ಸೋಮವಾರ, ಮೇ 17, 2021
28 °C

ಮಹಿಳೆಯರ ಸಮಸ್ಯೆಗೆ ಸಂಶೋಧನೆ ಮೂಲಕ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಸಮಾಜದಲ್ಲಿ ಮಹಿಳೆ ಮತ್ತು ಮಕ್ಕಳ ಹಲವಾರು ಸಮಸ್ಯೆಗಳಿವೆ; ಅವುಗಳಿಗೆ ವಿಶ್ವವಿದ್ಯಾಲಯ ಸಂಶೋಧನೆಗಳ ಮೂಲಕ ಪರಿಹಾರ ಕಂಡುಹಿಡಿಯಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸಿ. ಮಂಜುಳಾ ಸಲಹೆ ಮಾಡಿದರು. ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ಜ್ಞಾನಸಹ್ಯಾದ್ರಿಯಲ್ಲಿ ಮಂಗಳವಾರ ಮಹಿಳೆಯರ ಮೂಲ ಸೌಕರ್ಯಗಳ ಅಭಿವೃದ್ಧಿ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.ಪ್ರಾಸ್ತಾವಿಕ ಮಾತನಾಡಿದ ಘಟಕದ ಸಂಯೋಜನಾಧಿಕಾರಿ ಡಾ.ರೇಚಲ್ ಬಾರಿ, ವಿಶ್ವವಿದ್ಯಾಲಯ ದಂತಗೋಪುರ ಆಗಬಾರದು. ವಿಶ್ವವಿದ್ಯಾಲಯದ ವ್ಯಾಪ್ತಿಯ ಗ್ರಾಮೀಣ ಮಹಿಳೆಯರಿಗೆ ಈ ಘಟಕ ನೆರವಾಗಬೇಕು. ಇದಕ್ಕೆ ವಿಶ್ವವಿದ್ಯಾಲಯದ ಎಲ್ಲರ ಸಹಕಾರ ಮುಖ್ಯ ಎಂದರು.ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಎಸ್.ಎ. ಬಾರಿ ಮಾತನಾಡಿ, ವಿದೇಶಿ ಮಹಿಳಾ ವಿದ್ವಾಂಸರನ್ನು ಇಲ್ಲಿಗೆ ಕರೆಸುವ ಮೂಲಕ ಮಹಿಳಾ ಸಮಸ್ಯೆಗಳ ಕುರಿತು ಚಿಂತನೆ ನಡೆಸಬೇಕು. ಸುವರ್ಣ ಮಹೋತ್ಸವದ ವೇಳೆಗೆ ಈ ಘಟಕ ಅಂತರರಾಷ್ಟ್ರೀಯಮಟ್ಟದ ಕೇಂದ್ರವಾಗಲಿದೆ ಎಂದು ಅಭಿಪ್ರಾಯಪಟ್ಟರು.ಸಮಾರಂಭದಲ್ಲಿ ಕುಲಸಚಿವರಾದ ಪ್ರೊ.ಟಿ.ಆರ್. ಮಂಜುನಾಥ್, ಪ್ರೊ.ಎಸ್.ಎ. ಜಾವೀದ್, ಹಣಕಾಸು ಅಧಿಕಾರಿ ಆರ್. ಹಿರೇಮಣಿ ನಾಯ್ಕ ಉಪಸ್ಥಿತರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.