ಯಾದಗಿರಿ: ಈ ಬಾರಿಯ ಕಾರಹುಣ್ಣಿಮೆ ರೈತರ ಮುಖದಲ್ಲಿ ನಿರಾಸೆ ತಂದಿದೆ. ಮುಂಗಾರು ಮಳೆ ಇಲ್ಲದೇ ರೈತರು ಆತಂಕದಲ್ಲಿ ದಿನ ದೂಡುವಂತಾಗಿದೆ. ಇದುವರೆಗೆ ನಿಗದಿತ ಮಳೆಯಾಗದ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರ ಕಾರಹುಣ್ಣಿಮೆ ಸಂಭ್ರಮಕ್ಕೆ ಕಾರ್ಮೋಡ ಕವಿದಿದೆ.

ಕಾರಹುಣ್ಣಿಮೆಯಲ್ಲಿ ರೈತರು ಸಂತಸದಿಂದ ಮುಂಗಾರು ಬಿತ್ತನೆ ಮುಗಿಸುವುದು ವಾಡಿಕೆ. ಬೆಳೆ ಮೇಲೆಳುವ ಸಂದರ್ಭದಲ್ಲಿ ಹರ್ಷದಿಂದ ಕಾರಹುಣ್ಣಿಮೆ ಸ್ವಾಗತಿಸಿ, ಸಂಭ್ರಮದಿಂದ ವಿವಿಧ ಬಣ್ಣದ ಓಕುಳಿಗಳನ್ನು ಆಡುವುದರ ಜೊತೆಗೆ ಎತ್ತುಗಳನ್ನು ಸಿಂಗರಿಸಲು ಆರಂಭಿಸುತ್ತಾರೆ.

ಎತ್ತುಗಳ ಮೈತೊಳೆದು ಬಣ್ಣ ಬಣ್ಣದ ಸಿಂಗಾರದ ಗುಲ್ಲು, ಹಚ್ಚೆಗಳನ್ನು ಹಾಕಿ ಸಿಂಗಾರ ಮಾಡುತ್ತಿದ್ದ ರೈತರು, ಈ ಬಾರಿ ಶೃಂಗಾರ ಸಾಮಗ್ರಿಗಳನ್ನು ಖರೀದಿಸಲು ಮನಸ್ಸು ಮಾಡುತ್ತಿಲ್ಲ. ಬಾಡಿದ ಮುಖದಿಂದ ಆಗಸದತ್ತ ಮುಖ ಮಾಡಿ ಕುಳಿತಿಕೊಳ್ಳುವಂತಾಗಿದೆ.

ಯಾದಗಿರಿ ಹಾಗೂ ಸುತ್ತಲಿನ ಪ್ರಮುಖ ವ್ಯಾಪಾರಿ ಕೇಂದ್ರಗಳಲ್ಲಿ ಮಾರಾಟಕ್ಕಿಟ್ಟ ಎತ್ತುಗಳನ್ನು ಸಿಂಗರಿಸುವ ಗೊಂಡೆ, ದಾಂಡು, ಹಣೆಕಟ್ಟು, ಟೊಂಕಬಾರು, ಗೆಜ್ಜೆ, ಜಂಗು, ಹಣೆಬಾರು, ಚಿಣಿಚಿಣಿ, ಹಣಿ ಗೆಜ್ಜೆ, ಕಾಲ್ಗೆಜ್ಜೆ, ಶಂಖರಿ (ಶಂಖ ಹಣೆಕಟ್ಟು), ಜೂಲು, ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ಖರೀದಿಸಲು ರೈತರು ಬಾರದಿರುವುದರಿಂದ ಅಂಗಡಿಗಳು ಬಿಕೋ ಎನ್ನುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಮಳೆರಾಯನ ಅವಕೃಪೆಯಿಂದಾಗಿ ರೈತರಲ್ಲಿ ಆತಂಕ ಹೆಚ್ಚಿಸಿದೆ. ಇನ್ನು ಕೆಲವು ಭಾಗಗಳಲ್ಲಿ ಇದುವರೆಗೆ ಮಳೆರಾಯನ ದರ್ಶನವೇ ಇಲ್ಲದೇ ರೈತರು ಕಂಗಾಲಾಗಿದ್ದಾರೆ.

ಕಾರಹುಣ್ಣಿಮೆ ಹಬ್ಬಕ್ಕೆ ಇನ್ನೆರಡೇ ದಿನಗಳು ಬಾಕಿ ಇದ್ದು, ಗ್ರಾಮೀಣ ಭಾಗದಲ್ಲಿ ನಿರಾಸೆಯ ಕಾರ್ಮೋಡದ ಛಾಯೆ ಆವರಿಸಿಕೊಂಡಿದೆ ಎಂದು ಟೋಕರಿ ಕೋಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ ಮುದ್ನಾಳ ಹೇಳುತ್ತಾರೆ.

ಇದೇ ಪರಿಸ್ಥಿತಿ ಮುಂದುವರಿದರೆ ಮತ್ತೊಮ್ಮೆ ಬರಗಾಲದ ಸ್ಥಿತಿ ನಿರ್ಮಾಣವಾಗುವ ಭೀತಿ ಕಾಡುತ್ತಿದೆ ಎಂದು ಲಕ್ಷ್ಮಣ ತಡಿಬಿಡಿ, ರಾಮು ಗಣಪೂರ, ನಾರಾಯಣ ದುಗನೂರ. ಮರೇಪ್ಪ ರಾಂಪೂರ, ಮಲ್ಲು ಯಾದಗಿರಿ ಹೇಳುತ್ತಾರೆ.

ಹನಿ ನೀರಾವರಿಗೆ ಮೊರೆ: ಈ ವರ್ಷ ಜಿಲ್ಲೆಯಲ್ಲಿ ಮುಂಗಾರು ಮಳೆ ಸಮಯಕ್ಕೆ ಬಾರದ ಹಿನ್ನೆಲೆಯಲ್ಲಿ ರೈತರು ಬಿತ್ತನೆಗೆ ಹನಿ ನೀರಾವರಿಗೆ ಮೊರೆ ಹೋಗುವಂತಾಗಿದೆ.

ಮಳೆ ಬಾರದೇ ಇರುವುದರಿಂದ ಹಲವಾರು ಗ್ರಾಮಗಳಲ್ಲಿ ರೈತರು ಕೃಷಿ ಪಂಪ್ಸೆಟ್ ಮೂಲಕ ಹನಿ ನೀರಾವರಿ ಮೂಲಕ ಜಮೀನಿಗೆ ನೀರು ಒದಗಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಹೆಸರು ಹಾಗೂ ತೊಗರಿ ಬಿತ್ತನೆಗೆ ಪರದಾಡುವಂತಹ ಸ್ಥಿತಿ ಎದುರಾಗಿದೆ ಎನ್ನುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.