ಅಮೆರಿಕದ ಬಾಹ್ಯಾಕಾಶ ಕಂಪೆನಿ ಸ್ಪೇಸ್ ಎಕ್ಸ್ ಎರಡು ವಾರಗಳ ಹಿಂದೆ ರಾಕೆಟ್ ವಿಜ್ಞಾನದಲ್ಲಿ ಮಹತ್ತರ ಸಾಧನೆ ಮಾಡಿತು. ಈ ಕಂಪೆನಿಯ ಫಾಲ್ಕನ್–9 ಹೆಸರಿನ ರಾಕೆಟ್, ಉಪಗ್ರಹಗಳನ್ನು ಅಂತರಿಕ್ಷಕ್ಕೆ ಕಳುಹಿಸಿ ಯಶಸ್ವಿಯಾಗಿ ಮರಳಿದೆ. ಹೀಗೆ ಸುರಕ್ಷಿತವಾಗಿ ಭೂಮಿಗೆ ಮರಳಿದ ಮೊದಲ ರಾಕೆಟ್ ಎಂಬ ಹೆಗ್ಗಳಿಕೆ ಇದರದ್ದು.

ಫಾಲ್ಕನ್–9 ರಾಕೆಟ್ 11 ಉಪಗ್ರಹಗಳನ್ನು ಆಂತರಿಕ್ಷಕ್ಕೆ ಸೇರಿಸಿ ವಾಪಸ್ ಆಗಿದೆ. ಸುಮಾರು 200 ಕಿ.ಮೀ. ಎತ್ತರ ಸಂಚರಿಸಿದ್ದ ರಾಕೆಟ್, ಡಿಸೆಂಬರ್ 21ರ ರಾತ್ರಿ ಫ್ಲಾರಿಡಾದ ಕೇಪ್ ಕೆನವರಲ್ನಲ್ಲಿ ಸುರಕ್ಷಿತವಾಗಿ ಇಳಿದಿದೆ. ರಾಕೆಟ್ ಇಳಿಯಲು ಸಮುದ್ರದಲ್ಲಿ ‘ತೇಲುವ ನಿಲ್ದಾಣ’ ಸಿದ್ಧಪಡಿಸಿಡಲಾಗಿತ್ತು.

ಸ್ಪೇಸ್ ಎಕ್ಸ್ ಕಳೆದ ಕೆಲ ತಿಂಗಳುಗಳಿಂದ ಇದಕ್ಕಾಗಿ ಪ್ರಯತ್ನಿಸುತ್ತಲೇ ಇತ್ತು. ಈ ಹಿಂದೆ ಮಾಡಿದ್ದ ಪ್ರಯತ್ನಗಳು ವಿಫಲವಾಗಿದ್ದವು. ರಾಕೆಟ್ ‘ಲ್ಯಾಂಡ್’ ಆದ ಬಳಿಕ ವಾಲಿಕೊಂಡು ಸಮುದ್ರಕ್ಕೆ ಬೀಳುತ್ತಿತ್ತು. ಕೆಲವೊಮ್ಮೆ ನಿಲ್ದಾಣಕ್ಕೆ ರಭಸದಿಂದ ಅಪ್ಪಳಿಸುತ್ತಿತ್ತು.

ಈ ಬಾರಿ ರಾಕೆಟ್ಅನ್ನು ಯಶಸ್ವಿಯಾಗಿ ಇಳಿಸಿ ತನ್ನ ದೀರ್ಘಕಾಲದ ಕನಸನ್ನು ನನಸಾಗಿಸಿಕೊಂಡಿದೆ. ಈ ರಾಕೆಟ್ ಅನ್ನು ಮರುಬಳಕೆ ಮಾಡಲು ಸಾಧ್ಯವೇ ಎಂಬುದರ ಬಗ್ಗೆ ಕಂಪೆನಿ ಹೆಚ್ಚಿನ ಮಾಹಿತಿ ನೀಡಿಲ್ಲ. ಒಂದು ವೇಳೆ ಇದರ ಮರುಬಳಕೆ ಯಶಸ್ವಿಯಾದರೆ ರಾಕೆಟ್ ಉದ್ಯಮದಲ್ಲಿ ಭಾರಿ ಬದಲಾವಣೆ ನಿರೀಕ್ಷಿಸಬಹುದು.

