ಬುಧವಾರ, ಜನವರಿ 22, 2020
24 °C

ಮಾಜಿ ಶಾಸಕ ವಿಠಲ ಹೇರೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಕೋಲಿ ಸಮಾಜದ ನಾಯಕ, ವಿಧಾನ ಪರಿಷತ್ ಮಾಜಿ ಸದಸ್ಯ ವಿಠಲ ಹೇರೂರ (60) ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಗಿನ ಜಾವ ನಿಧನರಾದರು.ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಹೇರೂರ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಬೆಳಿಗ್ಗೆ 2.30 ಗಂಟೆಗೆ ಕೊನೆ ಯುಸಿರೆಳೆದರು. ಇವರು ಶೋಷಿತರ ಪರವಾದ ಹೋರಾಟದಲ್ಲೇ ತಮ್ಮನ್ನು ತೊಡಗಿಸಿಕೊಂಡಿದ್ದರು.ಡಿ. 4 ರಂದು ಮಧ್ಯಾಹ್ನ 1 ಗಂಟೆಗೆ ಅಫಜಲಪುರ ತಾಲ್ಲೂಕು ದೇವಲಗಾಣಗಾಪುರದಲ್ಲಿರುವ ತಿಪ್ಪಣ್ಣ ಕಂಠೆಪ್ಪ ಹೇರೂರ ಪ್ರೌಢ ಶಾಲೆ ಆವರಣದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)