ಶುಕ್ರವಾರ, ಜೂನ್ 18, 2021
22 °C

ಮಹಾರಾಣಿಯರ ಸಂಗೀತ ಸಂಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಶಿವನ ಪೂಜೆ ಮಾಡು ಮನವೇ.. ಶಿವ ಶಿವ ಎನ್ನಿರೋ.. ಎನಗೆ ಭೋಗ ಭಾಗ್ಯ ಬೇಡ, ನೀವು ಕಾಣಿರಾ- ನೀವು ಕಾಣಿರಾ ಸೇರಿದಂತೆ ಇತ್ಯಾದಿ ಗೀತೆಗಳು ಭಾನುವಾರ ಮಹಾರಾಣಿ ವಿಜ್ಞಾನ ಕಾಲೇಜಿನ ಸಭಾಂಗಣದಲ್ಲಿ ರಿಂಗಣಿಸಿದವು. ವಿದುಷಿ ಸುಕನ್ಯಾ ಪ್ರಭಾಕರ್ ಅವರ ಕಂಠಸಿರಿಗೆ ನೆರೆದಿದ್ದ 100ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ದನಿಗೂಡಿಸಿದರು. ಒಂದು ಗಂಟೆಗೂ ಹೆಚ್ಚು ಕಾಲ ನಡೆದ ವಿದ್ಯಾರ್ಥಿನಿಯರ ಹಾಗೂ ಸಂಗೀತ ವಿದುಷಿ ಅವರ ಜುಗಲ್‌ಬಂದಿ ನೆರೆದವರನ್ನು ಮೂಕ ವಿಸ್ಮಿತರನ್ನಾಗಿಸಿತು.ಮಹಾರಾಣಿ ಕಾಲೇಜಿನ ಲಲಿತ ಕಲಾ ಸಂಘ ಆಯೋಜಿಸಿದ್ದ ಎರಡು ದಿನಗಳ ಕಲಾ ರಸಗ್ರಹಣ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮವದು. ಭಾನುವಾರ ಬೆಳಿಗ್ಗೆ 10 ಗಂಟೆಯಿಂದಲೇ ವಿದುಷಿ ಸುಕನ್ಯಾ ಪ್ರಭಾಕರ್ ಅವರ ಶಿಷ್ಯ ವೃಂದದವರು ನಿರಂತರ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ವಾದ್ಯ ರಹಿತ ಈ ಕಾರ್ಯಕ್ರಮ ಸಂಜೆ ನಡೆಯುವ ಸಂಗೀತ ಕಾರ್ಯಕ್ರಮಕ್ಕೆ ಪೂರ್ವಭಾವಿ ತಯಾರಿಯಂತೆ ನಡೆಯಿತು. ಮಧ್ಯಾಹ್ನ 3.30ಕ್ಕೆ ಆರಂಭವಾದ ಕಲಾರಸಗ್ರಹಣ ಸಂಗೀತದಲ್ಲಿ ತಾಳ-ವಾದ್ಯ ಬಳಗ ಜೊತೆ ನೀಡಿತು.ದಾಸರ ಪದ, ವಚನಗಳನ್ನು ಒಂದು ಗಂಟೆ ಕಾಲ ಹಾಡಲಾಯಿತು. ಪ್ರತಿ ಹಾಡಿಗೂ ಮುನ್ನ ವಿದುಷಿ ಸುಕನ್ಯಾ ಪ್ರಭಾಕರ್ ಸಾಹಿತ್ಯ, ಸಂಗೀತದ ಕಿರು ಪರಿಚಯ ಮಾಡಿಕೊಟ್ಟರು. ವಿದ್ಯಾರ್ಥಿನಿಯರು ತಾಳ್ಮೆಯಿಂದ ಅವರ ಆಲಿಸಿದರು. ಹಾಡಿ ಧಾಟಿಯ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಸಂವಾದದ ರೀತಿಯಲ್ಲಿ ನಡೆದ ಈ ಸಂಗೀತ ಕಾರ್ಯಕ್ರಮ ವಿದ್ಯಾರ್ಥಿನಿಯರಿಗೆ ಸಂಗೀತದ ಹಲವು ಆಯಾಮಗಳನ್ನು ಪರಿಚಯ ಮಾಡಿಕೊಟ್ಟಿತು.ಎರಡು ದಿನಗಳ ಕಾರ್ಯಾಗಾರದಲ್ಲಿ ನಂಜನಗೂಡು, ತಿ.ನರಸೀಪುರ, ಮೈಸೂರು ಸೇರಿದಂತೆ ವಿವಿಧ ಕಾಲೇಜುಗಳ 100 ವಿದ್ಯಾರ್ಥಿನಿಯರು, ಶಿಕ್ಷಕರು ಹಾಗೂ ಸಂಗೀತ ಆಸಕ್ತರು ಪಾಲ್ಗೊಂಡರು. ವಿದ್ವಾನ್ ಜಿ.ಎಸ್.ರಾಮಾನುಜನ್, ವಿ.ರಾಥೇಶ್, ವಿ.ರಮೇಶ್, ವಿ.ಅರ್ಜುನ್ ಅವರ ಸಹಕಾರದಲ್ಲಿ ಸಂಗೀತ ಸಂಜೆ ಸಮಾರೋಪಗೊಂಡಿತು.ಪ್ರಾಂಶುಪಾಲ ಎಚ್.ಬಿ.ಮಲ್ಲಿಕಾರ್ಜುನ, ಡಾ.ಡಿ. ಶೀಲಾಕುಮಾರಿ, ಟಿ.ಎಸ್.ವೇಣು ಗೋಪಾಲ್ ಮತ್ತಿತರರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.