ನ್ಯೂಯಾರ್ಕ್ನ ಬೀದಿಗಳಲ್ಲಿ ತಮ್ಮಿಷ್ಟದ ಜೋಳ ಕೊಂಡು, ಹಳೆ ಕಾಲದ ದುಬಾರಿ ಒಡವೆಗಳನ್ನು ಚೌಕಾಶಿ ಬೆಲೆಗೆ ಖರೀದಿಸಿ, ಅಮಿತಾಬ್ ಬಚ್ಚನ್ ಅಭಿನಯದ `ಗ್ರೇಟ್ ಗ್ಯಾಟ್ಸ್ಬೈ' ಸಿನಿಮಾ ನೋಡಿದ ಮನೀಷಾ ಕೊಯಿರಾಲಾ ನಿಧಾನವಾಗಿ ಸಹಜ ಬದುಕಿಗೆ ಮರಳುತ್ತಿದ್ದಾರೆ. ಹಾಗೆಂದು ಅವರೇ ಟ್ವಿಟ್ಟರ್ನಲ್ಲಿ ಹೇಳಿಕೊಂಡಿದ್ದಾರೆ.

ನಿತ್ಯದ ಸಣ್ಣ ಪುಟ್ಟ ಖುಷಿಗಳನ್ನೂ ಅವರು ಟ್ವೀಟ್ ಮಾಡುತ್ತಿದ್ದು, ಕ್ಯಾನ್ಸರ್ ಮೀರಿದ ಮೇಲೆ ಬದುಕು ತುಂಬಾ ಹೊಸತರಂತೆ ಕಾಣುತ್ತಿದೆ ಎಂದಿದ್ದಾರೆ. ರಾಮ್ಗೋಪಾಲ್ ವರ್ಮಾ ನಿರ್ದೇಶನದ `ಭೂತ್ ರಿಟರ್ನ್ಸ್' ಹಿಂದಿ ಚಿತ್ರದ ನಂತರ ಅವರು ಮತ್ತೆ ಅಭಿನಯಿಸಲು ಬಣ್ಣ ಹಚ್ಚಿಲ್ಲ. 42 ವರ್ಷದ ಮನೀಷಾ ಅಂಡಾಶಯಕ್ಕೆ ಸಂಬಂಧಿಸಿದ ಕ್ಯಾನ್ಸರ್ಗೆ ಚಿಕಿತ್ಸೆ ಪಡೆದಿದ್ದರು. ಕಳೆದ ತಿಂಗಳು ತಾವು ಸಂಪೂರ್ಣ ಗುಣಮುಖರಾಗಿರುವುದಾಗಿ ತಿಳಿಸಿದ್ದರು. ಮತ್ತೆ ಸಿನಿಮಾರಂಗಕ್ಕೆ ಮರಳುವ ಬಯಕೆ ಇದೆ ಎಂದಿರುವ ಅವರು ಆ ಗಳಿಗೆ ಯಾವಾಗ ಎಂಬುದನ್ನು ಮಾತ್ರ ಖಾತರಿಪಡಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.