ಗುರುವಾರ , ಜೂನ್ 24, 2021
30 °C

ಮಳೆ, ಸಿಡಿಲಿಗೆ ಮೂವರ ಬಲಿ

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಬೆಳಗಾವಿ, ವಿಜಾಪುರ, ಧಾರವಾಡ ಜಿಲ್ಲೆ­ಗಳಲ್ಲಿ ಸೋಮವಾರವೂ ಮಳೆ­ಯಾ­ಗಿದ್ದು, ವಿಜಾಪುರ ಜಿಲ್ಲೆಯಲ್ಲಿ ಗೋಡೆ ಕುಸಿದು ಇಬ್ಬರು, ಬೆಳಗಾವಿ ಜಿಲ್ಲೆಯಲ್ಲಿ ಸಿಡಿಲು ಬಡಿದು ಒಬ್ಬರು ಸೇರಿ ಒಟ್ಟು ಮೂವರು ಸಾವಿಗೀಡಾ­ಗಿದ್ದಾರೆ.ವಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ದೇವರಹಿಪ್ಪರಗಿ ಗ್ರಾಮ­ದಲ್ಲಿ ಮಳೆಯಿಂದ ಮನೆಯ ಗೋಡೆ ಕುಸಿದು ರಜಾಕ್‌ಬೀ ಬಾಷಾಸಾಬ್‌ ಕೊಕಟನೂರ (55) ಮತ್ತು ಸಿಮ್ರನ್‌ ದಾವಲ್‌ಸಾಬ್‌ ಕೊಕಟನೂರ (6) ಮೃತಪಟ್ಟಿದ್ದಾರೆ.ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ಸಿಡಿಲು ಬಡಿದು ಹೊಲದಲ್ಲಿ ಕೆಲಸ ಮಾಡುತ್ತಿದ್ದ ಶಿವಪ್ಪ ಮಹಾದೇವಪ್ಪ ನರಗುಂದ (45) ಸಾವಿಗೀಡಾಗಿದ್ದಾರೆ.ಧಾರವಾಡ ತಾಲ್ಲೂಕಿನ ಹುಲ್ಲಿಕೆರೆ ಗ್ರಾಮದಲ್ಲಿನ ಹೊಲದಲ್ಲಿದ್ದ ಐವರಿಗೆ ಸಿಡಿಲು ಬಡಿದು ಗಾಯಗೊಂಡಿದ್ದು, ಒಬ್ಬನ ಸ್ಥಿತಿ ಗಂಭೀರವಾಗಿದೆ.ಆಲಿಕಲ್ಲು ಮಳೆ: ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಉಮರಾಣಿ, ಟಾಕಳಿ, ಹತ್ತಳ್ಳಿ ಸುತ್ತಮುತ್ತ ಸೋಮವಾರ ಸಂಜೆ ಆಲಿಕಲ್ಲು ಮಳೆ ಬಿದ್ದು ಜನ–ಜಾನುವಾರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.