ಗುರುವಾರ , ಮಾರ್ಚ್ 4, 2021
20 °C

ಮಹಿಳಾ ದಿನಾಚರಣೆಯಲ್ಲಿ ರಾಬಿನ್‌ ಸಿಂಗ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಿಳಾ ದಿನಾಚರಣೆಯಲ್ಲಿ ರಾಬಿನ್‌ ಸಿಂಗ್‌

ಸ್ತ್ರೀಯರಿಗೆ ಗೌರವ ನೀಡುವ ನಿಟ್ಟಿನಲ್ಲಿ ಖ್ಯಾತ ಫುಟ್‌ಬಾಲ್ ಆಟಗಾರ ರಾಬಿನ್ ಸಿಂಗ್ ಸ್ಮೈಲ್ ಫೌಂಡೇಷನ್‌ನೊಂದಿಗೆ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಿದರು. ಅತ್ಯಂತ ಸಂಕಷ್ಟದ ಹಿನ್ನೆಲೆಯಿಂದ ಬಂದು ತಮ್ಮ ಅಸ್ತಿತ್ವ ಕಂಡುಕೊಂಡಿರುವ ಹದಿನೈದು ಹೆಣ್ಣುಮಕ್ಕಳು ಹೋಟೆಲ್ ಮೊನಾರ್ಕ್ ಲಕ್ಸರ್‌ನಲ್ಲಿ ನಡೆದ ಈ ಸಂಭ್ರಮಾಚರಣೆಯ ಭಾಗವಾಗಿದ್ದರು.ರಾಬಿನ್ ಈ ಮಹತ್ತರ ಸೇವಾ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಮಹಿಳಾ ಸಬಲೀಕರಣಕ್ಕೆ ತಮ್ಮ ಸಂಪೂರ್ಣ ಬೆಂಬಲವನ್ನು ಸೂಚಿಸಿದ ಅವರು, ‘ಮಹಿಳಾ ಸಬಲೀಕರಣ ಎಂದರೆ ಸ್ತ್ರೀಯರ ನೈಜ ಮೌಲ್ಯವನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಪುರುಷರಂತೆ ಜೀವನದ ಎಲ್ಲ ಪ್ರಮುಖ ಸಂದರ್ಭಗಳಲ್ಲೂ ಭಾಗಿಯಾಗುವುದು.ಮಹಿಳೆಯರ ಅಭಿವೃದ್ಧಿಯಲ್ಲಿ ಪುರುಷರು ಸಕ್ರಿಯವಾಗಬೇಕು ಎಂಬ ಸ್ಮೈಲ್ ಫೌಂಡೇಷನ್‌ನ ತತ್ವವನ್ನು ನಾನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ. ಈ ಎಲ್ಲ ಹುಡುಗಿಯರು ಅವರಿಗೆ ಅವಕಾಶ ದೊರೆತರೆ ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಬಲ್ಲರು ಎನ್ನುವುದನ್ನು ಸಂಕೇತಿಸುತ್ತಾರೆ. ಅವರಿಗೆ ನನ್ನ ಅಭಿನಂದನೆಗಳು ಮತ್ತು ಎಂದಿಗೂ ಸೋಲನ್ನು ಒಪ್ಪಿಕೊಳ್ಳದ ಹೋರಾಟಗಾರನ ಸ್ಫೂರ್ತಿಯನ್ನು ಅವರಿಂದ ಪಡೆದಿದ್ದೇನೆ’ ಎಂದರು.ಈ ಎಲ್ಲ ಹುಡುಗಿಯರು ಸ್ಮೈಲ್ ಟ್ವಿನ್- ಲರ್ನಿಂಗ್ ಪ್ರೋಗ್ರಾಂ (ಸ್ಟೆಪ್)- ಕಾರ್ಯಕ್ರಮದಿಂದ ಬಂದಿದ್ದಾರೆ. ದೇಶದಾದ್ಯಂತ ‘ಸ್ಟೆಪ್’ ಕೇಂದ್ರಗಳಲ್ಲಿ ಆರು ತಿಂಗಳು ಕೋರ್ಸ್ ತರಬೇತಿ ಪಡೆದ ಯುವಜನರು ಸರ್ವೀಸ್ ಮತ್ತು ರೀಟೇಲ್ ಕಂಪನಿಗಳಲ್ಲಿ ಉದ್ಯೋಗಕ್ಕೆ ಸೇರಿಕೊಳ್ಳಲಿದ್ದಾರೆ.ಈ ಸಂದರ್ಭದಲ್ಲಿ ಸ್ಮೈಲ್ ಫೌಂಡೇಷನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕ್ರಂ ಸಿಂಗ್ ವರ್ಮಾ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.