`ನಾನು ಇವತ್ತು ಹಲ್ಲುಜ್ಜಿದೆನಾ? ಸ್ನಾನ ಮಾಡಿ ದೆನಾ? ಬೆಳಿಗ್ಗೆ ಏನು ತಿಂಡಿ ತಿಂದೆ?~
65 ವರ್ಷದ ವೃದ್ಧಾಪ್ಯ ಪೂರ್ತಿ ಆವರಿಸಿದ ವ್ಯಕ್ತಿ ಯೊಬ್ಬರು ತನ್ನ ಮಡದಿಗೆ ಪದೇ ಪದೇ ಕೇಳು ತ್ತಿದ್ದರು.

ಇನ್ನೋರ್ವ ಮಹಿಳೆ, ತಾನು ಅಡುಗೆಗೆ ಉಪ್ಪು ಹಾಕಿದೆನೋ, ಇಲ್ಲವೋ ಎಂಬ ಸಂಶಯದಿಂದ ಪರಿತಪಿಸುತ್ತಿದ್ದಳು. ಇವರೀರ್ವರಿಗೂ ರಕ್ತದ ಒತ್ತಡ, ಸಕ್ಕರೆ ಕಾಯಿಲೆ. ಎರಡೂ ಕಳೆದ ಎರಡು ದಶಕ ಗಳಿಂದ ಬಾಧಿಸುತ್ತಿದ್ದವು. ಆದರೆ, ಅವು ನಿಯಂತ್ರಣ ದಲ್ಲಿದ್ದರೂ ಅವರಿಗೆ ಸಿಡಿಲಿನಂತೆ ಬಡಿದಿರುವ ಕಾಯಿಲೆ ಹೆಸರು ಅಲ್ಜೈಮರ್!

ಪ್ರತಿ ವರ್ಷ ಸೆ. 21ರಂದು ವಿಶ್ವ ಅಲ್ಜೈಮರ್ ಕಾಯಿಲೆ ದಿನವನ್ನು ವಿಶ್ವದಾದ್ಯಂತ ಆಚರಿಸ ಲಾಗು ತ್ತದೆ. ಜರ್ಮನ್ವಿಜ್ಞಾನಿ ಅಲ್ಜೈಮರ್ ಎಂಬುವ ವರು 1907ರಲ್ಲಿ ಈ ರೋಗವನ್ನು ಪತ್ತೆ ಹಚ್ಚಿದರು. ಈ ವರ್ಷ ಅಲ್ಜೈಮರ್ ದಿನಾಚರಣೆ ಘೋಷಣೆ ಹೀಗಿದೆ `ಡಿಮೆನ್ಸಿಯಾ ರೋಗದ ವಿವಿಧ ಮುಖ ಗಳು~. ಅಲ್ಜೈಮರ್ ರೋಗವೂ ಒಂದು ರೀತಿಯ ಡಿಮೆನ್ಸಿಯಾ ಕಾಯಿಲೆ. ಇದರ ಪ್ರಮುಖ ಲಕ್ಷಣ ವೆಂದರೆ ಮರೆವು.

ವೃದ್ಧಾಪ್ಯ ಮೀರಿ ಮರೆವು ಗೋಚರಿಸುವುದು, ಸಣ್ಣ ಸಣ್ಣ ವಿಷಯಗಳನ್ನು ವ್ಯಕ್ತಿ ಮರೆಯಲು ಆರಂಭಿಸುತ್ತಾನೆ. ಮೊದಮೊದಲು ಸಂಬಂಧಿಕರಿಗೆ ಮಾತ್ರ ತಿಳಿದುಬರುವ ಈ ಅಂಶ, ದಿನಗಳು ಕಳೆದಂತೆ ಇತರರಿಗೂ ಗೊತ್ತಾಗುವುದು. ಇದರ ಜೊತೆಗೆ ನಿಧಾನ ಅಥವಾ ಮಂದಗತಿಯ ನಡಿಗೆ, ಕೈಕಾಲು ನಡುಕ, ನಿದ್ರಾಹೀನತೆ, ಖಿನ್ನತೆ, ಜಿಗುಪ್ಸೆ, ಆತ್ಮಹತ್ಯೆ ವಿಚಾರಗಳು ಕಂಡು ಬರುತ್ತವೆ. ಪಾರ್ಕಿನ್ಸನ್ ಎಂಬ ಕಾಯಿಲೆ ಹೊಂದಿದವರು ಸುಮಾರು ಎಂಟು ಪಟ್ಟು ಜಾಸ್ತಿ ಅಲ್ಜೈಮರ್ ರೋಗಕ್ಕೆ ತುತ್ತಾಗುವರು.

ಸೆಪ್ಟೆಂಬರ್ ತಿಂಗಳನ್ನು `ಅಲ್ಜೈಮರ್ ಮಾಸ~ ಎಂದು ಕರೆಯಲಾಗಿದೆ. ಜನರಲ್ಲಿ ಈ ರೋಗದ ಬಗ್ಗೆ ಜಾಗೃತಿ ಮೂಡಿಸುವುದೇ ಇದರ ಉದ್ದೇಶ.

ಈ ರೋಗವನ್ನು ಮೂರು ವಿಧವಾಗಿ ವಿಂಗಡಿ ಸಬಹುದು.
* ಅಲ್ಪ ಸ್ವರೂಪದ ಕಾಯಿಲೆ: ಇದರಲ್ಲಿ ಮರೆವಿನ ಲಕ್ಷಣಗಳು ಮಾತ್ರ ಕಾಣಿಸಿಕೊಳ್ಳುವವು. ಈ ಅವಧಿ ಸುಮಾರು 2ರಿಂದ 4 ವರ್ಷ.

