ಶುಕ್ರವಾರ, ಜೂನ್ 18, 2021
21 °C

ಮರದ ದಿಮ್ಮಿಗಳಿಗೆ ಪೂಜೆ: ರಥ ಕಟ್ಟುವ ಕಾರ್ಯ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ಮಾರಿಕಾಂಬಾ ದೇವಿ ಜಾತ್ರೆಯ ಪೂರ್ವ ಧಾರ್ಮಿಕ ಆಚರಣೆಯ ಭಾಗವಾದ ರಥ ಕಟ್ಟಲು ತರುವ ಮರದ ದಿಮ್ಮಿಗಳನ್ನು ಪೂಜಿಸುವ ವಿಧಿ–ವಿಧಾನ ಮಂಗಳವಾರ ಜರುಗಿತು. ಮರದ ದಿಮ್ಮಿಗಳನ್ನು ಹೊತ್ತು ತಂದ ಎತ್ತಿನ ಗಾಡಿಗಳನ್ನು ಕೋಟೆಕೆರೆಯಿಂದ ಮಂಗಲವಾದ್ಯಗಳೊಂದಿಗೆ ದೇವಾಲಯಕ್ಕೆ ಬರಮಾಡಿಕೊಂಡು ಅರ್ಚಕರು ಪೂಜೆ ಸಲ್ಲಿಸಿದರು.ಜಾತ್ರೆಯ ಪೂರ್ವಭಾವಿ ಯಾಗಿ ನಡೆಯುವ ರಥ ನಿರ್ಮಾಣಕ್ಕೆ ಮರ ಕಡಿಯುವ ವಿಧಿ ಫೆ. 28ರಂದು ಜರುಗಿದೆ. ಅಂದು ಕಡಿದ ಮರದ ದಿಮ್ಮಿಗಳನ್ನು ಮೆರವಣಿಗೆಯಲ್ಲಿ ಮಂಗಳವಾರ ದೇವಾಲಯಕ್ಕೆ ತರಲಾಯಿತು. ಬಾಬುದಾರ ಆಚಾರಿಗಳು, ಬಡಿಗೇರರು ಹಾಗೂ ಉಪ್ಪಾರರು ಒಟ್ಟಾಗಿ ಸೇರಿ ಇದೇ ಮರದ ದಿಮ್ಮಿಗಳಿಂದ ರಥ ನಿರ್ಮಾಣ ಕೆಲಸ ಪ್ರಾರಂಭಿಸುತ್ತಾರೆ. ಈ ರಥದಲ್ಲಿ ದೇವಿ ಆಸೀನಳಾಗಿ ದೇವಾಲಯದಿಂದ ಮೆರವಣಿಗೆಯಲ್ಲಿ ಜಾತ್ರಾ ಗದ್ದುಗೆಗೆ ತೆರಳುತ್ತಾಳೆ. ಜಾತ್ರೆಗೆ ಏಳು ದಿನ ಮೊದಲು ರಥ ನಿರ್ಮಾಣ ಕಾರ್ಯ ಪ್ರಾರಂಭಿಸುವುದು ಹಿಂದಿನಿಂದ ರೂಢಿಸಿಕೊಂಡು ಬಂದಿರುವ ಸಂಪ್ರದಾಯ.ಜಾತ್ರೆಯ ಸಿದ್ಧತೆ ನಗರದಲ್ಲಿ ಭರದಿಂದ ಸಾಗಿದ್ದು, ನಗರದಲ್ಲಿ ಜಾತ್ರೆಯ ವಾತಾವರಣ ಮೂಡಿದೆ. ಜಾತ್ರೆಯ ಹಿನ್ನೆಲೆಯಲ್ಲಿ ವಾರದ ಸಂತೆ ಮಂಗಳವಾರ ವಿಕಾಸಾಶ್ರಮ ಮೈದಾನದಲ್ಲಿ ನಡೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.