ಭಾನುವಾರ, ಜೂನ್ 20, 2021
25 °C

ಮಕ್ಕಳ ಹಕ್ಕು: ಸೈಕಲ್‌ ರ್ಯಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸರ್ಕಾರವು ಮಕ್ಕಳ ಹಕ್ಕು­ಗಳನ್ನು ರಕ್ಷಣೆ ಮಾಡಬೇಕು. ಮಕ್ಕಳಿಗೆ ಪ್ರೋತ್ಸಾಹದಾಯಕವಾದ ಕಾರ್ಯ­ಕ್ರಮಗಳನ್ನು ಆಯೋಜಿಸಬೇಕು’ ಎಂದು ಲಂಡನ್‌ ಪ್ಯಾರಾಲಿಂಪಿಕ್‌ ಬೆಳ್ಳಿ ಪದಕ ವಿಜೇತ ಎಚ್‌.ಎನ್‌.ಗಿರೀಶ್‌ ಹೇಳಿದರು.‘ಚೈಲ್ಡ್ ರೈಟ್ಸ್ ಅಂಡ್ ಯು’ (ಕ್ರೈ) ಸಂಸ್ಥೆಯು ಕಬ್ಬನ್ ಉದ್ಯಾನದಲ್ಲಿ ಶನಿ­ವಾರ ಆಯೋಜಿಸಿದ್ದ ‘ಮಕ್ಕಳ ಹಕ್ಕು­ಗಳಿ­ಗಾಗಿ ಸೈಕಲ್‌ ರ್‌್ಯಾಲಿ’ಯಲ್ಲಿ ಭಾಗ­ವಹಿಸಿ ಅವರು ಮಾತನಾಡಿದರು.‘ಮಕ್ಕಳಿಗೂ ಅವರದೇ ಆದ ಹಕ್ಕುಗಳಿವೆ. ಅವುಗಳನ್ನು ರಕ್ಷಿಸುವಲ್ಲಿ ಸರ್ಕಾರ ಪ್ರಧಾನ ಪಾತ್ರವಹಿಸ­ಬೇಕಾ­ಗಿದೆ. ಅದರಲ್ಲೂ, ಅಂಗವಿಕಲ ಮಕ್ಕಳಿಗೆ ಎಲ್ಲಿಯೂ ಮನ್ನಣೆ ಇರ­ದಂತಾ­ಗಿದೆ. ಈ ತಾರತಮ್ಯ ನೀತಿಯನ್ನು ಬಿಡಬೇಕು. ಪ್ರತಿ ಮಗುವಿಗೂ ಆರೋಗ್ಯ­ಕರ­ವಾದ ಬಾಲ್ಯವನ್ನು ನೀಡುವ ಜವಾಬ್ದಾರಿ ಸಮಾಜದ ಮೇಲಿದೆ’ ಎಂದರು.‘ಚೈಲ್ಡ್ ರೈಟ್ಸ್ ಅಂಡ್ ಯು’   ಸಂಸ್ಥೆಯ ಪ್ರಾದೇಶಿಕ ನಿರ್ದೇಶಕಿ ಸುಮಾ ರವಿ ಮಾತನಾಡಿ, ‘ಎಲ್ಲಾ ಪಕ್ಷಗಳು ಮಕ್ಕಳ ಹಕ್ಕುಗಳಿಗೆ ಸಂಬಂಧಿ­ಸಿ­ದಂತೆ ತಮ್ಮ ಚುನಾವಣೆ ಪ್ರಣಾಳಿಕೆ­ಯಲ್ಲಿ ಘೋಷಿಸಬೇಕು ಹಾಗೂ ಆಡಳಿ­ತಕ್ಕೆ ಬರುವ ಯಾವುದೇ ಸರ್ಕಾರ ಮಕ್ಕಳ ಏಳಿಗೆಗಾಗಿ ಬಜೆಟ್‌ನಲ್ಲಿ  ಶೇ 10 ರಷ್ಟು ಮೀಸಲಿಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ’ ಎಂದರು.‘ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ 23 ರಾಜ್ಯಗಳಲ್ಲಿ ಜಾಗೃತಿ ಅಭಿಯಾನ­ವನ್ನು ಹಮ್ಮಿಕೊಳ್ಳಲಾಗಿತ್ತು. ಅಭಿ­ಯಾನ­ದಲ್ಲಿ 14 ಲಕ್ಷ ಸಹಿ ಸಂಗ್ರಹ­ವಾಗಿದೆ. ಬೆಂಗಳೂರು ಸೈಕಲ್‌ ರ್‌್ಯಾಲಿ  ಮೂಲಕ ಕ್ರೈ ಸಂಸ್ಥೆಯ ಆಂದೋ­ಲನ ಇಲ್ಲಿಗೆ ಅಂತ್ಯಗೊಂಡಿದೆ’ ಎಂದರು.ಚಿತ್ರನಟ ಮುರಳಿ, ‘ದೇಶದ ಪ್ರತಿ ಮಗುವೂ ಮುಖ್ಯ. ಇದರಿಂದ, ಮಕ್ಕಳ ಹಕ್ಕುಗಳ ಬಗೆಗೆ ಜಾಗೃತಿ ಮೂಡಿಸು­ವುದು ಇಂದಿನ ಅಗತ್ಯವಾಗಿದೆ. ಕ್ರೈ ಸಂಸ್ಥೆಯು ಈ ಕುರಿತು ಅಭಿಯಾನ ಆಯೋಜಿಸಿ, ಜಾಗೃತಿ ಮೂಡಿಸಿ ಒಳ್ಳೆ ಕಾರ್ಯ ಮಾಡುತ್ತಿದೆ’ ಎಂದರು.ಯುವ ನಟ, ನಿರ್ದೇಶಕ ಕಿಶನ್‌, ‘ಪ್ರತಿಯೊಬ್ಬ ಮಗುವಿಗೂ ಕನಸುಗಳಿವೆ. ಕೊಳೆಗೇರಿ ಮಕ್ಕಳಿಗೂ ಭವಿಷ್ಯ ರೂಪಿಸ­ಬೇಕಿದೆ. ಸಮಾಜ ಅವರನ್ನು ನೋಡುವ ದೃಷ್ಟಿ ಬದಲಾಗಬೇಕಿದೆ’ ಎಂದು ಹೇಳಿದರು.ವಿವಿಧ ಕಾಲೇಜಿನ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೈಕಲ್‌ ರ್‌್ಯಾಲಿಯಲ್ಲಿ ಭಾಗವಹಿಸಿದ್ದರು. ಬ್ಯಾಡ್ಮಿಂಟನ್‌ ಆಟ­ಗಾರ್ತಿ ಅಶ್ವಿನಿ ಪೊನ್ನಪ್ಪ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.