ಬೆಳಗಾವಿ: ಮಹಾದಾಯಿ ನದಿ ತಿರುವು ಯೋಜನೆಯ ವಾಸ್ತವ ಸಂಗತಿಗಳ ಕುರಿತು ಅಧ್ಯಯನ ನಡೆಸಲು ರಾಜ್ಯಕ್ಕೆ ಬುಧವಾರ ಆಗಮಿಸಿದ ಮಹಾದಾಯಿ ನ್ಯಾಯಮಂಡಳಿ ಅಧ್ಯಕ್ಷ ನ್ಯಾಯ ಮೂರ್ತಿ ಜೆ.ಎಂ. ಪಾಂಚಾಲ್, ಸದಸ್ಯ ರಾದ ನೇತೃತ್ವದ ತಂಡಕ್ಕೆ ಜಿಲ್ಲಾಡಳಿತದ ವತಿಯಿಂದ ಅದ್ದೂರಿ ಸ್ವಾಗತ ನೀಡಲಾಯಿತು.

ಮಂಗಳವಾರ ಗೋವಾದಲ್ಲಿ ಮಹಾ ದಾಯಿ ನದಿ ಪಾತ್ರದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದ ನ್ಯಾಯ ಮಂಡಳಿ ತಂಡವು ಚೋರ್ಲಾ ಘಾಟ್ ನಲ್ಲಿ ಕರ್ನಾಟಕದ ಗಡಿ ಭಾಗವನ್ನು ಬೆಳಿಗ್ಗೆ 11.10ಕ್ಕೆ ಪ್ರವೇಶಿಸುತ್ತಿದ್ದಂತೆ ಆತ್ಮೀಯವಾಗಿ ಬರಮಾಡಿಕೊಳ್ಳ ಲಾಯಿತು. ಜಿಲ್ಲಾಡಳಿತದ ವತಿಯಿಂದ ಎನ್. ಜಯರಾಮ್ ಅವರು ನ್ಯಾ. ಪಾಂಚಾಲ್ ಹಾಗೂ ಸದಸ್ಯರಾದ ನ್ಯಾಯಮೂರ್ತಿ ವಿನಯ್ ಮಿತ್ತಲ್, ನ್ಯಾಯಮೂರ್ತಿ ಪಿ.ಎಸ್. ನಾರಾಯಣ ಅವರಿಗೆ ಮೈಸೂರು ಪೇಟ ತೊಡಿಸಿ, ಏಲಕ್ಕಿ ಹಾರವನ್ನು ಹಾಕಿ ಗೌರವಿಸಿ ದರು.

ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ, ಸಚಿವರಾದ ಸತೀಶ ಜಾರಕಿಹೊಳಿ, ಪ್ರಕಾಶ ಹುಕ್ಕೇರಿ ಅವರು ಗಣ್ಯರನ್ನು ಸ್ವಾಗತಿಸಿದರು. ಜಾನಪದ ಕಲಾವಿದರು ಡೊಳ್ಳು ಹಾಗೂ ಕಹಳೆ ಊದುತ್ತ ನ್ಯಾಯಮಂಡಳಿ ತಂಡವನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಬಂದರು. ರಸ್ತೆಯಲ್ಲಿಯೇ ನಿರ್ಮಿಸಲಾಗಿದ್ದ ವೇದಿಕೆಯಲ್ಲಿ ನ್ಯಾಯ ಮಂಡಳಿ ಅಧ್ಯಕ್ಷರು ಹಾಗೂ ಸದಸ್ಯರಿಗೆ ಪೊಲೀಸರು ಗೌರವ ರಕ್ಷೆಯನ್ನು ನೀಡಿದರು.

ಬಳಿಕ ಕರ್ನಾಟಕ, ಗೋವಾ, ಮಹಾರಾಷ್ಟ್ರ ರಾಜ್ಯದ ತಾಂತ್ರಿಕ ಮತ್ತು ಕಾನೂನು ತಜ್ಞರು ಸೇರಿದಂತೆ 55 ಜನರನ್ನೊಳಗೊಂಡ ತಂಡವು ಹಳತಾರ ನಾಲಾ ಮತ್ತು ಉದ್ದೇಶಿತ ಚೆಕ್ಡ್ಯಾಂ ಪ್ರದೇಶಕ್ಕೆ ಭೇಟಿ ನೀಡಿತು. ಅಧಿಕಾರಿ ಗಳು ಕುಡಿಯುವ ನೀರಿನ ಯೋಜನೆಯ ಅಗತ್ಯತೆ ಹಾಗೂ ಉದ್ದೇಶಿತ ಚೆಕ್ಡ್ಯಾಂ ನಿರ್ಮಾಣದ ಕುರಿತು ಸಮಗ್ರವಾದ ಮಾಹಿತಿ ನೀಡಿದರು.

