ಲಂಡನ್(ಪಿಟಿಐ): ಹಾಲಿವುಡ್ನ ದಂತಕತೆಯಾಗಿದ್ದ ನಟಿ ಮರ್ಲಿನ್ ಮನ್ರೊ ಅವರು 16 ವರ್ಷದ ನವವಿವಾಹಿತೆಯಾಗಿದ್ದಾಗ ತಮ್ಮ ಸಾಕುತಾಯಿಗೆ ಬರೆದಿದ್ದ ಪತ್ರವೊಂದು ಶನಿವಾರ ನಡೆದ ಹರಾಜಿನಲ್ಲಿ 52,460 ಡಾಲರ್ಗೆ ಮಾರಾಟವಾಗಿದೆ.

1942ರ ಸೆಪ್ಟೆಂಬರ್ 14ರಂದು ಪೆನ್ಸಿಲ್ನಲ್ಲಿ ಬರೆದಿದ್ದ 8 ಪುಟಗಳ ಈ ಪತ್ರದ ಕೊನೆಯಲ್ಲಿ ಮನ್ರೊ ತಮ್ಮ ಹಿಂದಿನ ಹೆಸರಾದ ‘ನೋರ್ಮಾ’ ಎಂದು ಸಹಿ ಮಾಡಿದ್ದರು.

ಪತ್ರದುದ್ದಕ್ಕೂ ಪತಿ ಜೇಮ್ಸ್ ಜಿಮ್ ಡಫರ್ಟಿ ಅವರನ್ನು ಕೊಂಡಾಡಿದ್ದ ಮನ್ರೊ, ಇನ್ನೂ 5-10 ವರ್ಷ ಕಾಯ್ದಿದ್ದರೂ ನನಗೆ ಇಂತಹ ಒಳ್ಳೆಯ ಗಂಡ ಸಿಗುತ್ತಿರಲಿಲ್ಲ. ಅಷ್ಟರಮಟ್ಟಿಗೆ ಅವರು ನನ್ನನ್ನು ಪ್ರೀತಿಸುತ್ತಾರೆ ಎಂದು ಬರೆದಿದ್ದರು.

ವಿವಾಹದ ಸಂದರ್ಭದಲ್ಲಿ ಬಂದಿದ್ದ ಉಡುಗೊರೆಗಳು, ಹೊಸ ಮನೆಯ ಕೆಲಸ ಕಾರ್ಯಗಳಲ್ಲಿ ತಾವು ತೊಡಗಿಕೊಂಡಿದ್ದುದನ್ನು ವಿವರಿಸಿದ್ದರು.ಆದರೆ ಇದಾದ ನಾಲ್ಕು ವರ್ಷಗಳಲ್ಲೇ ಜಿಮ್ ಅವರನ್ನು ತ್ಯಜಿಸಿದ್ದ ಮನ್ರೊ, ಬಳಿಕ ಜೋ ಡಿಮ್ಯಾಗಿಯೊ ಮತ್ತು ಆರ್ಥರ್ ಮಿಲ್ಲರ್ ಎಂಬುವವರನ್ನು ವರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.