವಿ ಸ್ಪಷ್ಟಪಡಿಸಿದರು.

ಇದೇ ವೇಳೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಸಾಧನೆ ಸುಧಾರಿಸುವ ದಿಸೆಯಲ್ಲಿ ನರೇಂದ್ರ ಮೋದಿ ಅವರು ಬಿಜೆಪಿಗೆ ಮಾತ್ರವಲ್ಲ, ಜೆಡಿಯು ಗೂ ಅಗತ್ಯ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜೀವ್ ಪ್ರತಾಪ್ ರೂಡಿ ಪಟ್ನಾದಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.