* ಮಧ್ಯಮ ಸ್ವರೂಪದ ಕಾಯಿಲೆ: ಇದರಲ್ಲಿ ಮರೆವಿನ ಜೊತೆಗೆ ಯಾವತ್ತೂ ಗೊಂದಲಮಯ ವಿಚಾರಧಾರೆ ಕಂಡು ಬರುವವು. ಸುಮಾರು 2ರಿಂದ 10 ವರ್ಷಗಳವರೆಗೆ ಈ ಸ್ವರೂಪ ಬಾಧಿಸುವುದು.

* ಭೀಕರ ಸ್ವರೂಪದ ಕಾಯಿಲೆ: ಕೊನೆಯುಸಿರು ಇರುವವರೆಗೂ ಕೆಸರಿನಂತೆ ಈ ರೋಗ ಕಾಡುವುದು. ಮರೆವು, ಊಟ ಮಾಡುವುದರ ಕುರಿತು ನಿಷ್ಕಾಳಜಿ, ನಿದ್ರಾಹೀನತೆ, ವಿಚಿತ್ರವಾದ ನಡವಳಿಕೆ, ಬಟ್ಟೆಯಲ್ಲೇ ಮಲ-ಮೂತ್ರ ವಿಸರ್ಜನೆ ಈ ರೋಗದ ಪ್ರಮುಖ ಲಕ್ಷಣಗಳು.

ಒಂದಂಶವನ್ನು ಓದುಗರು ಗಮನಿಸಬೇಕು. ಈ ರೋಗ ಪ್ರಾರಂಭವಾಗುವುದು ಮರೆವು ಎಂಬ ಲಕ್ಷಣದಿಂದ. ಮರೆವನ್ನು ನಾವು ಮರೆಯಬಾರದು, ಅಲಕ್ಷ್ಯ ಮಾಡಬಾರದು, ಅಲ್ಜೈಮರ್ ರೋಗದ ಮುನ್ಸೂಚನೆ ಇದು ಎಂಬ ಜಾಗೃತಿ ವಹಿಸಬೇಕು.

ಯಾರಿಗೆ ಈ ರೋಗ ತಗಲುವ ಸಂಭವ ಜಾಸ್ತಿ?
ಅತಿಯಾದ ಕೊಬ್ಬಿನ ಶೇಖರಣೆ (ಕೊಲೆಸ್ಟ್ರಾಲ್), ರಕ್ತದೊತ್ತಡ, ಸಕ್ಕರೆ ಕಾಯಿಲೆ, ರಕ್ತದಲ್ಲಿ ಫೋಲಿಕ್ ಆ್ಯಸಿಡ್ ಕೊರತೆ, ಸಿಗರೇಟು, ತಂಬಾಕು ಸೇವನೆ, ಎಟ್ರಿ ಯರ್ ಫಿಬ್ರಿನೇಶನ್ ಕಾಯಿಲೆಯಿಂದ ಬಳಲುವವರಿಗೆ ಈ ರೋಗ ತಗಲುವ ಸಂಭವ ಹೆಚ್ಚು.

ಅಲ್ಪ ಪ್ರಮಾಣದ ಮದ್ಯಸೇವನೆ ಹೃದಯಕ್ಕೆ, ಮಿದುಳಿಗೆ ಖಂಡಿತ ಒಳ್ಳೆಯದೇ. ಅಲ್ಪ ಪ್ರಮಾಣ ಎಂದರೆ ದಿನಕ್ಕೆ 30 ಎಂಎಲ್ ಮೀರಬಾರದು. ಇದ ರಿಂದ ಹೃದಯಾಘಾತ, ಮಿದುಳಿನ ಸ್ಟ್ರೋಕ್ ಮೊದ ಲಾದ ಕಾಯಿಲೆ ಬರದಂತೆ ನೋಡಿ ಕೊಳ್ಳಬಹುದು. ಅದರಲ್ಲಿಯೂ ಕೆಂಪು ವೈನ್ ಸುರ ಕ್ಷಿತ. ಎಲ್ಲದರಲ್ಲೂ ಇತಿ-ಮಿತಿ ಅತ್ಯಂತ ಪ್ರಾಮುಖ್ಯತೆ ವಹಿಸುತ್ತದೆ.

ದಿನಕ್ಕೆ ಒಂದು ಗಂಟೆ ಶಾರೀರಿಕ ವ್ಯಾಯಾಮ ಉತ್ತಮ. ಇನ್ಸುಲಿನ್ ಮೂಲಕವೂ ಈ ಕಾಯಿಲೆಗೆ ಚಿಕಿತ್ಸೆ ನೀಡಬಹುದು. ವಿಟಮಿನ್ `ಇ~ ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಿದ್ದಲ್ಲಿ ಈ ರೋಗವನ್ನು ತಡೆಗಟ್ಟಬಹುದು. ಮಿದುಳಿಗೆ ಅಧಿಕ ಕೆಲಸ ಕೊಡುವ ಮೂಲಕ ಅಲ್ಜೈಮರ್ ಹತ್ತಿರ ಸುಳಿಯದಂತೆ ನೋಡಿಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.