ನಾಗಮಂಗಲ: ಈರುಳ್ಳಿ, ಬೆಳ್ಳುಳ್ಳಿ, ಮೆಣಸಿನಕಾಯಿ, ಟೊಮೆಟೊ, ಆಲೂಗೆಡ್ಡೆ, ಸೊಪ್ಪು ಎಲ್ಲ ಇದೆ ತಗೊಳ್ಳಿ ಅಮ್ಮಾ, ತಿಪಟೂರು ತೆಂಗಿನಕಾಯಿ ಜೊತೆ 25, ಸೌತೆಕಾಯಿ ಎಳೆ ಸೌತೆಕಾಯಿ..... ತಗೊಳ್ಳಣ್ಣಾ, ಬಿಸಿ ಬಿಸಿ ಬಜ್ಜಿ, ವಡೆ 10 ರೂಪಾಯಿಗೆ ನಾಲ್ಕು... ಬನ್ನಿ ಸಾರ್...

ಇದು ಪಟ್ಟಣದ ಸೌಮ್ಯಕೇಶವ ಸ್ವಾಮಿ ದೇವಸ್ಥಾನದ ಮುಂಭಾಗ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ರಾಮಾನುಜ ಗಣಿತ ಸಂಘದ ವತಿಯಿಂದ ಆಯೋಜಿಸಿದ್ದ ಮಕ್ಕಳ ಸಂತೆಯ ಚಿತ್ರಣ. ಪಟ್ಟಣದಲ್ಲಿ ಪ್ರತಿ ಶುಕ್ರವಾರ ಸಂತೆ ನಡೆಯಲಿದ್ದು, ಬುಧವಾರವೇ ಶಾಲೆಯ ಆವರಣದಲ್ಲಿ ಸಂತೆಯ ವಾತಾವರಣ ನಿರ್ಮಾಣವಾಗಿತ್ತು. ಸಂತೆ ಕಟ್ಟಿರುವುದಕ್ಕೆ ಸಾರ್ವಜನಿಕರಿಗೆ ಅಚ್ಚರಿಯಾಯಿತು. ಒಳ ಬಂದು ನೋಡಿದಾಗ ಗೊತ್ತಾಗಿದ್ದು ಇದು ಮಕ್ಕಳ ಸಂತೆ ಎಂದು.

ಮಕ್ಕಳ ಸಂತೆಯಲ್ಲಿ ವಿವಿಧ ಬಗೆಯ ಸೊಪ್ಪು, ತರಕಾರಿಗಳು, ಸಿಹಿತಿನಿಸುಗಳು, ತೆಂಗಿನಕಾಯಿ, ಹಣ್ಣುಗಳು, ಕಾಫಿ, ಟೀ, ಕಡಲೇಪುರಿ ಸೇರಿದಂತೆ ಹಲವು ವಸ್ತು ಗಳನ್ನು ಮಾರಾಟ ಮಾಡಲಾಯಿತು. ಮಕ್ಕಳು ಸಾರ್ವಜನಿಕರಿಗೆ ಮಾರುತ್ತಿದ್ದ ವಸ್ತುಗಳ ವ್ಯಾಪಾರವು ನೈಜ ವ್ಯಾಪಾರಸ್ಥರನ್ನು ನಾಚಿಸುವಂತಿತ್ತು.

‘ತರಕಾರಿ ಚೆನ್ನಾಗಿದೆ’, ‘ಸೊಪ್ಪು ಚೆನ್ನಾಗಿದೆ’, ‘ವ್ಯಾಪಾರ ಮಾಡಿ’ ಎಂಬ ಮಕ್ಕಳ ಕೂಗು ಸೌಮ್ಯಕೇಶವಸ್ವಾಮಿ ದೇವಸ್ಥಾನದ ಮುಂದೆ ಸಾಮಾನ್ಯ ವಾಗಿತ್ತು. ಮಕ್ಕಳು, ದೊಡ್ಡವರು, ಶಿಕ್ಷಕರು ಎಲ್ಲರೂ ಮಕ್ಕಳು ಮಾರಾಟ ಮಾಡುತ್ತಿದ್ದ ವಿವಿಧ ಸಾಮಗ್ರಿಗಳನ್ನು ಚೌಕಾಸಿ ಮಾಡಿ ಖರೀದಿಸಿ ಸಂತಸಪಟ್ಟರು.

ಸಂತೆಯ ವಹಿವಾಟನ್ನು ಉದ್ಘಾಟಿಸಿ ಮಾತನಾಡಿದ ಮಂಡ್ಯ ಡಯಟ್ ಉಪನ್ಯಾಸಕ ಕುಮಾರಸ್ವಾಮಿ, ಭಾರತೀಯ ಗಣಿತಜ್ಞರು ವಿಶ್ವಕ್ಕೆ ಅಗ್ರಮಾನ್ಯ ಕೊಡುಗೆ ನೀಡಿದ್ದಾರೆ. ಇಂತಹ ನೆಲದಲ್ಲಿ ವಿದ್ಯಾರ್ಥಿಗಳು ಗಣಿತವನ್ನು ಪರಿಪೂರ್ಣವಾಗಿ ಕಲಿಯಬೇಕು.

ಗಣಿತವೆಂದರೆ ವ್ಯಾವ ಹಾರಿಕ ಜ್ಞಾನ. ಅದನ್ನು ತರಗತಿ ಕೊಠಡಿ ಕಲಿಕೆಯಲ್ಲಿ ಈಡೇರಿಸಿಕೊಳ್ಳುವುದಕ್ಕಿಂತ ನೈಜ ಸನ್ನಿವೇಶದಲ್ಲಿ ಸಾಧಿಸುವುದು ಬಹಳ ಮುಖ್ಯ ಹಾಗೂ ಸುಲಭವೂ ಹೌದು. ಈ ಹಿನ್ನೆಲೆಯಲ್ಲಿ ಮಕ್ಕಳ ಸಂತೆ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಶಿಕ್ಷಣ ಸಂಯೋಜಕ ಎನ್.ಕೆ. ನರಸಿಂಹಪ್ರಸಾದ್ ಮಾತನಾಡಿದರು.

ಮುಖ್ಯಶಿಕ್ಷಕ ಡಿ. ಕುಮಾರ್, ಎಸ್ಡಿಎಂಸಿ ಪದಾಧಿಕಾರಿಗಳು, ಶಾಲಾ ಶಿಕ್ಷಕ ವೃಂದ ಸಂತೆಯಲ್ಲಿ ಪಾಲ್ಗೊಂಡು ಮಕ್ಕಳಿಗೆ ಸಹಕರಿಸಿದರು. ಸಾರ್ವಜನಿ ಕರು ಸಂತೆಯಲ್ಲಿ ಖರೀದಿ ಮಾಡಿ ಮಕ್ಕಳ ವ್ಯವಹಾರ ಕೌಶಲವನ್ನು ಪ್ರಶಂಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.