ಶನಿವಾರ, ಏಪ್ರಿಲ್ 17, 2021
30 °C

ಮಧುಮೇಹ: 10 ವರ್ಷದ ಮೊದಲೇ ಭವಿಷ್ಯ ಸಾಧ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ರಕ್ತದಲ್ಲಿರುವ ಸಣ್ಣ ಕಣಗಳ ಮಟ್ಟವನ್ನು ಅಳೆಯುವ ಪರೀಕ್ಷೆಯಿಂದ ಮಧುಮೇಹ ಕಾಯಿಲೆ ಕಾಣಿಸಿಕೊಳ್ಳುವುದಕ್ಕೆ ಹತ್ತು ವರ್ಷ ಮೊದಲೇ ಈ ಕಾಯಿಲೆ ಬರುವ ಬಗ್ಗೆ ಭವಿಷ್ಯ ನುಡಿಯುವುದು ಸಾಧ್ಯವಿದೆ ಎಂದು ಮೆಸಾಚುಸೆಟ್ಸ್ ಜನರಲ್ ಆಸ್ಪತ್ರೆಯ ವಿಜ್ಞಾನಿಗಳ ತಂಡ ಹೇಳಿಕೊಂಡಿದೆ.ರಕ್ತ ಪರೀಕ್ಷೆ ವೇಳೆ ಐದು ಬಗೆಯ ಅಮೈನೊ ಆಮ್ಲಗಳಾದ ಐಸೊಲೆಸಿನ್, ಲ್ಯುಸಿನ್, ವಾಲಿನ್, ಟಿರೋಸಿನ್ ಮತ್ತು ಫೆನಿಲಲನೈನ್‌ಗಳು ರಕ್ತದಲ್ಲಿ ದೊಡ್ಡ ಪ್ರಮಾಣದಲ್ಲಿ ಕಂಡುಬಂದರೆ ಅಂತಹ ವ್ಯಕ್ತಿಗಳಿಗೆ 10 ವರ್ಷದಲ್ಲಿ ಟೈಪ್ 2 ರೀತಿಯ ಮಧುಮೇಹ ಕಾಯಿಲೆ ಬರುವ ಸಾಧ್ಯತೆ ಅಧಿಕ ಇರುತ್ತದೆ ಎಂದು ಈ ತಂಡ ಕಂಡುಕೊಂಡಿದ್ದನ್ನು ಉಲ್ಲೇಖಿಸಿ ’ನೇಚರ್ ಮೆಡಿಸಿನ್’ ನಿಯತಕಾಲಿಕ ವರದಿ ಮಾಡಿದೆ.

 

ಅಮೈನೊ ಆಮ್ಲಗಳು ಚಯಾಪಚಯ ಕ್ರಿಯೆಯ ಮೇಲೆ ಪ್ರಭಾವ ಬೀರುತ್ತವೆ. ಈ ಐದು ಅಮೈನೊ ಆಮ್ಲಗಳು ಟೈಪ್ 2 ಮಧುಮೇಹ ವೃದ್ಧಿಯಲ್ಲಿ ಪಾತ್ರ ವಹಿಸಿರುವುದು ಗೊತ್ತಾಗಿದೆ.  ಒಟ್ಟು 2,422 ಆರೋಗ್ಯವಂತ ವ್ಯಕ್ತಿಗಳ ಮೇಲೆ 12 ವರ್ಷಗಳ ಕಾಲ ಪರೀಕ್ಷೆ ನಡೆಸಲಾಗಿತ್ತು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.