ಭಾನುವಾರ, ಮಾರ್ಚ್ 7, 2021
30 °C

ಮತದಾರರ ಜಾಗೃತಿಗೆ ಮೊಂಬತ್ತಿ ಬೆಳಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತದಾರರ ಜಾಗೃತಿಗೆ ಮೊಂಬತ್ತಿ ಬೆಳಕು

ಕೊಪ್ಪಳ: ಮತದಾರರಲ್ಲಿ ಮತದಾನ ಜಾಗೃತಿ ಮೂಡಿಸುವ ಸಲುವಾಗಿ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ನೋಂದಣಿ (ಸ್ವೀಪ್‌) ಕಾರ್ಯಕ್ರಮದ ಅಡಿ ಶುಕ್ರವಾರ  ನಗರದಲ್ಲಿ ಮೊಂಬತ್ತಿ ಬೆಳಗಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು.ನಗರದ ಸಾಹಿತ್ಯ ಭವನದ ಮುಂಭಾಗ ಸೇರಿದ ನಗರದ ವಿವಿಧ ಕಾಲೇಜು ಹಾಗೂ ಹಾಸ್ಟೆಲ್‌ಗಳ ವಿದ್ಯಾರ್ಥಿಗಳು, ‘ಸ್ವೀಪ್‌’ ಸಮಿತಿ ಅಧಿಕಾರಿಗಳು ಮೊಂಬತ್ತಿ ಬೆಳಗಿ ಮತದಾನದ ಹಕ್ಕು ಚಲಾಯಿಸಲು ನಾಗರಿಕರಲ್ಲಿ ಮನವಿ ಮಾಡಿದರು.ಬಸ್‌ ನಿಲ್ದಾಣ, ಜವಾಹರರಸ್ತೆಯಲ್ಲಿಯೂ ತೆರಳಿದ ವಿದ್ಯಾರ್ಥಿಗಳು ನಾಗರಿಕರಲ್ಲಿ ಮನವಿ ಮಾಡಿದರು. ಇದೇ ಸಂದರ್ಭ ವಿದ್ಯಾರ್ಥಿಗಳಿಂದ ಮತದಾನ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣ ಡಿ. ಉದುಪುಡಿ, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂ ರಾವ್‌ ನೇತೃತ್ವ ವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.