ಮಾಗಡಿ: ಸಿದ್ದಗಂಗೆಯ ಡಾ. ಶಿವಕುಮಾರ ಸ್ವಾಮೀಜಿ ಅವರ 105ನೇ ಜನ್ಮದಿನದ ಸವಿ ನೆನಪಿಗಾಗಿ ಸರ್ಕಾರ ಹೇಮಾವತಿ ನೀರನ್ನು ಮಾಗಡಿ ತಾಲ್ಲೂಕಿಗೆ ಹರಿಸಿ ಶ್ರೀಗಳಿಗೆ ಭಕ್ತಿ ಸಮರ್ಪಿಸಬೇಕು ಎಂದು ಕೆಪಿಸಿಸಿ ಸದಸ್ಯ ಎ. ಮಂಜು ಅಭಿಪ್ರಾಯಪಟ್ಟರು.

ಪಟ್ಟಣದ ಡ್ಯೂಮ್ಲೈಟ್ ಸರ್ಕಲ್ನಲ್ಲಿ ಜಗಜ್ಯೋತಿ ಬಸವೇಶ್ವರ ಗೆಳೆಯರ ಬಳಗದ ವತಿಯಿಂದ ಭಾನುವಾರ ನಡೆದ ಸಿದ್ದಗಂಗೆಯ ಡಾ.ಶಿವಕುಮಾರ ಸ್ವಾಮೀಜಿಗಳ 105ನೇ ಜನ್ಮದಿನ ಆಚರಿಸಿ ಮಾತನಾಡಿದ ಅವರು, ಬಸವಣ್ಣನ ಕಾಯಕ ನಿಷ್ಠೆಯನ್ನು ಜನಮಾನಸದಲ್ಲಿ ಬಿತ್ತಿ ಬೆಳೆಸಿದ ಡಾ. ಶಿವಕುಮಾರ ಸ್ವಾಮಿಜಿ ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕಿದೆ ಎಂದು ಆಗ್ರಹಿಸಿದರು.

ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆ.ಎಚ್. ಕೃಷ್ಣಮೂರ್ತಿ, ತಾ.ಪಂ. ಮಾಜಿ ಸದಸ್ಯ ಎ. ಮಂಜುನಾಥ್, ಕಲಾವಿದೆ ಗಣೇಶ್, ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎನ್.ಮಂಜುನಾಥ್, ಕೆ.ವಿ. ಬಾಲು, ಕುದೂರಿನ ಪುರುಷೋತ್ತಮ್, ಹೊಂಬಾಳಮ್ಮನ ಪೇಟೆಯ ರಂಗಪ್ಪ, ಡಾ. ಶಿವಕುಮಾರ ಸ್ವಾಮಿಜಿಯವರ ಮಾನವೀಯ ಬದುಕನ್ನು ಕುರಿತು ಮಾತನಾಡಿದರು. ಇಂದಿಗೂ ಕ್ರಿಯಾಶೀಲತೆಗೆ ಮಾದರಿಯಾಗಿರುವ ಸ್ವಾಮೀಜಿಯವರ ವ್ಯಕ್ತಿತ್ವ ಯುವಜನತೆಗೆ ಮಾದರಿಯಾಗಿದೆ ಎಂದರು.

ಜಗಜ್ಯೋತಿ ಬಸವೇಶ್ವರ ಗೆಳೆಯರ ಬಳಗದ ಮಹೇಶ್, ತಿಮ್ಮರಾಜು, ಶೇಖರ್, ಆನಂದ್, ಚಿಕ್ಕಣ್ಣ, ಚೆಟ್ಟಿ, ಕುಮಾರ್, ಹೇಮಂತ್, ವೀರೇಗೌಡ, ಹೊಸಹಳ್ಳಿಯ ಮುದ್ದಮ್ಮ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.