ಕ್ವಾಲಾಲಂಪುರ, ಮಲೇಷ್ಯಾ (ಪಿಟಿಐ): 239 ಜನರೊಂದಿಗೆ ನಿಗೂಢವಾಗಿ ಮಾರ್ಚ್ 8ರಂದು ಕಾಣೆಯಾಗಿದ್ದ ಎಂಎಚ್370 ವಿಮಾನವು ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಪತನಗೊಂಡಿದೆ ಎಂದು ಮಲೇಷ್ಯಾ ಪ್ರಧಾನಿ ನಜೀಬ್ ರಜಾಕ್ ಸೋಮವಾರ ತಿಳಿಸಿದ್ದಾರೆ.

ಈ ಮೂಲಕ 17 ದಿನಗಳಿಂದ ವಿಮಾನದ ನಿಗೂಢ ಕಣ್ಮರೆ ಕುರಿತಂತೆ ಎದ್ದಿದ್ದ ಊಹಾಪೋಹಗಳಿಗೆ ತೆರೆ ಬಿದ್ದಿದೆ.

‘ಎಂಎಚ್370 ವಿಮಾನವು ಹಿಂದೂ ಮಹಾಸಾಗರದಲ್ಲಿ ಪತನಗೊಂಡಿದೆ ಎಂದು ನೋವಿನೊಂದಿಗೆ ತಿಳಿಸ ಬಯಸುತ್ತೇನೆ’ ಎಂದು ನಜೀಬ್ ಅವರು ವಿಶೇಷ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಬ್ರಿಟಿಷ್ ಉಪಗ್ರಹ ಕಂಪೆನಿ ಇನ್ಮಾರ್ಸ್ಯಾಟ್ ನೀಡಿದ ಮಾಹಿತಿಯ ಆಧಾರದ ಮೇಲೆ ನಜೀಬ್ ಅವರು ಈ ಹೇಳಿಕೆ ನೀಡಿದ್ದು, ವಿಮಾನದಲ್ಲಿದ್ದ ಪ್ರಯಾಣಿಕರು ಬದುಕುಳಿದಿರುವ ಸಾಧ್ಯತೆ ಕುರಿತು ಸಂದೇಹ ವ್ಯಕ್ತಪಡಿಸಿದ್ದಾರೆ.

ಮಲೇಷ್ಯಾಕ್ಕೆ ಸೇರಿದ್ದ ಈ ವಿಮಾನದಲ್ಲಿ ಐವರು ಭಾರತೀಯರು ಸೇರಿದಂತೆ 239 ಜನರು ಪ್ರಯಣಿಸುತ್ತಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.