ಪುತ್ತೂರು: `ಮಾನವ ದ್ರೋಹಿಗಳು ಯಾರೇ ಇರಲಿ, ಅವರನ್ನು ಸಾಮೂಹಿಕವಾಗಿ ಬಹಿಷ್ಕರಿಸುವ ಕೆಲಸವನ್ನು ಎಲ್ಲಾ ಧರ್ಮಿಯರು ಸೇರಿಕೊಂಡು ಮಾಡಬೇಕು~ ಎಂದು ದಕ್ಷಿಣ ಭಾರತ ಎಸ್ಎಸ್ಎಫ್ ಅಧ್ಯಕ್ಷ ಅಬ್ದುರ್ರಶೀದ್ ಝೈನಿ ಹೇಳಿದರು.

ಕರ್ನಾಟಕ ಸುನ್ನಿ ಜಮ್ಇಯ್ಯತುಲ್ ಉಲಮಾ ರಾಜ್ಯ ಅಧ್ಯಕ್ಷ ಖಾಝಿ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಅವರ ನೇತೃತ್ವದಲ್ಲಿ ಮಂಗಳವಾರ ಸಂಜೆ ಪುತ್ತೂರಿನಲ್ಲಿ ನಡೆದ ಮಾನವತಾ ಸಂದೇಶ ಜಾಥಾವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮಾನವತೆಯ ಮೇಲೆ ನಿರಂತರ ದಾಳಿ ನಡೆಯುತ್ತಿದ್ದು, ಇದರಿಂದಾಗಿ ನಾಡಿನ ಪರಂಪರೆ, ಹಿರಿಯರನ್ನು ಗೌರವಿಸುವ ಸಂಸ್ಕೃತಿ ನಾಶವಾಗುತ್ತಿದೆ. ಈ ಸಮಸ್ಯೆಗೆ ರಾಜಕಾರಣಿಗಳಿಂದ ಪರಿಹಾರ ಸಾಧ್ಯವಿಲ್ಲ. ಧಾರ್ಮಿಕ ಮುಖಂಡರು ಮತ್ತು ವಿದ್ವಾಂಸರು ಪ್ರಯತ್ನ ಪಟ್ಟರೆ ಮಾತ್ರ ಮಾನವತೆ ಉಳಿಸಿ ಬೆಳೆಸಲು ಸಾಧ್ಯ. ಧಾರ್ಮಿಕ ವಿದ್ವಾಂಸರ ಮಾತಿಗೆ ಬೆಲೆ ಸಿಗದಿದ್ದಲ್ಲಿ ಸಮಾಜದಲ್ಲಿ ಹೆಚ್ಚು ದುರಂತಗಳು ಸಂಭವಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಮಹೇಶ್ ಕಜೆ ಕಾರ್ಯಕ್ರಮ ಉದ್ಘಾಟಿಸಿದರು. ಯಾವುದೇ ಧರ್ಮ ಸಂಘರ್ಷ ಬೋಧಿಸುವುದಿಲ್ಲ. ಆದರೆ ತಿರುಚಿ ಭಿತ್ತರಿಸುವ ತಪ್ಪುಕಲ್ಪನೆಗಳಿಂದಾಗಿ ಸಮಾಜದಲ್ಲಿ ಸಂಘರ್ಷಗಳಾಗುತ್ತಿವೆ ಎಂದರು.

ಕರ್ನಾಟಕ ಸುನ್ನಿ ಜಮ್ ಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷ ಖಾಝಿ ಪಿ.ಎಂ.ಇಬ್ರಾಹಿಂ ಮುಸ್ಲಿಯ್ಾ ಬೇಕಲ್ ಮಾತನಾಡಿ ನಾವೆಲ್ಲ ಸಹೋದರಂತೆ ಬಾಳಬೇಕು ಎಂದರು.

ವಕ್ಫ್ ಮಂಡಳಿ ಸದಸ್ಯ ಶಫಿ ಸಅದಿ ಮಾತನಾಡಿ ಎಲ್ಲರೂ ತಮ್ಮ ಧರ್ಮಗಳನ್ನು ಸರಿಯಾಗಿ ಆಚರಣೆ ಮಾಡಿದರೆ ಅಹಿತಕರ ಘಟನೆಗಳು ನಡೆಯಲು ಸಾಧ್ಯವಿಲ್ಲ. ಕೋಮುವಾದ ಮುಕ್ತ ಸಮಾಜ ಕಟ್ಟಬಹುದು ಎಂದರು. ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಅಧ್ಯಕ್ಷ ಮಿತ್ತೂರು ಉಸ್ಮಾನ್ ಹಾಜಿ ಅಧ್ಯಕ್ಷತೆ ವಹಿಸಿದ್ದರು.

