ಶನಿವಾರ, ಮೇ 21, 2022
25 °C

ಮಲೇರಿಯ ನಿಯಂತ್ರಣ ಗಮನಾರ್ಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಪ್ರತಿ ಮಳೆಗಾಲದಲ್ಲಿ ಮಲೇರಿಯಾಗೆ ತುತ್ತಾಗುತ್ತಿದ್ದ ಮುದ್ದೇಬಿಹಾಳ ತಾಲ್ಲೂಕಿನ ಮಿಣಜಗಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕಳೆದ ಮೂರು ವರ್ಷಗಳಿಂದ ರೋಗದ ಹರಡುವಿಕೆಯಲ್ಲಿ ಗಮನಾರ್ಹ ನಿಯಂತ್ರಣ ಕಂಡು ಬಂದಿದೆ ಎಂದು ಕೊಣ್ಣೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸತೀಶ ತಿವಾರಿ ಹೇಳಿದರು.ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ಮಲೇರಿಯಾ ನಿಯಂತ್ರಣ ಯೋಜನೆ  ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಮುದ್ದೇಬಿಹಾಳ ತಾಲ್ಲೂಕಿನ ಮಿಣಜಗಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಲೇರಿಯಾ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಕಲ್ಲಿನ ಕ್ವಾರಿ, ಗುಳೆ ಹೋಗುವಿಕೆ- ಬರುವಿಕೆಯ ಕಾರಣದಿಂದ ಮಲೇರಿಯಾ ರೋಗದ ಭೀತಿ ಈ ಭಾಗದಲ್ಲಿದೆ. ಸರ್ಕಾರದ ವಿವಿಧ ಇಲಾಖೆಗಳು ಸತತ ಪರಿಶ್ರಮ ಹಾಗೂ ಸಮುದಾಯದ ಜಾಗೃತಿಯಿಂದ ಈ ರೋಗ ನಿಯಂತ್ರಣದಲ್ಲಿದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ತಾಲ್ಲೂಕು ಪಂಚಾಯಿತಿ ಸದಸ್ಯ ವಿರೇಶ ಬಾಗೇವಾಡಿ, ಸಾಂಕ್ರಾಮಿಕ ರೋಗಗಳ ಬಗ್ಗೆ ಜನರಲ್ಲಿ ಸತತ ಅರಿವು ಮೂಡಿಸುವ ಮೂಲಕ ಅವುಗಳನ್ನು ನಿಯಂತ್ರಿಸಬಹುದು ಎಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ  ಗಂಗಾಬಾಯಿ ಬಿಳೇಭಾವಿ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಎಸ್. ಎಸ್. ಯರಗಲ್ಲ ಮಾತನಾಡಿ , ಒಂದು ಕಾಲಕ್ಕೆ ಮಲೇರಿಯಾದ ತವರು ಮನೆಯಂತಾಗಿದ್ದ ಈ ಭಾಗದ ಗ್ರಾಮಗಳಲ್ಲಿ ಸತತ ಪ್ರಯತ್ನ ಹಾಗೂ ಸಮುದಾಯ ಭಾಗಿತ್ವದಿಂದ ರೋಗವನ್ನು ನಿಯಂತ್ರಣಕ್ಕೆ ತರಲಾಗಿದೆ. ಆದರೂ ಕ್ವಾರಿ ಕೆಲಸಕ್ಕೆ ಹೋಗುವ- ಬರುವ  ಜನರಿಂದ ರೋಗ ಹರಡುವಿಕೆ ಸಾಧ್ಯವಿರುವುದರಿಂದ ಇಲಾಖೆ ಎಲ್ಲ ಮುಂಜಾಗ್ರತಾ ಕ್ರಮಸತತವಾಗಿ ತಗೆದುಕೊಳ್ಳುತ್ತಿದೆ ಎಂದರು.ಆರೋಗ್ಯ ಮೇಲ್ವಿಚಾರಕ ಎಚ್. ಎಸ್. ನಾಗಶೆಟ್ಟಿ, ಸೊಳ್ಳೆಗಳ ನಿಯಂತ್ರಣ ಹಾಗೂ ಅವುಗಳ ಕಚ್ಚುವಿಕೆಯಿಂದ ತಪ್ಪಿಸಿಕೊಳ್ಳುವ ಸುಲಭ ಕ್ರಮಗಳನ್ನು ಕಟ್ಟು ನಿಟ್ಟಾಗಿ ಅಳವಡಿಸಿಕೊಳ್ಳಲು ಕರೆ ನೀಡಿದರು.

ಕ್ಷೇತ್ರ ಪ್ರಚಾರ ಅಧಿಕಾರಿ ಶಿವಯೋಗಿ ಮೇಸ್ತ್ರಿ  ಪ್ರಾಸ್ತಾವಿಕವಾಗಿ ಮಾತನಾಡಿದರು.ಮುಖ್ಯ ಶಿಕ್ಷಕಿ ಎಸ್.ಜಿ. ಕೋಳೂರು. ಗ್ರಾ.ಪಂ. ಕಾರ್ಯದರ್ಶಿ ನಿರ್ಮಲಾ, ಅಂಗನವಾಡಿ ಮೇಲ್ವಿಚಾರಕಿ ಎಸ್.ಸಿ . ದೇಸಾಯಿ ಭಾಗವಹಿಸಿದ್ದರು. ಅಶೋಕ ಹಂಚಲಿ ಕಾರ್ಯಕ್ರಮ ನಿರೂಪಿಸಿದರು.ಸದಾಶಿವ ಆಯೋಗ ವರದಿ ಕೈಬಿಡಲು ಒತ್ತಾಯ

ಬಾಗಲಕೋಟೆ: ರಾಜ್ಯದಲ್ಲಿನ ಪರಿಶಿಷ್ಟ ಜಾತಿಯ ಸ್ಥಿತಿಗತಿಯ ಕುರಿತು ಅಧ್ಯಯನ ನಡೆಸಿದ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗವು ಸರ್ಕಾರಕ್ಕೆ ಸಲ್ಲಿಸಿದ ವರದಿ ಅವೈಜ್ಞಾನಿಕವಾಗಿದ್ದು ಅದನ್ನು ಕೈ ಬಿಡಬೇಕು ಎಂದು ಕರ್ನಾಟಕ ರಾಜ್ಯ ಚಲವಾದಿ ಮಹಾಸಭಾ ಒತ್ತಾಯಿಸಿದೆ. 20.54 ಲಕ್ಷ ಕುಟುಂಬಗಳ ಪೈಕಿ 96.60 ಲಕ್ಷ ಜನರನ್ನು ಸಮೀಕ್ಷೆಗೆ ಒಳಪಡಿಸಿದ್ದು ಇವರ ಪೈಕಿ 6ಲಕ್ಷ ಜನರು ತಮ್ಮ ಜಾತಿಯನ್ನು ಸ್ಪಷ್ಟವಾಗಿ ನಮೂದಿಸಿಲ್ಲ. 1.38 ಲಕ್ಷ ಮಂದಿ ಪರಿಶಿಷ್ಟ ಜಾತಿ ಉದ್ಯೋಗಸ್ಥರ ಪೈಕಿ 3600 ಜನ ನೌಕರರು ತಮ್ಮ ಒಳಜಾತಿಯನ್ನು ನಮೂದಿಸಿಲ್ಲ. ಜನಸಂಖ್ಯೆ ಸ್ಪಷ್ಟವಾಗಿ ಸಿಗದಿದ್ದಾಗ ಒಳಮೀಸಲಾತಿ ಸರಿಯಲ್ಲ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.