ಕ್ರಾಂತಿಕಾರಿ ಸಾಧನೆ
ಸ್ಪೇಸ್ ಎಕ್ಸ್ ಮಾಡಿರುವ ಸಾಧನೆಯನ್ನು ರಾಕೆಟ್ ಉದ್ಯಮ ಕ್ಷೇತ್ರದಲ್ಲಿ ನಡೆದ ‘ಕ್ರಾಂತಿಕಾರಿ ಹೆಜ್ಜೆ’ ಎಂದು ಬಣ್ಣಿಸಲಾಗುತ್ತಿದೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಕೂಡಾ ಇದನ್ನು ಕೊಂಡಾಗಿದೆ.

‘ನಾಸಾ’ ತನ್ನ ಉಪಗ್ರಹಗಳನ್ನು ಉಡಾವಣೆ ಮಾಡಲು ಸ್ಪೇಸ್ ಎಕ್ಸ್ ಕಂಪೆನಿ ಜೊತೆ 1.6 ಶತಕೋಟಿ ಡಾಲರ್ (ಅಂದಾಜು ₹ 10 ಸಾವಿರ ಕೋಟಿ) ಮೊತ್ತದ ಒಪ್ಪಂದ ಮಾಡಿಕೊಂಡಿದೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತಂಗಿರುವ ಗಗನಯಾತ್ರಿಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ಕೆಲಸವನ್ನು ನಾಸಾ ಈ ಕಂಪೆನಿಗೆ ವಹಿಸಿದೆ.

ಉಪಗ್ರಹಗಳನ್ನು ಉಡಾವಣೆ ಮಾಡಲು ಬಳಸುವ ರಾಕೆಟ್ಗಳನ್ನು ಮರುಬಳಕೆ ಮಾಡಬೇಕು ಎನ್ನುವ ಕನಸನ್ನು ವಿಜ್ಞಾನಿಗಳು ಬಹಳ ಹಿಂದೆಯೇ ಇಟ್ಟುಕೊಂಡಿದ್ದರು. ಆದರೆ ಇಲ್ಲಿಯವರೆಗೆ ಇದು ಸಾಧ್ಯವಾಗಿರಲಿಲ್ಲ.

ಬಾಹ್ಯಾಕಾಶಕ್ಕೆ ಏನಾದರೂ ಕೊಂಡೊಯ್ಯಬೇಕು ಎಂದೆನಿಸಿದರೆ ಪ್ರತಿ ಬಾರಿ ಹೊಸ ರಾಕೆಟ್ನ ನಿರ್ಮಾಣದ ಅಗತ್ಯವಿತ್ತು. ರಾಕೆಟ್ ನಿರ್ಮಾಣಕ್ಕೆ ಭಾರಿ ಹಣ ಖರ್ಚಾಗುತ್ತದೆ. ಹೀಗೆ ಉಪಗ್ರಹಗಳನ್ನು ಅಂತರಿಕ್ಷಕ್ಕೆ ಕಳುಹಿಸಿದ ಬಳಿಕ ರಾಕೆಟ್ಗಳು ಸಮುದ್ರಕ್ಕೆ ಬಿದ್ದು ನಾಶವಾಗುತ್ತಿದ್ದವು. ಸಮುದ್ರದಿಂದ ಮೇಲಕ್ಕೆತ್ತಿದರೂ ಅವುಗಳ ಮರುಬಳಕೆ ಅಸಾಧ್ಯವಾಗಿತ್ತು.