ಮಾನವತಾ ಮಹಾಸಂಗಮದ ಪ್ರಧಾನ ಕಾರ್ಯದರ್ಶಿ ಎಂ.ಪಿ.ಎಂ.ಅಶ್ರಫ್ ಸಹದಿ ಮಲ್ಲೂರು, ರಾಜ್ಯ ವಕ್ಫ್ ಬೋರ್ಡು ಸದಸ್ಯ ಎನ್.ಕೆ.ಎನ್. ಶಾಫಿ ಸಅದಿ, ಎಸ್ಸೆಸ್ಸೆಫ್ ರಾಜ್ಯ ಸಮಿತಿ ಕಾರ್ಯದರ್ಶಿ ಎಂ.ಬಿ.ಎಂ. ಸ್ವಾದಿಕ್ ಮಾಸ್ಟರ್ , ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಉಮ್ಮರ್ ಸಖಾಫಿ ಮನ್ಸರ್ ತಂಙಳ್ ಗೇರುಕಟ್ಟೆ , ಇಸ್ಮಾಯಿಲ್ ತಂಙಳ್ ಉಜಿರೆ, ಅಶ್ರಫ್ ಸಅದಿ ಮಲ್ಲೂರು, ಎಸ್ಸೆಸ್ಸೆಫ್ ಪುತ್ತೂರು ವಲಯಾಧ್ಯಕ್ಷ ಕೆ.ಎಂ. ಆಶ್ರಫ್ ಸಖಾಫಿ ಕುಂಬ್ರ, ಸೌದಿ ಅರೇಬಿಯಾ ಸುನ್ನೀ ಸೆಂಟರ್ ಅಧ್ಯಕ್ಷ ಮಹಮ್ಮದ್ ಕುಂಞಿ ಹಾಜಿ ,ಅಬ್ದುಲ್ ಸತ್ತಾರ್ ಸಖಾಫಿ ಪುತ್ತೂರು, ಪುತ್ತೂರು ಸಖಾಫಿ ಕೌನ್ಸಿಲ್ ಅಧ್ಯಕ್ಷ ಅಝ್ೀ ಸಖಾಫಿ ಮತ್ತಿತರರು ಇದ್ದರು.

ಪೊಲೀಸರಿಂದ ಭಾಷಣಕ್ಕೆ ತಡೆ: ಮಾನವತಾ ಸಂದೇಶ ಜಾಥಾವನ್ನು ಎಂ.ಟಿ. ರಸ್ತೆಯ ಪ್ರವೇಶ ದ್ವಾರದ ಬಳಿ ನಡೆಸಲಾಗಿದ್ದು, ಇದರಿಂದ ಈ ರಸ್ತೆಯಲ್ಲಿ ಒಂದು ಗಂಟೆಗೂ ಅಧಿಕ ಕಾಲ ರಸ್ತೆ ಸಂಚಾರಕ್ಕೆ ಸಮಸ್ಯೆಯಾಯಿತು. ಭಾಷಣ ನಡೆಯುತ್ತಿದ್ದಂತೆ ಪೊಲೀಸರು ಬಂದು ಕಾರ್ಯಕ್ರಮ ಮುಕ್ತಾಯ ಗೊಳಿಸುವಂತೆ ಸೂಚಿಸಿದರು. ಆ ವೇಳೆ ಭಾಷಣ ಆರಂಭಿಸಿದ್ದ ಕರ್ನಾಟಕ ಸುನ್ನಿ ಜಮ್ ಇಯ್ಯತುಲ್ ಉಲಮಾ ರಾಜ್ಯ ಅಧ್ಯಕ್ಷ ಖಾಝಿ ಪಿ.ಎಂ.ಇಬ್ರಾಹಿಂ ಮುಸ್ಲಿಯ್ಾ ಬೇಕಲ್ ಅವರು ನಾವೆಲ್ಲರೂ ಪರಸ್ಪರ ಸಹೋರರರಂತೆ ಬಾಳೋಣ ಎಂದು ಹೇಳಿ ಕಾರ್ಯಕ್ರಮಕ್ಕೆ ಮುಕ್ತಾಯ ಹಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.