ಮರಾಠಿಗರ ನೆಚ್ಚಿನ ‘ಪೂರ್ಣಬ್ರಹ್ಮ’

ನಗರದ ಮೊಟ್ಟ ಮೊದಲ ಅಪ್ಪಟ ಮಹಾರಾಷ್ಟ್ರ ಶೈಲಿಯ ರೆಸ್ಟೊರೆಂಟ್ ‘ಪೂರ್ಣಬ್ರಹ್ಮ’. 5,500 ಚದರ ಅಡಿ ವಿಸ್ತೀರ್ಣ ಹೊಂದಿರುವ ಪೂರ್ಣಬ್ರಹ್ಮ, ಮರಾಠಿ ಸಂಸ್ಕೃತಿ ಪ್ರಚುರದ ಜೊತೆಗೆ ಅಲ್ಲಿನ ಸಾಂಪ್ರದಾಯಿಕ ತಿನಿಸುಗಳನ್ನು ತನ್ನ ಗ್ರಾಹಕರಿಗೆ ಬಡಿಸುವ ಉದ್ದೇಶವನ್ನಿಟ್ಟುಕೊಂಡ ರೆಸ್ಟೊರೆಂಟ್.
ಮಹಾರಾಷ್ಟ್ರದ ಆಹಾರವು ಸಮತೋಲಿತ ಆಹಾರಕ್ಕೆ ಅತ್ಯುತ್ತಮ ಉದಾಹರಣೆ. ಮಸಾಲೆಗಳ ಸೂಕ್ತ ಮಿಶ್ರಣದೊಂದಿಗೆ ಉತ್ತಮ ಆರೋಗ್ಯಕ್ಕಾಗಿ ಈ ಆಹಾರ ಅತ್ಯಂತ ಜನಪ್ರಿಯ ಪಾಕ ಶೈಲಿಯಾಗಿದೆ ಎಂಬುದು ರೆಸ್ಟೊರೆಂಟ್ ಮಾಲೀಕರ ಅಭಿಪ್ರಾಯ.
‘ನಮ್ಮ ಬೆಂಗಳೂರು ಮತ್ತು ಸುತ್ತಮುತ್ತ ಮಹಾರಾಷ್ಟ್ರದ ಆಹಾರವನ್ನು ಬಯಸುವ ಜನರಿಂದ ಪೂರ್ಣ ಬ್ರಹ್ಮ ಪ್ರಭಾವಿತವಾಗಿದೆ.
ಮಹಾರಾಷ್ಟ್ರದ ಅಧಿಕೃತ ಆತಿಥ್ಯದ ಸವಿಯನ್ನು ಇದು ನೀಡುತ್ತಿದೆ. ಊದುಬತ್ತಿಯ ಸುವಾಸನೆ, ಮಂತ್ರಗಳ ಉಚ್ಚಾರಣೆ, ಬೆಳ್ಳಿ ಅಥವಾ ಲೋಹದ ಥಾಲಿ, ರಂಗೋಲಿಗಳು, ಆಹಾರಗಳ ನಡುವೆ ಸ್ವಾದ ಮಿಶ್ರಣವಾಗದೇ ಇರಲು ಕೇಸರಿ ಸುವಾಸನೆಯ ನೀರಲ್ಲಿ ಕೈ ತೊಳೆಯುವ ಅವಕಾಶ, ಮುಂತಾದವುಗಳು ಮಹಾರಾಷ್ಟ್ರದ ವಾತಾವರಣವನ್ನು ಜೀವಂತಗೊಳಿಸುತ್ತವೆ’ ಎನ್ನುತ್ತಾರೆ ಪೂರ್ಣ ಬ್ರಹ್ಮದ ಸಂಸ್ಥಾಪಕಿ ಜಯಂತಿ ಕಥಲೆ.
ವಿಳಾಸ: ಪೂರ್ಣಬ್ರಹ್ಮ ನಂಬರ್ 253, 17ನೇ ಅಡ್ಡ ರಸ್ತೆ, 19ನೇ ಮುಖ್ಯ ರಸ್ತೆ, ಎಚ್ಎಸ್ಆರ್ ಲೇಔಟ್ ಸೆಕ್ಟರ್ 4. ಸಮಯ: ಬೆಳಗ್ಗೆ 11ರಿಂದ ರಾತ್ರಿ 11ರವರೆಗೆ. ಮಾಹಿತಿಗೆ ಹಾಗೂ ಟೇಬಲ್ ಕಾಯ್ದಿರಿಸಲು: 080 6888 8911.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.