ಬುಧವಾರ, ಮೇ 12, 2021
17 °C

ಮಾಧ್ಯಮಗಳಲ್ಲಿ ಅಗ್ನಿ-5

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಐಎಎನ್‌ಎಸ್): ಭಾರತ `ಅಗ್ನಿ-5~ ಖಂಡಾಂತರ ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಪ್ರಯೋಗ ಮಾಡಿರುವುದನ್ನು ಅಮೆರಿಕ, ಬ್ರಿಟನ್ ಮತ್ತು ದಕ್ಷಿಣ ಏಷ್ಯಾ ಸೇರಿದಂತೆ ಜಗತ್ತಿನ ಪ್ರಮುಖ ಮಾಧ್ಯಮಗಳು ಮಹತ್ವದ ಸುದ್ದಿಯಾಗಿ ಬಿಂಬಿಸಿವೆ. ಅದರಲ್ಲೂ ಮುಖ್ಯವಾಗಿ ಈ ಕ್ಷಿಪಣಿ ವ್ಯಾಪ್ತಿಯು ಚೀನಾದ ಬಹು ಭಾಗವನ್ನು ಒಳಗೊಂಡಿರುವ ಬಗ್ಗೆ ಅವು ಹೆಚ್ಚು ಒತ್ತು ನೀಡಿವೆ.



ಈ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವು ಏಷ್ಯಾದಲ್ಲಿ ಶಸ್ತ್ರಾಸ್ತ್ರ ಪೈಪೋಟಿ ತೀವ್ರಗೊಳಿಸುವಂತಹುದಾಗಿದೆ. ಇದರೊಂದಿಗೆ ಉಭಯ ರಾಷ್ಟ್ರಗಳ ನಡುವಿನ ಸೇನಾ ಸಾಮರ್ಥ್ಯದ ಅಂತರ ತಗ್ಗಿದೆ ಎಂದು ನ್ಯೂಯಾರ್ಕ್ ಟೈಮ್ಸ ವಿಶ್ಲೇಷಿಸಿದೆ.



ಭಾರತವು ತನ್ನ ಕ್ಷಿಪಣಿ ಸಾಮರ್ಥ್ಯದ ಬಗ್ಗೆ ಚೀನಾಕ್ಕೆ ಸ್ಪಷ್ಟ ಸಂದೇಶ ಕಳುಹಿಸಿದಂತಾಗಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಹೇಳಿದೆ.



2014-15ರಲ್ಲಿ ಸಶಸ್ತ್ರ ಪಡೆಗೆ ಸೇರ್ಪಡೆಯಾಗಲಿರುವ ಈ ಕ್ಷಿಪಣಿಯಿಂದ ಭಾರತದ ಅಣ್ವಸ್ತ್ರ ಪ್ರತಿರೋಧ ಸಾಮರ್ಥ್ಯ ಮತ್ತಷ್ಟು ಹೆಚ್ಚಾಗಲಿದೆ ಎಂದು ಬಿಬಿಸಿ ವರದಿ ಮಾಡಿದೆ. ಚೀನಾದ ಮೇಲೆ ಕಣ್ಣಿಟ್ಟು ಭಾರತವು ದೂರಗಾಮಿ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ನಡೆಸಿದೆ ಎಂದು ಪಾಕಿಸ್ತಾನದ ದೈನಿಕ ಟೈಮ್ಸ  ಹೇಳಿದೆ.



ಬಾಂಗ್ಲಾದೇಶದ ದೈನಿಕ `ಡೈಲಿ ಸ್ಟಾರ್~, ಶ್ರೀಲಂಕಾದ `ಮಿರರ್~ ದೈನಿಕಗಳೂ ಕ್ಷಿಪಣಿ ಪರೀಕ್ಷೆ ಬಗ್ಗೆ ಹೆಚ್ಚಿನ ಮಹತ್ವ ನೀಡಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.