ಭಾನುವಾರ, ಏಪ್ರಿಲ್ 11, 2021
31 °C

ಮಮತಾ ಬ್ಯಾನರ್ಜಿಗೆ ಕಟ್ಜು ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ (ಐಎಎನ್‌ಎಸ್): ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಸಹನೆಯ ಸ್ವಭಾವ ಹೊಂದಿದ್ದು, ತಿಕ್ಕಲುತನದಿಂದ ವರ್ತಿಸುತ್ತಿದ್ದಾರೆ. ಅವರು ತಮ್ಮ ಸ್ವಭಾವ ಬದಲಿಸಿಕೊಳ್ಳದಿದ್ದಲ್ಲಿ ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎಂದು ಭಾರತೀಯ ಪತ್ರಿಕಾ ಮಂಡಳಿ ಅಧ್ಯಕ್ಷ ಮಾರ್ಕಂಡೇಯ ಕಟ್ಜು ಎಚ್ಚರಿಸಿದ್ದಾರೆ.

ಮಮತಾ ಅವರ ವ್ಯಂಗ್ಯಚಿತ್ರಗಳನ್ನು ಎಲ್ಲರಿಗೂ ಕಳುಹಿಸಿದ್ದ ಜಾಧವ್‌ಪುರ ವಿಶ್ವವಿದ್ಯಾಲಯದ ಪ್ರೊ.ಅಂಬಿಕೇಶ್ ಮಹಾಪಾತ್ರ ಹಾಗೂ ಮಮತಾ ಸರ್ಕಾರದ ನೀತಿಯನ್ನು ಪ್ರಶ್ನಿಸಿದ್ದ ರೈತ ಶಿಲಾದಿತ್ಯ ಚೌಧರಿ ಅವರನ್ನು ಬಂಧಿಸಿದ್ದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಟ್ಜು ಮಮತಾ ಅವರಿಗೆ ಪತ್ರ ಬರೆದಿದ್ದಾರೆ.

ಕೋಲ್ಕತ್ತದ ಪಾರ್ಕ್‌ಸ್ಟ್ರೀಟ್‌ನಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣ ಭೇದಿಸಿದ್ದ ಜಂಟಿ ಪೊಲೀಸ್ ಆಯುಕ್ತೆ ದಮಯಂತಿ ಸೇನ್ ಅವರನ್ನು ಮತ್ತೆ ಹಳೆಯ ಹುದ್ದೆಗೆ ನೇಮಕ ಮಾಡುವಂತೆ ಸಹ ಕಟ್ಜು ಒತ್ತಾಯಿಸಿದ್ದಾರೆ. `ನಾವೆಲ್ಲ ತಪ್ಪು ಮಾಡುತ್ತೇವೆ. ಆದರೆ, ಕ್ಷಮೆ ಕೇಳುವವರೇ ಸಜ್ಜನರು. ಮಹಾಪಾತ್ರ ಮತ್ತು ಚೌಧರಿ ವಿರುದ್ಧ ಕಾನೂನು ಕ್ರಮ ಜರುಗಿಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಿ. ಈ ಇಬ್ಬರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ವಾಪಸು ಪಡೆದು ಕ್ಷಮೆ ಕೇಳಿ' ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.