ಮಸ್ಕತ್ ಉತ್ಸವ

7

ಮಸ್ಕತ್ ಉತ್ಸವ

Published:
Updated:
ಮಸ್ಕತ್ ಉತ್ಸವ

ಕೊಲ್ಲಿ ದೇಶಗಳಲ್ಲಿ ಒಂದಾದ ಒಮನ್‌ನಲ್ಲಿ ಜ. 27ರಿಂದ ಒಂದು ತಿಂಗಳ ‘ಮಸ್ಕತ್ ಉತ್ಸವ’ ಆರಂಭವಾಗಲಿದೆ. ಇದರಲ್ಲಿ ಭಾಗವಹಿಸಲು ಬರುವ ಭಾರತೀಯ ಪ್ರವಾಸಿಗಳಿಗೆ ಒಮನ್ ಏರ್‌ಲೈನ್ಸ್ ವಿಶೇಷ ಪ್ಯಾಕೇಜ್ ರೂಪಿಸುತ್ತಿದೆ ಎಂದು ಒಮನ್ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಮಹಾ ನಿರ್ದೇಶಕ ಸಲೀಂ ಬಿನ್ ಅದೇಯ್ ಅಲ್ ಮಮಾರಿ ತಿಳಿಸಿದ್ದಾರೆ.ಪ್ರತಿ ವರ್ಷ ಸುಮಾರು 6 ಲಕ್ಷಕ್ಕೂ ಹೆಚ್ಚು ಭಾರತೀಯರನ್ನು ಬರಮಾಡಿಕೊಳ್ಳುವ ಒಮನ್, ಪ್ರವಾಸೋದ್ಯಮ ಅಭಿವೃದ್ಧಿಗೆ ಅನೇಕ ಕ್ರಮ ಕೈಗೊಂಡಿದೆ. ಸಾಮಿಪ್ಯ, ಸುರಕ್ಷತೆ, ಭಾರತೀಯ ಶೈಲಿಯ ಆಹಾರ ಲಭ್ಯತೆ, ಸುಲಭವಾಗಿ ಸಂವಹನ ಮಾಡಬಹುದಾದ ಕಾರಣ ಭಾರತೀಯರಿಗಂತೂ ಇಲ್ಲಿ ಅನಾನುಕೂಲ ಅನಿಸುವುದಿಲ್ಲ ಎನ್ನುವುದು ಅವರ ವಿವರಣೆ.ಸುಂದರ ಕಡಲ ತೀರ, ಭೂ ಪರಿಸರ, ಬೆಟ್ಟ ಗುಡ್ಡಗಳು, ಸಾಹಸ ಪ್ರವಾಸೋದ್ಯಮ ತಾಣಗಳನ್ನು ಹೊಂದಿರುವ ಒಮಾನ್‌ನ ದಕ್ಷಿಣದ ಸಲಾಲ್ ಪ್ರದೇಶ ಭಾರತವನ್ನೇ ಹೋಲುತ್ತದೆ. ಉತ್ಸವದ ಹಿನ್ನೆಲೆಯಲ್ಲಿ ಒಮನ್ ಪ್ರವಾಸೋದ್ಯಮ ಇಲಾಖೆ ಬೆಂಗಳೂರಿನಲ್ಲಿ ರೋಡ್ ಶೋ ಹಮ್ಮಿಕೊಂಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry