ಅಪ್ಪಿಕೋ ಚಳವಳಿ ಕಂಡವರಿಗೆ ಇದು ಏನೋ ಒಂಥರಾ ತಮಾಷೆ ಅನ್ನಿಸಬಹುದು. ಮೊನ್ನೆ ನಗರದ ಕಬ್ಬನ್ ಪಾರ್ಕ್ನ ಬಾಲಭವನದಲ್ಲಿ ಮಕ್ಕಳಿಂದ ಹಿಡಿದು ಯುವಕರವರೆಗೆ ಕೆಲವರು ಪರಿಸರ ಗೀತೆಗಳನ್ನು ಹಾಡಿದರು. ಇನ್ನು ಕೆಲವರು ಮರಗಳನ್ನು ತಬ್ಬಿದರು. ಮುಗ್ಧ ಕಂದಮ್ಮ ‘ಅದ್ಯಾವ ಮರವಮ್ಮಾ?’ ಎಂದು ಮುದ್ದುಮುದ್ದಾಗಿ ಕೇಳಿತು. ಪರಿಸರ ಕಾಳಜಿ ಎಂಬುದು ‘ಮೀಡಿಯೋಕರ್’ ಸಂಗತಿ ಆಗುತ್ತಿದೆಯೇ ಎಂಬ ಚರ್ಚೆ ಒಂದು ಕಡೆ ಇದೆ.

ಇನ್ನೊಂದು ಕಡೆ ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳು ಹೀಗೆ ಅವಿರತವಾಗಿ ನಡೆಯುತ್ತಲೇ ಇವೆ. ಅಂದಹಾಗೆ, ಈ ಕಾರ್ಯಕ್ರಮದ ಹೆಸರು ‘ಟ್ರೀ ಫೆಸ್ಟಿವಲ್’. ನಾವು ‘ಮರದ ಹಬ್ಬ’ ಎಂದು ಅನುವಾದಿಸಿಕೊಂಡು ಖುಷಿಪಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.