ಆನೇಕಲ್: ಮಹಿಳಾ ಸಬಲೀಕರಣದಿಂದ ದೇಶದ ಪ್ರಗತಿ ಸಾಧ್ಯ ಎಂದು ಮಾಯಸಂದ್ರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕಲಾವತಿ ವೆಂಕಟೇಶ್ ನುಡಿದರು.

ತಾಲ್ಲೂಕಿನ ಮಂಚನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಮಂಗಳವಾರ ಸಮರ್ಥ ಯುವಜನ ಸೇವಾ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತೆ ನಾಗವೇಣಿ ಮಾತನಾಡಿ, ಮಹಿಳೆ ಎಲ್ಲ ರಂಗಗಳಲ್ಲೂ ದಾಪುಗಾಲಿಟ್ಟು ಉನ್ನತ ಸಾಧನೆ ಮಾಡುತ್ತಿರುವುದು ಮಹಿಳೆಯ ಶಕ್ತಿಯ ಪ್ರತೀಕವಾಗಿದೆ ಎಂದರು.

ಸಮರ್ಥ ಯುವ ಜನ ಸೇವಾ ಸಂಸ್ಥೆಯ ಅಧ್ಯಕ್ಷ ಆದೂರು ಪ್ರಕಾಶ್ ಮಾತನಾಡಿ, ಜಾಗತಿಕರಣದ ಪ್ರಸ್ತುತ ದಿನಗಳಲ್ಲಿ ಮಹಿಳೆಯರಿಗೆ ಹಲವು ಸವಾಲುಗಳು ಎದುರಾಗುತ್ತಿವೆ. ಇವುಗಳನ್ನು ಧೈರ್ಯದಿಂದ ಎದುರಿಸಿ ಮುಂದೆ ಬರಬೇಕು ಎಂದರು.

ಭಗತ್ಸಿಂಗ್ ಯುವ ಸೇನಾ ಸಂಘದ ಅಧ್ಯಕ್ಷ ಬಳ್ಳೂರು ಬಾಬು, ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಶ್ಯಾಮಲಾ, ಸಮರ್ಥ ಯುವಜನ ಸೇವಾ ಸಂಸ್ಥೆಯ ಉಪಾಧ್ಯಕ್ಷ ಮಹೇಶ್ ಊಗಿನಹಳ್ಳಿ, ಸಿಆರ್ಪಿ ಚಂದ್ರಪ್ಪ, ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನಾರಾಧ್ಯ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.