ಬೆಂಗಳೂರು: ಬಾಹ್ಯಾಕಾಶ ಮತ್ತು ದೂರಸಂವಹನ ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಯಲ್ಲಿ ಮಾನಕಗಳು ಅದ್ಭುತ ಕೊಡುಗೆ ನೀಡಿವೆ ಎಂದು ಚೆನ್ನೈನ ಡಾ.ಎಂ.ಜಿ.ಆರ್. ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಆರ್.ಎಂ. ವಾಸಗಂ ಹೇಳಿದರು.

ಭಾರತೀಯ ಮಾನಕ ಬ್ಯೂರೋ ನಗರದಲ್ಲಿ ಸೋಮವಾರ ಆಯೋಜಿಸಿದ್ದ `ವಿಶ್ವ ಗ್ರಾಹಕ ದಿನಾಚರಣೆ~ಯಲ್ಲಿ ಮಾತನಾಡಿದ ಅವರು, `ಯಾವುದೇ ಉತ್ಪನ್ನದ ತಯಾರಿಕಾ ಪ್ರಕ್ರಿಯೆಯ ಎಲ್ಲ ಹಂತಗಳಲ್ಲೂ ಗುಣಮಟ್ಟ ಕಾಯ್ದುಕೊಂಡಾಗ ಮಾತ್ರ ಉತ್ತಮ ಉತ್ಪನ್ನ ಹೊರಬರಲು ಸಾಧ್ಯ~ ಎಂದು ಹೇಳಿದರು.

ಪ್ರಪಂಚದ ಎಲ್ಲ ದೇಶಗಳಲ್ಲೂ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಗುಣಮಟ್ಟದ ಮುದ್ರೆಯಿದ್ದಾಗ ಮಾತ್ರ ಉತ್ಪನ್ನದ ಕುರಿತು ಗ್ರಾಹಕನಿಗೆ ವಿಶ್ವಾಸ ಮೂಡುತ್ತದೆ. ಗುಣಮಟ್ಟದ ವಸ್ತುಗಳನ್ನು ಉತ್ಪಾದಿಸಿದಾಗ ಮಾತ್ರ ಯಾವುದೇ ಕಂಪೆನಿಗೆ ತನ್ನ ವ್ಯವಹಾರಗಳಲ್ಲಿ ಧೈರ್ಯ ಮೂಡಲು ಸಾಧ್ಯ ಎಂದರು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಇವತ್ತಿಗೂ ತನಗೆ ಅಗತ್ಯವಿರುವ ಅನೇಕ ಬಿಡಿ ಭಾಗಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಆದರೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಸ್ವದೇಶಿ ತಂತ್ರಜ್ಞಾನದ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ದೇಶ ಸಾಕಷ್ಟು ಪ್ರಗತಿ ಸಾಧಿಸಿದೆ ಎಂದು ಅವರು ಅಭಿಪ್ರಾಯಪಟ್ಟರು.

ಎಕ್ಸಿಂ ಬ್ಯಾಂಕ್ನ ಸಹಾಯಕ ಪ್ರಧಾನ ವ್ಯವಸ್ಥಾಪಕ ಬಿ.ಎನ್. ಪ್ರಾಣೇಶ್, ಭಾರತೀಯ ಮಾನಕ ಬ್ಯೂರೋದ ನಿರ್ದೇಶಕರಾದ ಪಿ. ರಾಜೀವ್, ಎಸ್.ಪಿ. ಹಿರೇಮಠ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.