ಶನಿವಾರ, ಜೂಲೈ 11, 2020
26 °C

ಮಹಿಳಾ ದೌರ್ಜನ್ಯ ಒಗ್ಗಟ್ಟಿನಿಂದ ನಿಯಂತ್ರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಿಳಾ ದೌರ್ಜನ್ಯ ಒಗ್ಗಟ್ಟಿನಿಂದ ನಿಯಂತ್ರಣ

ಬ್ರಹ್ಮಾವರ: ಮಹಿಳೆಯರು ಕಾನೂನು ಮಾಹಿತಿಗಳನ್ನು ಅರಿತು ಅವರ ಮೇಲಾಗುತ್ತಿರುವ ದೌರ್ಜನ್ಯದ ವಿರುದ್ಧ ಜಾಗೃತರಾಗಿ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಉಡುಪಿ ಜಿ.ಪಂ.ಉಪಾಧ್ಯಕ್ಷೆ ಜ್ಯೋತಿ ಶೆಟ್ಟಿ ಹೇಳಿದರು.ಬಾರ್ಕೂರಿನ ಸಂಕಮ್ಮ ತಾಯಿ ರೆಸಾರ್ಟ್‌ನಲ್ಲಿ ಬುಧವಾರ ಉಡುಪಿ ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಜ್ಯ ಮಹಿಳಾ ಆಯೋಗ, ಬಾರ್ಕೂರು ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಮಹಿಳಾ ವೇದಿಕೆ ಮತ್ತು ಬಾರ್ಕೂರು ರೋಟರಿ ಕ್ಲಬ್ ಆಶ್ರಯದಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಉಡುಪಿ ಜಿ.ಪಂ. ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯೆ ಮಲ್ಲಿಕಾ ಬಾಲಕೃಷ್ಣ ಪೂಜಾರಿ, ತಾ.ಪಂ.ಸದಸ್ಯೆ ಗೌರಿ ಪೂಜಾರ್ತಿ, ಕಾಲೇಜು ಪ್ರಾಂಶುಪಾಲ ರಾಜಶೇಖರ ಹೆಬ್ಬಾರ್, ರೋಟರಿ ಕ್ಲಬ್ ಅಧ್ಯಕ್ಷ ಎ.ರತ್ನಾಕರ ಶೆಟ್ಟಿ, ರೋಟರಿ ವಲಯ 2ರ ಮಾಜಿ ಅಸಿಸ್ಟೆಂಟ್ ಗವರ್ನರ್ ಎನ್.ಭೋಜರಾಜ ಶೆಟ್ಟಿ, ಉಪನ್ಯಾಸಕಿ ಮಮತಾ ಎ.ಎಲ್. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಸುಮನ, ಬಿ. ಸುಧಾಕರ ರಾವ್ ಇದ್ದರು. ನಂತರ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಬಿ. ನಾಗರಾಜ್ ಮಹಿಳೆ- ಕಾನೂನು, ಸಾಂತ್ವನ ಕೇಂದ್ರದ ಕೌಟುಂಬಿಕ ಸಲಹೆಗಾರರಾದ ಸುಮತಿ ಕೆ.ಪಿ. ಸಾಂತ್ವನ ಕೇಂದ್ರದ ಕಾರ್ಯನಿರ್ವಹಣೆ, ನೊಂದ ಮಹಿಳೆಯರ ಸಮಸ್ಯೆಗಳು, ಕೌನ್ಸಿಲಿಂಗ್ ಕುರಿತು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸದಾನಂದ ನಾಯಕ್ ಕೌಟುಂಬಿಕ ದೌರ್ಜನ್ಯ ಅಧಿನಿಯಮ ಕುರಿತು ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.