ಮತ್ತೆ ಮತ್ತೆ ಮುನ್ನಾಭಾಯಿ

ಮುನ್ನಾಭಾಯಿ ಮತ್ತೆ ಬರಲಿದ್ದಾನೆ. ಮುನ್ನಾಭಾಯಿ ಎಂಬಿಬಿಎಸ್ ಚಿತ್ರದಲ್ಲಿ ಜಾದೂಕಿ ಛಪ್ಪಿ ನೀಡಿ ಜಾದೂ ಮಾಡಿದ್ದರು ಸಂಜೂಬಾಬಾ. ಇದರ ಮುಂದುವರಿದ ಭಾಗದಲ್ಲಿ `ಗಾಂಧಿಗಿರಿ~ ಮೂಲಕ `ಗೆಟ್ ವೆಲ್ ಸೂನ್~ ಹೆಸರಾಗಿತ್ತು. ಈಗ `ಮುನ್ನಾಭಾಯಿ ಕಿ ಆತ್ಮಕಥಾ~ ಚಿತ್ರದ ಮೂಲಕ ಮತ್ತೆ ತೆರೆಗೆ ಬರಲಿದ್ದಾರೆ.
ರಾಜ್ಕುಮಾರ್ ಹಿರಾನಿ, ವಿಧು ವಿನೋದ್ ಚೋಪ್ರಾ ಜೊತೆಗೆ ಮುನ್ನಾಭಾಯ್ ಪಾತ್ರ ನಿರ್ವಹಿಸಿದ್ದ ಸಂಜೂಬಾಬಾ ಸಹ ಖುಷಿಯಾಗಿದ್ದಾರೆ.
ಮೊದಲು ವಿಧು ವಿನೋದ್ ಚೋಪ್ರಾ ಮುನ್ನಾಭಾಯ್ ಚಿತ್ರ ನಿರ್ಮಿಸಬೇಕೆಂದಾಗ ಶಾರುಖ್ ಖಾನ್ ಅವರು ಪಾತ್ರ ನಿರ್ವಹಿಸಬೇಕು ಎಂದು ಬಯಸಿದ್ದರು. ಜಿಮ್ಮಿ ಶೇರ್ಗಿಲ್ ನಿರ್ವಹಿಸಿದ `ಜಹೀರ್~ ಎಂಬ ಪುಟ್ಟ ಪಾತ್ರ ಸಂಜೂಬಾಬಾಗೆ ನೀಡಬೇಕೆಂದು ಆಲೋಚಿಸಿದ್ದರು.
ಆದರೆ ಆಗ ಶಾರುಖ್ ಖಾನ್ ಬೆನ್ನುನೋವಿನಿಂದ ಬಳಲುತ್ತಿದ್ದರು. ಈ ಅವಕಾಶ ಸಂಜೂಬಾಬಾಗೆ ದೊರೆಯಿತು. ಸಂಜೂಬಾಬಾಗೆ ಅದು ಪಾತ್ರವೇ ಆಗಿರಲಿಲ್ಲ, ಅವರೇ ಆಗಿದ್ದರಿಂದ ನಿರ್ವಹಿಸುವುದು ಕಷ್ಟವಾಗಲಿಲ್ಲ ಎಂದು ವಿಧು ಅಭಿಪ್ರಾಯ ಪಟ್ಟಿದ್ದಾರೆ. ಯಾವತ್ತಿದ್ದರೂ ಶಾರುಖ್ಖಾನ್ ನನ್ನ ಮೊದಲ ಆಯ್ಕೆ.
ಆದರೆ ಮುನ್ನಾಭಾಯ್ ಸಮಯದಲ್ಲಿ ಅವರ ಆರೋಗ್ಯ ಕೈ ಕೊಟ್ಟಿತು. `3 ಈಡಿಯಟ್ಸ್~ ಸಮಯದಲ್ಲಿ ಡೇಟ್ಸ್ ಹೊಂದಾಣಿಕೆಯಾಗಲಿಲ್ಲ. `ಫೆರಾರಿ ಕಿ ಸವಾರಿ~ ಚಿತ್ರೀಕರಣದ ಸಂದರ್ಭದಲ್ಲಿಯೂ ಶಾರುಖ್ನೊಂದಿಗೆ ಕೆಲಸ ಮಾಡಲು ಆಗಲಿಲ್ಲ. ಆದರೆ ಆ ಬಗ್ಗೆ ಖೇದವೇನೂ ಇಲ್ಲ ಎಂದೂ ವಿಧು ಹೇಳಿದ್ದಾರೆ.
ಆದರೆ ಬದಲಿಯಾಗಿ ತೆಗೆದುಕೊಂಡ ಎಲ್ಲ ನಟರೂ ಆ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಅವರೇ ಆ ಪಾತ್ರಗಳಿಗೆ ಹೇಳಿ ಮಾಡಿಸಿದಂತೆ ನಟಿಸಿದ್ದಾರೆ. ಈ ನಿಟ್ಟಿನಲ್ಲಿ ಬದಲಿ ಆಯ್ಕೆಯನ್ನು ಸುಲಭಗೊಳಿಸಿದ ರಾಜ್ಕುಮಾರ್ ಹಿರಾನಿಯನ್ನು ಅಭಿನಂದಿಸಲೇ ಬೇಕು ಎಂದು ವಿಧು ಹಾಡಿ ಹೊಗಳಿದ್ದಾರೆ.
ಮೊದಲು ಮೂರನೆಯ ಭಾಗದಲ್ಲಿ ಅಮೀರ್ ಖಾನ್ ಹಾಗೂ ಶರ್ಮನ್ ಜೋಷಿ ಮುನ್ನಾ ಮತ್ತು ಸರ್ಕೀಟ್ ಪಾತ್ರಗಳನ್ನು ನಿರ್ವಹಿಸಲಿದ್ದಾರೆ ಎಂಬ ಗಾಳಿ ಸುದ್ದಿ ಹರಡಿತ್ತು. ನಂತರ ಮೂರನೆಯ ಭಾಗದ ಪ್ರೊಜೆಕ್ಟನ್ನು ಕೈ ಬಿಡಲಾಗಿದೆ ಎಂದೂ ಹೇಳಲಾಗಿತ್ತು. ಇವೆರಡೂ ಮಾತುಗಳೂ ಸುಳ್ಳು.
ನಾವು ಕಳೆದ ನಾಲ್ಕು ವರ್ಷಗಳಿಂದ ಒಂದು ಉತ್ತಮ ಸ್ಕ್ರಿಪ್ಟ್ ರೂಪಿಸಲು ಪ್ರಯತ್ನ ಪಡುತ್ತಿದ್ದೇವೆ. ಸ್ಕ್ರಿಪ್ಟ್ ರೂಪಿಸುವುದು ಸುಲಭವಾಗಿರಬಹುದು. ಆದರೆ ಅದನ್ನು ಉತ್ತಮಗೊಳಿಸುವುದು ಪ್ರಯಾಸದ ಕೆಲಸ.
ಇನ್ನೊಂದೆರಡು ತಿಂಗಳುಗಳಲ್ಲಿ ಈ ಕೆಲಸ ಪೂರ್ಣಗೊಳ್ಳಲಿದೆ. ಈಗ ಮುನ್ನಾ ಹಾಗೂ ಸರ್ಕೀಟ್ ಪಾತ್ರಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಅವನ್ನು ಮತ್ತೆ ಸಂಜು ಹಾಗೂ ಅರ್ಷದ್ ವಾರ್ಸಿಯೇ ನಿಭಾಯಿಸಲಿದ್ದಾರೆ ಎಂದೂ ಹಿರಾನಿ ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.