ಬಿಪಾಶಾ ಬಸು ಎರಡು ಸಂಭ್ರಮವನ್ನು ಎದುರುಗೊಳ್ಳಲು ಕಣ್ಣರಳಿಸಿ ನಿಂತಿದ್ದಾರೆ. ಒಂದು- ಈ ವಾರ `ಪ್ಲೇಯರ್ಸ್~ ಹಿಂದಿ ಚಿತ್ರ ತೆರೆಕಾಣುತ್ತಿರುವುದು. ಇನ್ನೊಂದು- ಅದೇ ಸಂದರ್ಭದಲ್ಲಿ ಅವರ ಹುಟ್ಟುಹಬ್ಬ ಇರುವುದು.

ಬಿಪಾಶ ಹಾಗೂ `ಟೂ-ಪೀಸ್~ ವಸ್ತ್ರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂಬುದು ತಮಾಷೆಯೇನೂ ಅಲ್ಲ. `ಧೂಮ್-2~ ಚಿತ್ರದಲ್ಲಿ ಅವರು `ಟೂ- ಪೀಸ್~ ತೊಟ್ಟು ದೇಶ ವಿದೇಶದ ವಾತಾವರಣಗಳನ್ನು ಬಿಸಿ ಮಾಡಿದ ನಂತರ `ಪ್ಲೇಯರ್ಸ್~ನಲ್ಲೂ ಅಂಥದ್ದೇ ವಸ್ತ್ರ ಹಾಕಿದ್ದಾರೆಂಬ ಪುಗ್ಗೆ ಈಗ ಹಾರುತ್ತಿದೆ.

`ಸಿನಿಮಾ ಕನಸುಗಳನ್ನು ಮಾರುತ್ತದೆ. ರಸಿಕರ ಕಂಗಳ ಸೆಳೆಯುತ್ತದೆ. ನಾಯಕರಿಗೇ ಆದ್ಯತೆ ಕೊಟ್ಟು ನಿರ್ದೇಶಕರು ಕಥೆ ಮಾಡುತ್ತಾರೆ. ನಾವೋ ಅವರ ಪಕ್ಕ ನಿಂತರೂ ಜನರೆಲ್ಲಾ ನಮ್ಮನ್ನೇ ನೋಡುವಂತೆ ಮಾಡಬೇಕು. ಇದು ಸವಾಲು. ಅದನ್ನು ನಾನು ಬಣ್ಣ ಹಚ್ಚಿದ ದಿನದಿಂದ ಸ್ವೀಕರಿಸಿದ್ದೇನೆ. ಸೆಕ್ಸಿ ಆಗುವುದು ತಮಾಷೆಯಲ್ಲ. ಅದರಲ್ಲೂ ತೆರೆಮೇಲೆ ಎರಡು ತುಂಡು ಬಟ್ಟೆ ಹಾಕಿಕೊಂಡು ಕಾಣಿಸಿಕೊಳ್ಳುವುದು ಎಲ್ಲರಿಗೂ ಆಗದ ಮಾತು. ಪ್ಲೇಯರ್ಸ್ ಚಿತ್ರದಲ್ಲಿ ನನ್ನ ಪಾತ್ರ ಚೆನ್ನಾಗಿದೆ. ನಾನು ಅಭಿಷೇಕ್ ಬಚ್ಚನ್ಗೆ ರೈಟ್ ಹ್ಯಾಂಡ್. ಇನ್ನು ನನ್ನನ್ನು ತೆರೆಮೇಲೆ ನೋಡಿ ಆನಂದಿಸಿ~ ಎಂದು ಆತ್ಮವಿಶ್ವಾಸದಿಂದ ಹೇಳುವ ಬಿಪಾಶಾ ಕಳೆದ ವರ್ಷ ತುಸು ಮಂಕಾಗಿದ್ದರಲ್ಲವೇ?

`ಹೋದ ವರ್ಷ ರಿಯಲಿಸ್ಟಿಕ್ ಚಿತ್ರಗಳನ್ನು ಮಾಡಿದೆ. ಗ್ಲ್ಯಾಮರ್ ಇಲ್ಲದಿದ್ದರೆ ಇಲ್ಲಿ ಯಾವುದೂ ಸುದ್ದಿಯಾಗುವುದಿಲ್ಲ. ಲಕ್ಷಣವಾಗಿ ಸೀರೆಯುಟ್ಟುಕೊಂಡು, ಒಡವೆ ಜಾಹೀರಾತಿನಲ್ಲಿ ಕಾಣಿಸಿಕೊಂಡ ನನ್ನ ಮುಖ ಕಂಡು ಅದು ನಾನೇ ಎಂದು ಗುರುತಿಸದವರೂ ಇದ್ದಾರೆ. ಬಿಪಾಶಾ ಅಂದರೆ ಸದಾ ಬಿಂದಾಸ್ ಎಂದೇ ಅನೇಕ ಅಭಿಮಾನಿಗಳ ನಂಬಿಕೆ. ನಾನೂ ಅಂಥ ಅಭಿಮಾನಿಗಳನ್ನು ನೆಚ್ಚಿಕೊಂಡ ನಟಿಯೇ~ ಅನ್ನೋದು ಬಿಪಾಶಾ ಹಮ್ಮು, ಹೆಮ್ಮೆ.

ಅಬ್ಬಾಸ್-ಮುಸ್ತಾನ್ ಜೋಡಿ ನಿರ್ದೇಶಿಸಿರುವ `ಪ್ಲೇಯರ್ಸ್~ ಬಿಪಾಶಾ ಬಸುಗೆ ಮರುಜನ್ಮ ನೀಡೀತೇ ಎಂದು ಕೂಡ ಇನ್ನೊಂದು ವರ್ಗ ಮಾತನಾಡಿಕೊಳ್ಳುತ್ತಿದೆ. ಯಾಕೆಂದರೆ, ಕರೀನಾ ಕಪೂರ್ ನೃತ್ಯ, ಸೌಂದರ್ಯ, ಲಾಲಿತ್ಯ ಎಲ್ಲವನ್ನೂ ಮೇಳೈಸಿಕೊಂಡು ಬಾಲಿವುಡ್ನ ರಾಣಿಯಾಗಿರುವ ಈ ಹೊತ್ತಲ್ಲಿ ಬಿಪಾಶಾಗೆ ಬೇಡಿಕೆಯ ಒರತೆಯೇನೂ ಇಲ್ಲ.

`ಬೀಡಿ ಜಲೈಲೇ~ ಹಾಡಿನಿಂದ ಕಿಡಿ ಹಚ್ಚಿದ್ದ ಬಿಪಾಶಾ ಈಗಲೂ ಅಷ್ಟೇ `ಹಾಟ್~ ಹೌದೋ ಅಲ್ಲವೋ ಎಂಬುದು ಗೊತ್ತಾಗಲು ಹೆಚ್ಚು ಕಾಯಬೇಕಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.