ಸೋಮವಾರ, ಜೂನ್ 14, 2021
21 °C

ಮಕ್ಕಳಿಗೆ ಮೊಬೈಲೇ ಮೆಚ್ಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಏಳು ವರ್ಷ ಮೇಲ್ಪಟ್ಟ ಮಕ್ಕಳು ತಮ್ಮ ಕುಟುಂಬದೊಂದಿಗೆ ಕಳೆಯುವುದಕ್ಕಿಂತ ಹೆಚ್ಚು ಸಮಯವನ್ನು ತಂತ್ರಜ್ಞಾನದೊಂದಿಗೆ ಕಳೆಯುತ್ತಿದ್ದಾರೆ. ಇದು ಹೆತ್ತವರು ಮತ್ತು ಮಕ್ಕಳ ನಡುವಿನ ಸಂಬಂಧದ ಮೇಲೆ ಪ್ರಭಾವ ಬೀರಿದೆ’ ಎಂದು ಲಂಡನ್‌ನಲ್ಲಿ ನಡೆಸಿದ ಸಮೀಕ್ಷೆಯಿಂದ ದೃಢಪಟ್ಟಿದೆ.ಏಳರಿಂದ ಎಂಟು ವಯೋಮಾನದವರಲ್ಲಿ ಮೂರನೇ ಒಂದರಷ್ಟು, ಒಂಬತ್ತರಿಂದ ಹನ್ನೊಂದು ವಯೋಮಾನದವರಲ್ಲಿ ಮೂರನೇ ಎರಡರಷ್ಟು ಮತ್ತು ಹನ್ನೆರಡರಿಂದ ಹದಿನಾಲ್ಕು ವಯಸಿನವರಲ್ಲಿ ಹತ್ತರಲ್ಲಿ ಒಂಬತ್ತು ಮಕ್ಕಳು ಸ್ವಂತ ಮೊಬೈಲ್‌ ಹೊಂದಿದವರು. ಶೇ 60 ಪೋಷಕರ ಪ್ರಕಾರ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಇವತ್ತಿನ ಮಕ್ಕಳಲ್ಲಿ  ಸರಾಸರಿ 924 ಪೌಂಡ್‌ ಬೆಲೆಯ ಇಲೆಕ್ಟ್ರಾನಿಕ್‌ ವಸ್ತುಗಳು ಇರುತ್ತವೆ. ಮೂವರಲ್ಲಿ ಒಬ್ಬರು ಒಂದು ಗಂಟೆಗೆ ಹಲವು ಬಾರಿ ಮೆಸೇಜ್‌ಗಾಗಿ ಚೆಕ್‌ ಮಾಡುತ್ತಾರೆ. ಮೂವರಲ್ಲಿ ಇಬ್ಬರು ಮಲಗುವಾಗ ಬೆಡ್‌ನಲ್ಲೇ ಮೊಬೈಲ್‌, ಟ್ಯಾಬ್ಲೆಟ್‌ಗಳನ್ನು ಇಟ್ಟುಕೊಳ್ಳುತ್ತಾರೆ ಎಂಬ ಕುತೂಲಹಕಾರಿ ಅಂಶವೂ ಸಮೀಕ್ಷೆಯಿಂದ ದೃಢಪಟ್ಟಿದೆ. ಮಕ್ಕಳ ಈ ನಡವಳಿಯಿಂದ ಕುಟುಂಬದಲ್ಲಿನ ಸಂಬಂಧ ಸಡಿಲಗೊಂಡಿದೆ ಎಂಬುದು ಪೋಷಕರ ಅಳಲು. ಇಷ್ಟೇ ಅಲ್ಲ, ಮೂವರಲ್ಲಿ ಒಬ್ಬರು ಒಂದೇ ಮನೆಯಲ್ಲಿದ್ದರೂ ಮನೆಯವರೊಂದಿಗೆ ಸಂವಹನ ನಡೆಸಲು ಮೊಬೈಲ್‌ ಬಳಸುತ್ತಾರಂತೆ!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.