ಶುಕ್ರವಾರ, ಏಪ್ರಿಲ್ 3, 2020
19 °C

ಮಹಾಕಲಿ ಕರ್ಣ ಯಕ್ಷಗಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಕ್ಷಗಾನದಲ್ಲಿ ಹೊಸ ಪ್ರಯೋಗಗಳಿಗೆ ಕೊರತೆಯಿಲ್ಲ. ಕೆಲವು ಪ್ರಯೋಗಗಳು ಶುದ್ಧ ವ್ಯಾಪಾರಿ ದೃಷ್ಟಿಯಲ್ಲಿ ಮೂಡಿದರೆ ಇನ್ನು ಹಲವಷ್ಟು ಸಾಮಾಜಿಕ ಜಾಗೃತಿಗೆ ಕಲೆಯ ಚೌಕಟ್ಟನ್ನು ವಿಸ್ತರಿಸಿದಂಥವು. ಪೌರಾಣಿಕ ಪ್ರಸಂಗಗಳನ್ನು ಸಮಕಾಲೀನ ಚೌಕಟ್ಟಿನಲ್ಲಿ ನೋಡುವ ಯಕ್ಷಗಾನ ಪ್ರಯೋಗಗಳು ಪ್ರೇಕ್ಷಕರನ್ನು ಹೆಚ್ಚು ಆಕರ್ಷಿಸುತ್ತವೆ. ಇಂತಹ ಒಂದು ಪ್ರಯೋಗವೇ ರಾಧಾಕೃಷ್ಟ ಉರಾಳ ಸಾರಥ್ಯದಲ್ಲಿ ಪ್ರದರ್ಶನಗೊಳ್ಳಲಿರುವ `ಮಹಾಕಲಿ ಕರ್ಣ~.

ಜಾತಿ, ಅವಕಾಶವಾದಿ ಸಂಬಂಧ, ಸ್ವಾರ್ಥ ರಾಜಕಾರಣದಿಂದ ವಿಧಿ ವಂಚಿತನಾದ ದುರಂತ ನಾಯಕ ಕರ್ಣನ ಬದುಕಿನ ಕುರಿತಾದ `ಮಹಾಕಲಿ ಕರ್ಣ~ ಯಕ್ಷಗಾನದ ಪ್ರಯೋಗ ಶನಿವಾರ ಉತ್ತರಹಳ್ಳಿ ಮುಖ್ಯರಸ್ತೆಯ ಕೆಎಸ್‌ಆರ್‌ಟಿಸಿ ಲೇಔಟ್‌ನ ಚಿಕ್ಕಲಸಂದ್ರದ ಸಿದ್ದಿ ಗಣಪತಿ ಆವರಣದ ಮನೋರಂಜಿನಿ ಸಭಾಂಗಣದಲ್ಲಿ ನಡೆಯಲಿದೆ.

ಹವ್ಯಾಸಿ ಕಲಾವಿದರಾದ ಸುದೀಂದ್ರ ಹೊಳ್ಳ (ಕರ್ಣ), ಸುಜಯೀಂದ್ರ ಹಂದೆ (ಶಲ್ಯ), ಶಿವಾನಂದ ಹೊಳ್ಳ (ಅರ್ಜುನ), ಅಂಬರೀಷ್ ಭಟ್ (ಕೃಷ್ಣ), ಸುರೇಶ ತಂತ್ರಾಡಿ (ಕೌರವ) ಅಭಿನಯವಿದೆ. ಸುಬ್ರಾಯ ಹೆಬ್ಬಾರ್, ಎ.ಪಿ.ಪಾಟಕ್, ಶ್ರೀನಿವಾಸ ಪ್ರಭು, ಹಿಮ್ಮೇಳದಲ್ಲಿ ಸಹಕರಿಸಲಿದ್ದಾರೆ. ಕೆ.ಆರ್.ಸುಧೀಂದ್ರ ಶರ್ಮ, ಡಾ.ಎಚ್. ವಿ.ವೇಣು ಗೋಪಾಲ್, ಎನ್.ಸುರೇಶ್, ಸಚ್ಚಿದಾನಂದ ಮೂರ್ತಿ ಅತಿಥಿಗಳಾಗಿ ಪಾಲ್ಗೊಳ್ಳುವರು. ಮಾಹಿತಿಗೆ: 9448510582.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)