ಸೋಮವಾರ, ಜೂನ್ 21, 2021
20 °C

ಮಕ್ಕಳ ಹಕ್ಕು: ನಾರ್ವೆಗೆ ಮಾಹಿತಿ ಒದಗಿಸಲು ಕೇಂದ್ರ ತಯಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಅನಿವಾಸಿ ಭಾರತೀಯ ಮಕ್ಕಳಿಬ್ಬರನ್ನು ತನ್ನ ವಶದಲ್ಲಿ ಇರಿಸಿಕೊಂಡಿರುವ ನಾರ್ವೆ ರಾಷ್ಟ್ರಕ್ಕೆ, ಭಾರತದಲ್ಲಿ ಜಾರಿಯಲ್ಲಿರುವ ಮಕ್ಕಳ ಹಕ್ಕುಗಳ ನೀತಿ ಕುರಿತು ದಾಖಲೆಗಳನ್ನು ಕಳುಹಿಸಲು ಕೇಂದ್ರ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ.ಭಾರತದಲ್ಲಿ ಮಕ್ಕಳ ಹಕ್ಕುಗಳ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಾರಿಯಲ್ಲಿರುವ ಕಾನೂನು ಮತ್ತು ನೀತಿಗಳ ಬಗ್ಗೆ ನಾರ್ವೆಯ ಅಧಿಕಾರಿಗಳು ಪ್ರಶ್ನೆಗಳನ್ನು ಕೇಳಿದ್ದರು. ಈ ಪ್ರಕರಣದ ವಿಚಾರಣೆ ಈ ತಿಂಗಳ 23ರಂದು ನಡೆಯಲಿದ್ದು, 20ನೇ ತಾರೀಖಿಗೆ ಮುನ್ನ ತನ್ನ ನೀತಿಯ ಬಗ್ಗೆ ತಿಳಿಸುವಂತೆ ನಾರ್ವೆ ಸೂಚಿಸಿತ್ತು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.