ಭಾನುವಾರ, ಮಾರ್ಚ್ 7, 2021
29 °C

ಮಹದೇವಪ್ಪನವರಿಗೆ ಕೃಷಿ ವಿ.ವಿಯಲ್ಲಿ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹದೇವಪ್ಪನವರಿಗೆ ಕೃಷಿ ವಿ.ವಿಯಲ್ಲಿ ಸನ್ಮಾನ

ಧಾರವಾಡ:ಪದ್ಮಭೂಷಣ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಕೃಷಿ ವಿ.ವಿ. ವಿಶ್ರಾಂತ ಕುಲಪತಿ ಡಾ.ಎಂ.ಮಹದೇವಪ್ಪ ಅವರನ್ನು ಕೃಷಿ ವಿ.ವಿ. ಆವರಣದಲ್ಲಿ ಬುಧವಾರ ಸನ್ಮಾನಿಸಲಾಯಿತು.

 

ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಗಳನ್ನು ಪಡೆದ ಏಕೈಕ ಕೃಷಿ ವಿಜ್ಞಾನಿ ಹಾಗೂ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದ ಡಾ.ಮಹದೇವಪ್ಪನವರನ್ನು ಕೃಷಿ ವಿಶ್ವವಿದ್ಯಾಲಯದ ಶಿಕ್ಷಕ, ಶಿಕ್ಷಕೇತರ, ವಿದ್ಯಾರ್ಥಿ ಹಾಗೂ ಕಾರ್ಮಿಕ ಸಂಘಟನೆಗಳ ಪರವಾಗಿ ಕಪ್ಪತಗುಡ್ಡದ ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಗೌರವಿಸಲಾಯಿತು.ಸನ್ಮಾನ ಸ್ವೀಕರಿಸಿದ ಡಾ.ಮಹದೇವಪ್ಪ, ‘ಧಾರವಾಡ ಕೃಷಿ ವಿ.ವಿ. ನನಗೆ ತಾಯಿ ಮನೆ ಇದ್ದ ಹಾಗೆ. ಇಲ್ಲಿ ಕುಲಪತಿಯಾಗಿ ಮಾಡಿದ ಸಾಧನೆ ಸಿಬ್ಬಂದಿ ಮತ್ತು ಜನತೆಯ ಪ್ರೀತಿ ನನ್ನನ್ನು ವಿನಮ್ರನನ್ನಾಗಿಸಿದೆ. ಈ ಪ್ರಶಸ್ತಿಯ ಗೌರವ ನನ್ನನ್ನು ರಾಷ್ಟ್ರಮಟ್ಟಕ್ಕೇರಲು ಸಹಾಯ ಮಾಡಿದ ಒಂದು ಕಟುಂಬದಂತಿರುವ ಕೃಷಿ ವಿ.ವಿ. ಎಲ್ಲರಿಗೂ ಸೇರಬೇಕಾದದ್ದು’ ಎಂದರು.ಕುಲಪತಿ ಡಾ.ಡಿ.ಪಿ.ಬಿರಾದಾರ ಮಾತನಾಡಿ, ‘ಡಾ.ಮಹದೇವಪ್ಪನವರು ತಮ್ಮ ಆಡಳಿತಾವಧಿಯಲ್ಲಿ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟು, ರಾಷ್ಟ್ರಮಟ್ಟದಲ್ಲಿ ವಿಶ್ವವಿದ್ಯಾಲಯದ ಹೆಸರು ಎದ್ದು ಕಾಣುವಂತೆ ಮಾಡಿದ್ದಾರೆ. ಅವರ ಮುಂದಾಲೋಚನೆ ಮತ್ತು ದಕ್ಷ ಆಡಳಿತದಿಂದಾಗಿ ಅವರು ಎರಡು ಅವಧಿಗಳಿಗೆ ಕುಲಪತಿಗಳಾಗಲು ಸಾಧ್ಯವಾಯಿತು’ ಎಂದರು.ವಿ.ವಿ. ಕುಲಸಚಿವ ಡಾ.ಎಚ್.ಎಸ್.­ವಿಜಯಕುಮಾರ ಸ್ವಾಗತಿಸಿದರು. ಶಿಕ್ಷಕ ಸಂಘದ ಅಧ್ಯಕ್ಷ ಡಾ.ಎನ್.ಆರ್.ಮಾಮಲೆ ದೇಸಾಯಿ ಅಭಿನಂದನಾ ನುಡಿಗಳನ್ನು ವಾಚಿಸಿದರು. ಶಿಕ್ಷಕೇತರ ಸಂಘದ ಪ್ರತಿನಿಧಿ ಸವರ್ಣಾ ಪಾಟೀಲ ವಂದಿಸಿದರು. ಡಾ.ಹಲಗಲಿಮಠ ಕಾರ್ಯಕ್ರಮ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.