ಮೈಸೂರು: `ಪೆಟ್ರೊಲ್ ಬಂಕ್, ಗ್ಯಾಸ್ ಏಜೆನ್ಸಿ, ಸೀಮೆಎಣ್ಣೆ ಏಜೆನ್ಸಿ ಹಾಗೂ ಮದ್ಯದಂಗಡಿಗಳನ್ನು ತೆರೆಯಲು ಸರ್ಕಾರ ದಲಿತರಿಗೆ ಮೀಸಲು ನಿಗದಿಪಡಿಸಬೇಕು' ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.

`ಸಂಪೂರ್ಣ ಮದ್ಯ ನಿಷೇಧ ಜಾರಿಗೊಳಿಸಬೇಕು ಎಂಬುದು ಸಮಿತಿಯ ನಿಲುವು. ಅಗ್ಗದ ಮದ್ಯ, ತುಟ್ಟಿ ಮದ್ಯ -ಎರಡನ್ನೂ ನಾವೂ ವಿರೋಧಿಸುತ್ತೇವೆ. ಆದರೆ, ಸರ್ಕಾರಕ್ಕೆ ಅಬಕಾರಿಯಿಂದ ಹೆಚ್ಚು ಆದಾಯ ಬರುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಚೆಗೆ ಸ್ಪಷ್ಟನೆ ನೀಡಿದ್ದಾರೆ.

ಇದರಿಂದ ಸಂಪೂರ್ಣ ಮದ್ಯ ನಿಷೇಧ ಅನುಮಾನ. ಹೀಗಾಗಿ, ಮದ್ಯದಂಗಡಿ ತೆರೆಯಲು ದಲಿತರಿಗೆ ಆದ್ಯತೆಯ ಮೇಲೆ ರಹದಾರಿ ನೀಡಬೇಕು' ಎಂದು ಗುರುವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ದೇವಗಳ್ಳಿ ಸೋಮಶೇಖರ್ ಸ್ಪಷ್ಟಪಡಿಸಿದರು.

`ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು. ಸಹಕಾರಿ ಕ್ಷೇತ್ರದಲ್ಲಿ ಮೀಸಲಾತಿ ನಿಗದಿಪಡಿಸಿ ದಲಿತರಿಗೆ ಅವಕಾಶ ಕಲ್ಪಿಸಬೇಕು. ಲೋಕೋಪಯೋಗಿ, ನೀರಾವರಿ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಎಲ್ಲ ಇಲಾಖೆಯ ಗುತ್ತಿಗೆ ಕಾಮಗಾರಿಗಳಲ್ಲಿ ಶೇ 25ರಷ್ಟನ್ನು ದಲಿತರಿಗೆ ನೀಡಬೇಕು' ಎಂದರು.
`ಸಮಾನ ಶಿಕ್ಷಣ ಜಾರಿಗೊಳಿಸಿ, ಕನಿಷ್ಠ 100 ವಸತಿಶಾಲೆ ತೆರೆಯಬೇಕು ಎಂಬ ೀಡಿಕೆಯನ್ನು ಚುನಾವಣೆ ಪೂರ್ವದಲ್ಲಿ ನಡೆದ ಸಮಾಲೋಚನೆ ಯಲ್ಲಿ ಸಿದ್ದರಾಮಯ್ಯ ಅವರ ಮುಂದೆ ಇಡಲಾಗಿತ್ತು. ದಲಿತ ಸಮುದಾಯದ ಹಿತದೃಷ್ಟಿಯಿಂದ ಅವುಗಳನ್ನು ಈಡೇರಿಸುವಂತೆ ಈಚೆಗೆ ಮುಖ್ಯಮಂತ್ರಿ ಯನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ' ಎಂದು ತಿಳಿಸಿದರು.

ಜಿಲ್ಲಾ ಖಜಾಂಚಿ ಮಲ್ಲಹಳ್ಳಿ ನಾರಾಯಣ, ನಗರ ಸಂಚಾಲಕ ಬೆಲವತ್ತ ರಾಮಚಂದ್ರ ಎಂ. ರೇವಣ್ಣ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.