ನಂತರ ತಂಡವು ಕಳಸಾ– ಸುರ್ಲಾ ನಾಲಾ ಸಂಗಮ ಪ್ರದೇಶಕ್ಕೆ ಭೇಟಿ ಮಾಡಿ ಮಾಹಿತಿ ಪಡೆದುಕೊಂಡಿತು. ಬಳಿಕ ಅಲ್ಲಿಂದ ಉದ್ದೇಶಿತ ಕಳಸಾ ಚೆಕ್ಡ್ಯಾಂ ನಿರ್ಮಾಣ ಸ್ಥಳವನ್ನು ಪರಿಶೀಲಿಸಿತು. ಅಲ್ಲಿಂದ ನೇರವಾಗಿ ಕಣಕುಂಬಿಯಲ್ಲಿನ ಕಳಸಾ ಕಾಲುವೆ ನಿರ್ಮಾಣ ಕಾಮಗಾರಿ ಪ್ರದೇಶಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿತು.

ಮಧ್ಯಾಹ್ನ ಕಣಕುಂಬಿ ಪ್ರವಾಸಿ ಮಂದಿರದಲ್ಲಿ ತಂಡವು ಭೋಜನ ಮುಗಿಸಿ ಕೊಟ್ಣಿ ಡ್ಯಾಂ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ರಾಜ್ಯದಲ್ಲಿ ಕೈಗೊಳ್ಳುತ್ತಿರುವ ಕಳಸಾ–ಬಂಡೂರಿ ನಾಲಾ ಜೋಡಣೆ ಕಾಮಗಾರಿಯನ್ನು ಕಾಲ ಕಾಲಕ್ಕೆ ವೀಕ್ಷಿಸಲು ಗೋವಾದ ಅಧಿಕಾರಿಗಳಿಗೆ ಅವಕಾಶ ಕಲ್ಪಿಸುವಂತೆ ನ್ಯಾಯ ಮಂಡಳಿ ಅಧಿಕಾರಿಗಳು ಸೂಚಿಸಿದರು.

ರಾಜ್ಯದ ಕಾನೂನು ಸಲಹೆಗಾರ ರಾದ ಹಿರಿಯ ವಕೀಲರಾದ ಶರತ್ ಜವಳಿ, ಮೋಹನ್ ಕಾತರಕಿ, ಬ್ರಿಜೇಶ ಕಲ್ಲಪ್ಪ, ಎಂ.ಬಿ. ಝಿರಲಿ, ಅನಿತಾ ಶೆಣೈ, ನಿಶಾಂತ ಪಾಟೀಲ, ಕಾಶಿ ವಿಶ್ವೇಶ್ವರ, ತಾಂತ್ರಿಕ ತಜ್ಞರಾದ ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ಡಿ. ಸತ್ಯಮೂರ್ತಿ, ಕಾರ್ಯದರ್ಶಿ ಬಿ.ಜಿ. ಗುರುಪ್ರಸಾದ ಸ್ವಾಮಿ, ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಆರ್. ರುದ್ರಯ್ಯ ಮತ್ತಿತರ ಅಧಿಕಾರಿಗಳು ಅಗತ್ಯ ಮಾಹಿತಿಯನ್ನು ನೀಡಿದರು.

ಪ್ರಾದೇಶಿಕ ಆಯುಕ್ತ ಗಂಗಾರಾಮ ಬಡೇರಿಯಾ, ಉತ್ತರ ವಲಯದ ಪೊಲೀಸ್ ಮಹಾನಿರೀಕ್ಷಕ ಭಾಸ್ಕರ ರಾವ್, ಜಿಲ್ಲಾ ಪಂಚಾಯಿತಿ ಸಿಇಒ ದೀಪಾ ಚೋಳನ್ ಹಾಜರಿದ್ದರು.

‘ವಾಸ್ತವ ಸ್ಥಿತಿ ಪರಿಚಯ ಆಗಲಿದೆ’

ಬೆಳಗಾವಿ: ‘ಮಹಾದಾಯಿ ನ್ಯಾಯಮಂಡಳಿ ತಂಡವು ಕಳಸಾ– ಬಂಡೂರಿ ಯೋಜನಾ ಪ್ರದೇಶಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿಯ ಕುರಿತು ಅಧ್ಯಯನ ನಡೆಸಲಿದೆ. ಇಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ಬಗ್ಗೆ ನ್ಯಾಯಮಂಡಳಿಗೆ ವಾಸ್ತವ ಮಾಹಿತಿಯನ್ನು ನಮ್ಮ ಅಧಿಕಾರಿಗಳು ನೀಡಲಿದ್ದಾರೆ’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.

‘ನ್ಯಾಯಮಂಡಳಿಯು ಗೋವಾದಲ್ಲಿಯೂ ನದಿ ಪಾತ್ರವನ್ನು ಪರಿಶೀಲಿಸಿಕೊಂಡು ಬಂದಿದೆ. ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಅಧ್ಯಯನ ನಡೆಸಲಿದೆ. ಇದೇ 23ರಂದು ನ್ಯಾಯಮಂಡಳಿಯು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಲಿದೆ. ಈ ಸಂದರ್ಭದಲ್ಲಿ ಅವರು ಅವಕಾಶ ನೀಡಿದರೆ, ಯೋಜನೆ ಕುರಿತು ಪೇಪರ್ ಪ್ರೆಸೆಂಟೇಶನ್ ಮಾಡುತ್ತೇವೆ’ ಎಂದು ಪಾಟೀಲ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.