ಕುಮಟಾ: ಇಲ್ಲಿಯ ಅಘನಾಶಿನಿ ಹಿನ್ನೀರು ಪ್ರದೇಶವಾದ ಮಾಣಿಕಟ್ಟಾ ಗಜನಿಯ ಸುಮಾರು 400 ಎಕರೆ ಪ್ರದೇಶದ ವರ್ಷದ ಕೊನೆಯ ಮೀನು ಹಿಡಿಯುವ ಸುಗ್ಗಿ ಸೋಮವಾರ ಕಣ್ಮನ ಸೆಳೆಯಿತು.

ಮಾಣಿಕಟ್ಟಾ ಗಜನಿಯಲ್ಲಿ ಪ್ರತೀ ವರ್ಷ ಸಾಧ್ಯವಾದಷ್ಟು ಪ್ರಮಾಣದಲ್ಲಿ ಕಗ್ಗ ಭತ್ತ ಬೆಳೆಯುತ್ತಾರೆ. ಕಗ್ಗ ಭತ್ತ ಬಿತ್ತನೆಗೆ ಮುನ್ನ ಗಜನಿಯಲ್ಲಿದ್ದ ಉಪ್ಪು ನೀರು ಹೊರಗೆ ಹೋಗಲು ಮಳೆ ಬಿದ್ದ ನಂತರ ನದಿಯ ನೀರನ್ನು ಗಜನಿ ಒಳಗೆ-ಹೊರಗೆ ತೆಗೆದುಕೊಳ್ಳಲಾಗುತ್ತದೆ.

ನೀರು ಗಜನಿ ಒಳಗೆ- ಹೊರಗೆ ಬಂದು ಹೋಗುವಾಗ ಜಂತ್ರಡಿ ಗೇಟಿನಲ್ಲಿ ಬಲೆ ಕಟ್ಟಿ ಸಾಕಷ್ಟು ಮೀನು ಹಿಡಿಯಲಾಗುತ್ತದೆ. ಹೀಗೆ ಬಲೆಗೆ ಬಿದ್ದ ಮೀನು ರೈತರಿಗೆ ಅಧಿಕ ಲಾಭ ತರುತ್ತದೆ. ಹೀಗೆ ಸಾಮೂಹಿಕವಾಗಿ ಮೀನು ಹಿಡಿಯುವುದು ಒಂದೆರಡು ದಿನ ಮಾತ್ರ ಇರುವುದು ವಿಶೇಷ.

ಮಳೆಗಾಲದಲ್ಲಿ ಸಮುದ್ರ ಮೀನು ಗಣನೀಯ ಮಟ್ಟದಲ್ಲಿ ಕಡಿಮೆ ಆಗುವಾಗ ಗಜನಿ ಮೀನಿಗೆ ಬೇಡಿಕೆ ಹೆಚ್ಚು. ಎಷ್ಟೋ ಮೀನುಗಾರ ಮಹಿಳೆಯರು ನೇರವಾಗಿ ಗಜನಿಗೆ ಬಂದು ಮೀನು ಖರೀದಿ ಮಾಡಿ ಅದನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.

ಇಲ್ಲಿ ಸಿಗುವ ನೋಗಲಾ, ಕಾಗಳಸಿ, ಮಂಡ್ಲಿ, ಬೈಗೆ, ಮಡ್ಲೆ, ಹೂವಿನ ಸೆಳಕ, ಕೊಕ್ಕರ, ಕುರಡೆ, ಕೆಂಸ, ಯೇರಿ, ಪೇಡಿ, ನೆಪ್ಪೆ, ಹುಲಕಾ, ಒಣ ಕಾಂಡಿ ಮುಂತಾದ ಒಂದೊಂದು ಮೀನಿಗೂ ಒಂದೊಂದು ಬಗೆಯ ರುಚಿಯಿದ್ದು, ಅವು ಬಿಸಿ ದೋಸೆಯಂತೆ ಖರ್ಚಾಗುತ್ತದೆ.

ಗಜನಿಯಲ್ಲಿ ಉಪ್ಪು ನೀರು ಖಾಲಿಯಾದ ನಂತರ ಇನ್ನು 15 ದಿನದೊಳಗೆ ಕಗ್ಗ ಭತ್ತದ ಬಿತ್ತನೆ ಮಾಡಲಾಗುತ್ತದೆ. ಇಲ್ಲಿಯ ಮಾಣಿಕಟ್ಟಾ ರೈತರ ಒಕ್ಕೂಟದ ರೈತರು ಕಡ್ಡಾಯವಾಗಿ ಕಗ್ಗ ಭತ್ತದ ಕೃಷಿ ಮಾಡಬೇಕಿದ್ದು, ತಪ್ಪಿದವರಿಗೆ ಒಕ್ಕೂಟದ ವತಿಯಿಂದ ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.

ಆದರೆ ಮೀನು ಹಾಗೂ ಕಗ್ಗ ಭತ್ತದ ನೈಸರ್ಗಿಕ ಕೃಷಿಗೆ ಇಷ್ಟೊಂದು ವಿಫುಲ ಅವಕಾಶವಿರುವ ಗಜನಿಯಲ್ಲಿ 40 ವರ್ಷಗಳ ಹಿಂದೆ ನಿರ್ಮಿಸಿರುವ ಕಾರ್ಲ್ಯಾಂಡ್ ಕಟ್ಟೆಯ ನಿರ್ವಹಣೆ ಮಾತ್ರ ಇನ್ನೂ ಆಗಿಲ್ಲ.

ಕಾರ್ಲ್ಯಾಂಡ್ ಕಟ್ಟೆ ಅಲ್ಲಲ್ಲಿ ಕಿತ್ತು ಹೋಗಿ ನೆರೆ ನೀರು ಗದ್ದೆಗೆ ನುಗ್ಗಿ ಮೊಳಕೆ ಹಂತದಲ್ಲಿರುವ ಕಗ್ಗ ಭತ್ತದ ಬೀಜ ಕೊಚ್ಚಿಕೊಂಡು ಹೋಗುವುದರಿಂದ ಕಗ್ಗ ಭತ್ತದ ಕೃಷಿಯಲ್ಲಿ ರೈತರು ಇತ್ತೀಚೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ.

ಆದರೆ ಮಾಣಿಕಟ್ಟಾ ರೈತರ ಒಕ್ಕೂಟದ ನಿಯಮಕ್ಕೆ ಬಾಗಿ ಕಗ್ಗ ಭತ್ತದ ಕೃಷಿಯನ್ನು ಅನಿವಾರ್ಯವಾಗಿ ರೈತರು ಅಷ್ಟಿಷ್ಟಾದರೂ ಮಾಡುತ್ತಾರೆ. ಕಾರ್ಲ್ಯಾಂಡ್ ಕಟ್ಟೆ ದುರಸ್ತಿಗೆ ಕೋಟ್ಯಂತರ ರೂಪಾಯಿ ಅಗತ್ಯವಿದ್ದು ಯಾವ ಸರಕಾರವೂ ರೈತರ ಈ ಸಮಸ್ಯೆ ಬಗ್ಗೆ ಹಿಂದಿನಿಂದಲೂ ತಲೆ ಕೆಡಿಸಿಕೊಂಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.