ಮಹಿಳೆಯರ ಕ್ರಿಕೆಟ್ ಶುರುವಾದದ್ದು ಹೇಗೆ?
ಇಂಗ್ಲೆಂಡ್ನ ಗ್ರಾಮೀಣ ಭಾಗಗಳಲ್ಲಿ 19ನೇ ಶತಮಾನದಲ್ಲೇ ಮಹಿಳೆಯರು ಕ್ರಿಕೆಟ್ ಆಡುತ್ತಿದ್ದರು. ಮೊದಲ ಮಹಿಳಾ ಕ್ರಿಕೆಟ್ ಕ್ಲಬ್ನ ಹೆಸರು ವೈಟ್ ಹೀಟರ್ ಕ್ರಿಕೆಟ್ ಕ್ಲಬ್. ಯಾರ್ಕ್ಷೈರ್ನಲ್ಲಿ 1887ರಂದು ಹುಟ್ಟಿದ ಕ್ಲಬ್ ಅದು. 1926ರಲ್ಲಿ ಮಹಿಳಾ ಕ್ರಿಕೆಟ್ ಸಂಸ್ಥೆ ಪ್ರಾರಂಭವಾಯಿತು. ಆನಂತರ ಮಹಿಳಾ ಕ್ರಿಕೆಟ್ ಬೆಳೆಯತೊಡಗಿತು.

ಮೊದಲ `ಮೂರು ದಿನಗಳ ಟೆಸ್ಟ್ ಕ್ರಿಕೆಟ್ ಸರಣಿ' ಆಡಿದ್ದು ಯಾರ್ಯಾರು?
ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಮೊದಲ `ಮೂರು ದಿನಗಳ ಟೆಸ್ಟ್ ಕ್ರಿಕೆಟ್ ಸರಣಿ' ನಡೆಯಿತು. 1934, ಡಿಸೆಂಬರ್ನಲ್ಲಿ ಆಸ್ಟ್ರೇಲಿಯಾದ ಬ್ರಿಸ್ಬೇನ್ನ ಪ್ರದರ್ಶನ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಇಂಗ್ಲೆಂಡ್ ಒಂಬತ್ತು ವಿಕೆಟ್ಗಳಿಂದ ಗೆಲುವು ಸಾಧಿಸಿತು.

ಮಹಿಳೆಯರ ಕ್ರಿಕೆಟ್ಗೆ ಭಾರತ ಕಾಲಿಟ್ಟಿದ್ದು ಯಾವಾಗ?
1976-77ರಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಆರು ಪಂದ್ಯಗಳ ಟೆಸ್ಟ್ ಸರಣಿಯನ್ನು ಮೊದಲು ಆಡಿತು. ಆ ಸರಣಿ ಡ್ರಾನಲ್ಲಿ ಅಂತ್ಯಗೊಂಡಿತು.

ಭಾರತದ ಪರವಾಗಿ ಟೆಸ್ಟ್ ಶತಕ ಗಳಿಸಿದ ಮೊದಲ ಆಟಗಾರ್ತಿ ಯಾರು?
ಕರ್ನಾಟಕದ ಶಾಂತಾ ರಂಗಸ್ವಾಮಿ. ಅವರು ಭಾರತ ತಂಡದ ಮಾಜಿ ನಾಯಕಿ. 1977ರಲ್ಲಿ ನ್ಯೂಜಿಲೆಂಡ್ ವಿರುದ್ಧ ಅವರು 108 ರನ್ ಗಳಿಸಿದರು. ಆ ದೇಶದ ವಿರುದ್ಧ ಮಹಿಳೆಯಿಂದ ದಾಖಲಾದ ಏಕೈಕ ಶತಕ ಅದು.

ಈಗ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಯಾರು?
ಮಿಥಾಲಿ ರಾಜ್. 2005ರಲ್ಲಿ ನಡೆದ ಮಹಿಳೆಯರ ಕ್ರಿಕೆಟ್ ವಿಶ್ವಕಪ್ನಲ್ಲಿ ಭಾರತ ಫೈನಲ್ ಪ್ರವೇಶಿಸುವಲ್ಲಿ ಅವರ ಕಾಣಿಕೆ ಮಹತ್ವವಾದುದು. ಆಸ್ಟ್ರೇಲಿಯಾ ಎದುರು ಫೈನಲ್ನಲ್ಲಿ ಭಾರತ ಸೋಲುಂಡಿತು. 2003ರಲ್ಲಿ ಮಿಥಾಲಿ ರಾಜ್ ಅವರಿಗೆ ಅರ್ಜುನ ಪ್ರಶಸ್ತಿ ಸಂದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.