ಎಚ್ಚರಿಕೆ ಅಗತ್ಯ
ಸ್ಪೇಸ್ ಎಕ್ಸ್ ಮಾಡಿದ ಸಾಧನೆಯನ್ನು ರಾಕೆಟ್ ನಿರ್ಮಾಣ ಕಂಪೆನಿಗಳು ಕುತೂಹಲದಿಂದ ನೋಡುತ್ತಿವೆ. ಮರುಬಳಕೆ ಸಾಧ್ಯವಾದರೆ ರಾಕೆಟ್ ನಿರ್ಮಾಣದ ವೆಚ್ಚ ಕಡಿಮೆಯಾಗಲಿದೆ ಎನ್ನಲಾಗುತ್ತಿದೆ. ಆದರೆ, ಮತ್ತೆ ಬಳಸುವಾಗ ಎಚ್ಚರಿಕೆ ಅಗತ್ಯ ಎಂಬುದು ತಜ್ಞರ ಹೇಳಿಕೆ.

ಭೂಮಿಗೆ ಹಿಂದಿರುಗಿದ ರಾಕೆಟ್ ಮತ್ತೆ ಹಾರಾಟ ನಡೆಸಲು ಸಮರ್ಥವೇ ಎಂಬುದನ್ನು ಖಚಿತಪಡಿಸಲು ಸಾಕಷ್ಟು ಪರೀಕ್ಷೆಗಳನ್ನು ನಡೆಸುವುದು ಅಗತ್ಯ.
ಫಾಲ್ಕನ್–9 ರಾಕೆಟ್ನ ಗಾತ್ರವು 14 ಮಹಡಿಗಳ ಕಟ್ಟಡದಷ್ಟು ಎತ್ತರ ಇದೆ. ರಾಕೆಟ್ನ ಹೊರಕವಚ ಹಾರಾಟದ ವೇಳೆ ತಾಪಮಾನದ ಏರಿಳಿತವನ್ನು ಅನುಭವಿಸಿತ್ತು. ವಾತಾವರಣದ ಗಾಳಿಯಿಂದ ಸಾಕಷ್ಟು ಒತ್ತಡ ಎದುರಿಸಿತ್ತು. ಇದರಿಂದ ರಾಕೆಟ್ನ ದೇಹಕ್ಕೆ ಸಾಕಷ್ಟು ಹೊಡೆತ ಬಿದ್ದಿರುತ್ತದೆ. ಆದ್ದರಿಂದ ಇನ್ನೊಂದು ಹಾರಾಟಕ್ಕೆ ಮುನ್ನ ದುರಸ್ತಿ ಅಗತ್ಯ.

ಎಂಜಿನ್ ರೀಫರ್ಬಿಷ್ (ನವೀಕರಿಸು) ಮಾಡುವುದು ವಿಪರೀತ ಖರ್ಚು ತಗಲುವ ಕೆಲಸ. ದುರಸ್ತಿ ಕಾರ್ಯಕ್ಕೆ ತುಂಬಾ ಸಮಯ ಹಿಡಿದರೆ ಫಾಲ್ಕನ್–9 ಬೇಗನೇ ಇನ್ನೊಮ್ಮೆ ಗಗನಕ್ಕೆ ನೆಗೆಯುವುದು ಕಷ್ಟ.

ಈಗ ವಾಪಸ್ ಬಂದಿರುವ ರಾಕೆಟ್ನ ಮರುಬಳಕೆ ಸಾಧ್ಯವಾಗದೆಯೂ ಇರಬಹುದು. ಆದರೆ, ಭೂಮಿಗೆ ಯಶಸ್ವಿಯಾಗಿ ಮರಳಿರುವ ಈ ರಾಕೆಟ್ ತಂತ್ರಜ್ಞರಿಗೆ ಇನ್ನಷ್ಟು ಪ್ರಯೋಗಗಳನ್ನು ನಡೆಸಲು ಅವಕಾಶ ಕಲ್ಪಿಸಿರುವುದಂತೂ ನಿಜ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.