ಮಂಗಳವಾರ, ಮೇ 11, 2021
20 °C

ಮರದಿಂದ ಬಿದ್ದು ಯುವಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶನಿವಾರ ಸಂತೆ: ಹಲಸಿನ ಹಣ್ಣು ಕೊಯ್ಯಲು ಮರ ಹತ್ತಿದ್ದ ಯುವಕ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಸಮೀಪದ ಶಿವಪುರ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.ದೊಡ್ಡಕೊಡ್ಲಿ ಗ್ರಾಮದ ಡಿ.ಕೆ. ದಯಾನಂದ (24) ಮೃತಪಟ್ಟವ. ಆಟೊರಿಕ್ಷಾ ಚಾಲಕನಾಗಿದ್ದ ಈತ ಬುಧವಾರ ಕೆಲಸಕ್ಕೆ ರಜೆ ಹಾಕಿ, ಅಬ್ಬಾಸ್ ಎನ್ನುವವರ ತೋಟದಲ್ಲಿ ಹಲಸಿನ ಹಣ್ಣುಗಳನ್ನು ಕೀಳಲು ಸ್ನೇಹಿತರೊಂದಿಗೆ ಹೋಗಿದ್ದ. ಮಳೆಗಾಲವಾದ್ದರಿಂದ ಮರ ಜಾರುತ್ತಿತ್ತು. ದಯಾನಂದ ಮರ ಹತ್ತಿದಾಗ ಕಾಲು ಜಾರಿ ಬಿದ್ದ ಎನ್ನಲಾಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಈತನನ್ನು ಸ್ನೇಹಿತರು ಕೊಡ್ಲಿಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದಾಗ, ವೈದ್ಯರು ತಪಾಸಣೆ ನಡೆಸಿ ಈತ ಮೃತಪಟ್ಟಿದ್ದಾನೆ ಎಂದು ಘೋಷಿಸಿದರು. ಮೃತನ ಅಣ್ಣ ಡಿ.ಕೆ.ಹರೀಶ್ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಗಾಯಾಳು ಸಾವು: ಬೆಂಕಿ ಆಕಸ್ಮಿಕದಲ್ಲಿ ಸುಟ್ಟ ಗಾಯಗಳಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಮೀಪದ ಬೆಂಬಳೂರು ಗ್ರಾಮದ ಯುವತಿ ಮಂಗಳವಾರ ಮೃತಪಟ್ಟಿದ್ದಾಳೆ.ಬೆಂಬಳೂರು ಗ್ರಾಮದ ಬಿ.ಸಿ. ಮಂಜುನಾಥ್ ಅವರ ಪುತ್ರಿ ಮಧು (18) ಮೃತಪಟ್ಟವಳು. ಮೇ 25ರಂದು ಅಡುಗೆ ಮನೆಯಲ್ಲಿ ಸ್ಟೌ ಸಿಡಿದು ಈಕೆಗೆ ಸುಟ್ಟ ಗಾಯಗಳಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.