ಚಿತ್ರದುರ್ಗ: ಮಹಿಳೆಯರು ತಮ್ಮ ಹಕ್ಕು ಹಾಗೂ ಬೇಡಿಕೆಗಳನ್ನು ಈಡೇರಿಸಿ ಕೊಳ್ಳಬೇಕಾದರೆ, ಸಂಘಟನೆ ಮತ್ತು ಪ್ರಜ್ಞಾವಂತಿಕೆ ಬೆಳೆಸಿಕೊಳ್ಳಬೇಕು ಎಂದು ಒಂದನೇ ಹೆಚ್ಚುವರಿ ಕಿರಿಯ ಸಿವಿಲ್ ಮತ್ತು ಜೆಎಂಎಫ್ ನ್ಯಾಯಾಲಯದ ನ್ಯಾಯಾಧೀಶ ರಾದ ರೇಷ್ಮಾ ಕೆ.ಗೋಣಿ ಸಲಹೆ ನೀಡಿದರು.

ನಗರದ ವಕೀಲರ ಭವನದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ವಿಶ್ವ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ‘ಕಾನೂನು ಅರಿವು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅನಾದಿ ಕಾಲದಿಂದ ಪ್ರಸ್ತುತದವರೆಗೂ ಮಹಿಳೆಯರನ್ನು ಎರಡನೇ ದರ್ಜೆಯಲ್ಲಿ ನೋಡಲಾಗುತ್ತಿದೆ. ಮಹಿಳೆಯರಲ್ಲಿ ಕಾನೂನಿನ ಅರಿವಿಲ್ಲದ ಕಾರಣ ನ್ಯಾಯಯುತವಾಗಿ ಸಿಗಬೇಕಾದ ಹಕ್ಕುಗಳು ಇಂದಿಗೂ ಲಭ್ಯವಾಗಿಲ್ಲ. ಈ ಪರಿಸ್ಥಿತಿ ಬದಲಾಗಬೇಕು. ಜತೆಗೆ ಪುರುಷ ಮತ್ತು ಮಹಿಳೆಯರು ಸರಿಸಮನಾಗಿ ಬದುಕುವಂತಾಗಲು ಸಾಕಷ್ಟು ಚಿಂತನೆ ನಡೆಸಬೇಕಿದೆ ಎಂದರು.

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಎಚ್.ಎ.ಮೋಹನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ತಮ್ಮ ಮುಂದಿನ ಭವಿಷ್ಯ ದೃಷ್ಟಿಕೋನ ಹಾಗೂ ದುಷ್ಕೃತ್ಯಗಳಿಂದ ರಕ್ಷಿಸಿಕೊಳ್ಳಲು ಗಂಭೀರವಾಗಿ ಚಿಂತನೆ ನಡೆಸಬೇಕು. ಕೆಟ್ಟ ಪ್ರವೃತ್ತಿ ಮೆಟ್ಟಿ ನಿಲ್ಲಲು ಅಗತ್ಯ ಕಾನೂನಿನ ಅಂಶಗಳ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಎರಡನೇ ಹೆಚ್ಚುವರಿ ಕಿರಿಯ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ಟಿ.ಎಂ.ನಿವೇದಿತಾ ಮಾತನಾಡಿ, ದೇಶದಲ್ಲಿ ಬಹುತೇಕ ಮಹಿಳೆಯರು ಶಿಕ್ಷಣದಿಂದ ವಂಚಿತರಾಗಿರುವ ಕಾರಣ ಅವರಿಗಾಗಿ ಇರುವಂತಹ ಹಕ್ಕುಗಳ ಬಗ್ಗೆ ಮಾಹಿತಿಯೇ ಇಲ್ಲದಂತಾಗಿದೆ. ಅವುಗಳನ್ನು ಪಡೆಯುವ ಸಲುವಾಗಿ ಮೊದಲು ಶಿಕ್ಷಿತರಾಗಿ ನಂತರ ಸಂಘಟಿತರಾಗಿ ಎಂದು ಕರೆ ನೀಡಿದರು.

ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಸಿ.ಶಿವುಯಾದವ್ ಮಾತನಾಡಿ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭ್ರಷ್ಟ, ದುಷ್ಟ ಹಾಗೂ ಶ್ರೀಮಂತ ಅಭ್ಯರ್ಥಿಗೆ ಮತ ಚಲಾಯಿಸುವುದನ್ನು ಬಿಟ್ಟು ದೇಶ ಹಾಗೂ ಪ್ರಜೆಗಳನ್ನು ರಕ್ಷಿಸುವಂತಹ ಉತ್ತಮ ಅಭ್ಯರ್ಥಿಗೆ ಮತದಾನ ಕಡ್ಡಾಯವಾಗಿ ಮಾಡಿ ಎಂದು ಮಹಿಳೆಯರಿಗೆ ಸಲಹೆ ನೀಡಿದರು.

ಜಿಲ್ಲಾ ಪಂಚಾಯ್ತಿ ಸಿಇಒ ಮಂಜುಶ್ರೀ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಂಜೇಗೌಡ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಜಿ.ಕೃಷ್ಣಮೂರ್ತಿ, ಕಾರ್ಯದರ್ಶಿ ವಿ.ಅಶೋಕ್, ಸಿಡಿಪಿಓ ತಿರುಮಲಯ್ಯ ಇದ್ದರು. ವಕೀಲರಾದ ಡಿ.ಕೆ.ಶೀಲಾ, ಸಿ.ಎಂ.ಸುಜಾತಾ ಉಪನ್ಯಾಸ ನೀಡಿದರು.

ಮಹಿಳೆಯರು ಸಂಘಟಿತರಾಗಿ
ಹೋರಾಟ ಮನೋಭಾವ ಇಲ್ಲದಿದ್ದರೆ, ನಮ್ಮ ದೇಶದಲ್ಲಿ ಯಾವುದೇ ಹಕ್ಕನ್ನು ಪಡೆಯಲು ಸಾಧ್ಯವಾಗಿಲ್ಲ. ಅದಕ್ಕಾಗಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ತಮ್ಮಗಿರುವ ಹಕ್ಕು ಪಡೆಯುವುದಕ್ಕಾಗಿ ಸಂಘಟಿತರಾಗಿ ಹೋರಾಡಬೇಕು. ಜತೆಗೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.
– ಎಚ್.ಎ.ಮೋಹನ್, ನ್ಯಾಯಾಧೀಶ

ಅನುಷ್ಠಾನದಲ್ಲಿ ವಿಫಲ
ನಮ್ಮ ದೇಶದಲ್ಲಿ ಮಹಿಳೆಯರ ಹಿತಕ್ಕಾಗಿ ಸಾಕಷ್ಟು ಕಾನೂನು ಜಾರಿಯಾಗುತ್ತವೆ. ಆದರೆ, ಪ್ರತ್ಯೇಕ ನ್ಯಾಯಾಲಯವಾಗಲಿ, ಅದಕ್ಕೆ ತಕ್ಕಂತ ಸಿಬ್ಬಂದಿ ಇಲ್ಲದಂತಾಗಿ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಮಹಿಳೆಯರ ಸಮಾನತೆಗೆ ಅಡ್ಡವಾಗಿ ನಿಂತಿರುವುದೇ ಲಿಂಗಭೇದ. ಅದಕ್ಕಾಗಿ ಸ್ತ್ರೀಯರು ತಮ್ಮ ಸಮಾನತೆಗಾಗಿ ಹೋರಾಡಿ ಆದರೆ, ಸ್ವೇಚ್ಛಾಚಾರ, ಆಧುನಿಕ ಜೀವನ ಶೈಲಿಗಾಗಿ ಹೋರಾಟ ಸಲ್ಲ. ಈ ನೆಲದ ಸಂಸ್ಕೃತಿ ಸರ್ವ ಕಾಲಕ್ಕೂ ಪ್ರಸ್ತುತವಾಗಿರಲಿ.
–ಡಿ.ಕೆ.ಶೀಲಾ, ವಕೀಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.