ಬುಧವಾರ, ಮೇ 12, 2021
18 °C

ಮನೆಗೆ ಆಕಸ್ಮಿಕ ಬೆಂಕಿ; ಲಕ್ಷಾಂತರ ರೂಪಾಯಿ ನಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಳಗಿ: ಆಕಸ್ಮಿಕ ಬೆಂಕಿ ತಗುಲಿ ಸಾಗವಾನಿಯ ಕಟ್ಟಿಗೆ ಬಳಸಿದ್ದ ಹಳೆಯ ಮನೆ ಸುಟ್ಟು ಭಸ್ಮವಾದ ಪ್ರಕರಣ ಬುಧವಾರ ಪಟ್ಟಣದ ಹೃದಯ ಭಾಗದಲ್ಲಿ ನಡೆದಿದೆ.ಇಲ್ಲಿನ ಕಂಬಾರ ಗಲ್ಲಿಯಲ್ಲಿ ಮಲ್ಲಿಕಾರ್ಜುನ ದೇವಸ್ಥಾನದ ಬಳಿ ಇರುವ ಡಂಗಿಯವರ ಮನೆಯೇ ಬೆಂಕಿಗೆ ಆಹುತಿಯಾಗಿದೆ. ಮನೆಯೊಡತಿ ನಿರ್ಮಲಾ ಡಂಗಿ, ತಾಲ್ಲೂಕು ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಉದ್ಯೋಗಿ. ಮುಂಜಾನೆ ಮನೆಗೆಲಸ ಮುಗಿಸಬೇಕು.ಮಕ್ಕಳಿಬ್ಬರನ್ನೂ ಸಿದ್ಧಪಡಿಸಿ ಶಾಲೆಗೆ ಕಳಿಸಿ ತಾವೂ ಬ್ಯಾಂಕ್‌ಗೆ ತೆರಳಬೇಕು. ಧಾವಂತದಲ್ಲಿ ಮಕ್ಕಳನ್ನು ಶಾಲೆಗೆ ಕಳಿಸಿದ ನಂತರ  ಸ್ನಾನಕ್ಕೆ ನೀರು ಕಾಯಿಸಲು ಹಚ್ಚಿದ ಕಟ್ಟಿಗೆ ಒಲೆ ನಂದಿಸಿದ್ದಾರೆ. ಮನೆಗೆ ಬೀಗ ಹಾಕಿ ಹೋಗಿದ್ದಾರೆ. ಒಲೆ ಪೂರ್ಣ ನಂದದೆ  ಅಡುಗೆ ಮನೆಯಲ್ಲಿದ್ದ ಕಟ್ಟಿಗೆಗೆ ಕಿಡಿ ಸಿಡಿದು ನೋಡ ನೋಡುವುದರೊಳಗಾಗಿ ಬೆಂಕಿಯ ಕೆನ್ನಾಲಗೆಗಳು ಮನೆ ಆವರಿಸಿಕೊಂಡು ಬಿಟ್ಟಿವೆ.ಪಕ್ಕದ ಮನೆಯವರು ಮನೆಯಿಂದ ಹೊರಬರುತ್ತಿದ್ದ ಹೊಗೆ ಕಂಡು ಅಗ್ನಿಶಾಮಕ ದಳದವರನ್ನು ಕರೆಸಿದ್ದಾರೆ. ಓಣಿಯ ಯುವ ಜನರು ನೀರು ಉಗ್ಗಿ ನಂದಿಸಲು ಯತ್ನಿಸಿದ್ದಾರೆ. ಅಗ್ನಿಶಾಮಕ ದಳದವರು ಬಂದ ಮೇಲೆಯೇ ಬೆಂಕಿ ಹತೋಟಿಗೆ ಬಂದಿದೆ. ಬೆಂಕಿ ತಗುಲಿದ ಮನೆಯ ಭಾಗ ಕೆಡವಿದ್ದರಿಂದ ಹೊರಾವರಣದ ಪಡಸಾಲೆ ಹಾಗೂ ಇನ್ನಿತರ ಭಾಗ, ಪಕ್ಕದ ಮನೆಗಳು ಉಳಿದುಕೊಂಡು ಹೆಚ್ಚಿನ ಅನಾಹುತವಾಗುವುದು ತಪ್ಪಿದಂತಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.