ಶುಕ್ರವಾರ, ಮಾರ್ಚ್ 5, 2021
16 °C

ಮಾನನಷ್ಟ ಪ್ರಕರಣ: ಕೋರ್ಟ್‌ಗೆ ಕರುಣಾನಿಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾನನಷ್ಟ ಪ್ರಕರಣ: ಕೋರ್ಟ್‌ಗೆ ಕರುಣಾನಿಧಿ

ಚೆನ್ನೈ(ಪಿಟಿಐ): ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆಯನ್ನು ಮಾರ್ಚ್‌ 10ಕ್ಕೆ ಮುಂದೂಡಲಾಗಿದೆ.ತಮಿಳುನಾಡಿನಲ್ಲಿ ನಾಲ್ಕು ವರ್ಷಗಳ ಎಐಎಡಿಎಂಕೆ ಸರ್ಕಾರದ ವೈಫಲ್ಯಗಳ ಕುರಿತು ಡಿಎಂಕೆ ಪಕ್ಷದ ಮುಖವಾಣಿ ‘ಮುರಸೋಳಿ’ಯಲ್ಲಿ ಪ್ರಕಟವಾಗಿದ್ದ ಅವಹೇಳನಕಾರಿ ಎನ್ನಲಾದ ಲೇಖನಕ್ಕೆ ಸಂಬಂಧಿಸಿದಂತೆ ಹೂಡಲಾಗಿದ್ದ ಮಾನನಷ್ಟ ಮೊಕದ್ದಮೆಯ ವಿಚಾರಣೆಗೆ ಜ.18ಕ್ಕೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಪ್ರಧಾನ ಸೆಷನ್ಸ್‌ ನ್ಯಾಯಾಲಯ ಕರುಣಾನಿಧಿ ಅವರಿಗೆ ಸೂಚಿಸಿತ್ತು.ಗಾಲಿ ಕುರ್ಚಿಯಲ್ಲಿ 92 ವರ್ಷದ ಕರುಣಾನಿಧಿ ಅವರು ತಮ್ಮ ವಕೀಲರ ಜತೆ ಸೋಮವಾರ ನ್ಯಾಯಾಲಯಕ್ಕೆ ಹಾಜರಾದರು. ಪ್ರಧಾನ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಎನ್‌. ಔಧಿನಾಥನ್‌ ಅವರು ಕೇವಲ ಒಂದು ನಿಮಿಷದಲ್ಲಿ  ಕರುಣಾನಿಧಿ ಅವರ ಹಾಜರಾತಿಯನ್ನು ದಾಖಲಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.