ಗುರುವಾರ , ಜೂನ್ 24, 2021
28 °C

ಮಣ್ಣಾಗುವ ಕಣ್ಣು ಬೆಳಕು ನೀಡಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೌರಿಬಿದನೂರು: ಕಣ್ಣು ತುಂಬಾ ಸೂಕ್ಷ್ಮವಾದದ್ದು. ಕಣ್ಣಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ತಲೆ ದೋರಿದರೂ ತಕ್ಷಣವೇ ಪರಿಹಾರ ಕಂಡುಕೊಳ್ಳಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಬಾರದು ಎಂದು ನಿವೃತ್ತ ಶಿಕ್ಷಕ ಶಾಂತರಾಜ್ ತಿಳಿಸಿದರು.ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ ವತಿಯಿಂದ ಪಟ್ಟಣದ ಎಂಎಸ್‌ಎಸ್ ಶಾಲಾ ಆವರಣದಲ್ಲಿ ಭಾನುವಾರ ನಡೆದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.ವ್ಯಕ್ತಿಯ ಸಾವಿನ ನಂತರ ಅಮೂಲ್ಯ ಕಣ್ಣುಗಳ ಮಣ್ಣಾಗುವ ಬದಲು ಅಂಧರಿಗೆ ಬೆಳಕು ನೀಡುವಂತಾಗಬೇಕು ಎಂದು ಹೇಳಿದರು.ಶಿಬಿರದಲ್ಲಿ ಒಟ್ಟು 160 ಮಂದಿಗೆ ತಪಾಸಣೆ ಮಾಡಲಾಯಿತು. ಹೆಚ್ಚಿನ ಶಸ್ತ್ರಚಿಕಿತ್ಸೆಗಾಗಿ 124 ಮಂದಿಯನ್ನು ಬೆಂಗಳೂರಿನ ಶಂಕರ್ ಕಣ್ಣಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರಾದ ಡಾ. ಜಯರಾಮೇಗೌಡ, ವೈದ್ಯೆ ಡಾ. ಡೈಸಾ ಮತ್ತು  ತಂಡದವರು  ತಪಾಸಣೆ ಮಾಡಿದರು. ಎಂಎಸ್‌ಎಸ್ ಶಾಲೆಯ  ಕಾರ್ಯದರ್ಶಿ ಪಠಾಣ್ ಸೈಪುಲ್ಲಾ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಗಂಗರೆಡ್ಡಿ, ವಕೀಲ ಪಠಾಣ್ ರಹಮತ್ ಉಲ್ಲಾ, ಗ್ರಾಮ ಪಂಚಾಯಿತಿ  ಮಾಜಿ ಅಧ್ಯಕ್ಷ ನಾಗರಾಜ್, ಸಮಾಜ ಸೇವಕ ಎಂ.ಎನ್. ರಾಧಾಕೃಷ್ಣ, ಕನ್ನಡ ಸೇನೆ ಕಾರ್ಯದರ್ಶಿ ಬೈಚಾಪುರ ಗಂಗಾಧರ, ಶಿಕ್ಷಕರಾದ ನಿರಂಜನಮೂರ್ತಿ, ಸಾದಿಕಾ ಬೇಗಂ, ನರಸಿಂಹಮೂರ್ತಿ, ಅಮಿನ್ ನೂರೈನ್ ಮತ್ತಿತರರು ಉಪಸ್ಥಿತರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.