ಭಾನುವಾರ, ಜನವರಿ 26, 2020
21 °C

ಮಳಿಗೆಗಳಿಂದ ಕಳಪೆ ಪ್ಲಾಸ್ಟಿಕ್‌ ವಶ: ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಗಾಣಿಗರಪೇಟೆಯ ಮಳಿಗೆಗಳ ಮೇಲೆ ದಾಳಿ ನಡೆಸಿದ ಬಿಬಿಎಂಪಿ ಆರೋಗ್ಯ ಇಲಾಖೆ ಅಧಿಕಾರಿಗಳು 40 ಮೈಕ್ರಾನ್‌ಗಿಂತ ಕಡಿಮೆ ಗುಣಮಟ್ಟದ 100 ಕೆ.ಜಿ.ಯಷ್ಟು ಪ್ಲಾಸ್ಟಿಕ್‌ ವಶಪಡಿಸಿಕೊಂಡಿದ್ದಾರೆ.

ಅವೆನ್ಯೂ ಮಾರ್ಕೆಟಿಂಗ್‌ನ ಅಶೋಕ ಕುಮಾರ್‌ ಎಂಬುವವರಿಗೆ ಸೇರಿದ ಮಳಿಗೆ ಮೇಲೆ ಈ ದಾಳಿ ನಡೆಯಿತು. ಕಳಪೆ ಪ್ಲಾಸ್ಟಿಕ್‌ ಸಂಗ್ರಹಿಸಿದ್ದ ಮಳಿಗೆ ಮಾಲೀಕರಿಗೆ ₨ 50,000 ದಂಡ ವಿಧಿಸಲಾಗಿದೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)