ನೆಲಮಂಗಲ: ‘ಶಿವಾಗಮದ ಗ್ರಂಥಗಳ ಅಧ್ಯಯನಕ್ಕಾಗಿ ದಿನದ ಬಹುಪಾಲು ಸಮಯವನ್ನು ಮೀಸಲಿರಿಸಿದ್ದೇನೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎನ್.ಬಸವರಾಧ್ಯ ತಿಳಿಸಿದರು.
ತಾಲ್ಲೂಕಿನ ಶಿವಗಂಗೆಯ ಮೇಲಣಗವಿ ಮಠದಲ್ಲಿ ಭಾನುವಾರ ಎರ್ಪಡಿಸಿದ್ದ ರೇಣುಕಾಚಾರ್ಯ ಯುಗಮಾನೋತ್ಸವ ಸಮಾರಂಭದಲ್ಲಿ ಶಿವಗಂಗಾಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ರಾಜ್ಯ ಮಾರುಕಟ್ಟೆ ಸಲಹಾ ಮಂಡಳಿಯ ಅಧ್ಯಕ್ಷ ಜಿ.ಮರಿಸ್ವಾಮಿ ಮಾತನಾಡಿ ‘ಪ್ರತಿಯೊಬ್ಬರೂ ಸಂಯಮ ಸದಾಚಾರ ಅನುಸರಿಸಬೇಕು’ ಎಂದರು.ಶ್ರೀಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ‘ಹಿರಿಯ ಚೇತನಗಳನ್ನು ಸ್ಮರಣೆ ಮಾಡುವ ಉದ್ದೇಶದಿಂದ ಶಿವಗಂಗಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ’ ಎಂದರು.

ಪ್ರೊ.ಶಿವಕುಮಾರ್ ಮಾತನಾಡಿ ‘ಮಠಗಳಲ್ಲಿರುವ ಹಸ್ತ ಪ್ರತಿಗಳನ್ನು ಸಂರಕ್ಷಿಸಬೇಕಾಗಿದೆ ಮತ್ತು ಭಾಷೆಗೆ ಮಡಿವಂತಿಕೆ ಬೇಡ’ ಎಂದರು.ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಹಂಪಿಯ ಶ್ರೀವಾಮದೇವ ಮಹಂತ ಶಿವಚಾರ್ಯ ಸ್ವಾಮೀಜಿ, ಸಿಂಧನೂರಿನ ಶ್ರೀಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಸಿದ್ದರಬೆಟ್ಟದ ಶ್ರೀವೀರಭದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಎಫ್.ಎಂ. ರೇನ್ಬೊ ಚಂದ್ರಶೇಖರ್, ಉರಗ ತಜ್ಞಲೋಕೆಶ್, ತಾ.ಪಂ. ಸದಸ್ಯ ಪುಟ್ಟಗಂಗಯ್ಯ, ಗ್ರಾ.ಪಂ. ಅಧ್ಯಕ್ಷ ಮಾಲಿಂಗಯ್ಯ ಜಿಲ್ಲಾ ಮಹಾಸಭಾಧ್ಯಕ್ಷ ಎನ್.ಎಸ್. ನಟರಾಜು ಅವರನ್ನು ಸನ್ಮಾನಿಸಲಾಯಿತು.

ಬೆಂಗಳೂರಿನ ಶರಣ ಬಸವೇಶ್ವರ ಸೇವಾ ಸಮಿತಿಯು ಪ್ರಶಸ್ತಿ ವಿಜೇತರಿಗೆ ನಗದು ಬಹುಮಾನ ವಿತರಿಸಿತು.ಪುರಸಭಾ ಮಾಜಿ ಅಧ್ಯಕ್ಷ ಆರ್.ಉಮಾಶಂಕರ್ ಬಿ.ಜೆ.ಪಿ ಮುಂಖಂಡರಾದ ವೆಂಕಟ್ರಾಮು, ಚೆಲುವರಾಜು, ಕೆ.ಪಿ ಆನಂದ್, ಟಿ.ಎಂ.ಉಮಾಶಂಕರ್, ಚಲನಚಿತ್ರ ನಿರ್ದೇಶಕ ಮೂರ್ತಿ ವೇದಿಕೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.