ಮಾನವೀಯ ಮೌಲ್ಯ ಕಾಪಾಡಿ

7

ಮಾನವೀಯ ಮೌಲ್ಯ ಕಾಪಾಡಿ

Published:
Updated:

ಬೆಂಗಳೂರು: `ಪ್ರಾಚೀನ ವಿಚಾರ ಮತ್ತು ಮೌಲ್ಯ ಇಂದಿನ ಜನಾಂಗಕ್ಕೆ ದಾರಿದೀಪ. ಇತಿಹಾಸ ಅರಿಯದ ವನಿಗೆ ಭವಿಷ್ಯದ  ಅರಿವು ಇರಲಾರದು~ ಎಂದು ಬಾಳೆಹೊನ್ನೂರು ರಂಭಾಪುರಿ ಮಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ನುಡಿದರು.ನಗರದಲ್ಲಿ ಶನಿವಾರ ನಡೆದ ಶರನ್ನವರಾತ್ರಿ ದಸರಾ ಮಹೋತ್ಸವ ಹಾಗೂ ಜನಜಾಗೃತಿ ಧರ್ಮ ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿ, `ಮಾನವೀಯ ಮೌಲ್ಯಗಳನ್ನು  ಕಾಯ್ದುಕೊಳ್ಳದಿದ್ದರೆ ಸಮಾಜ ಪತನದತ್ತ ಸಾಗುತ್ತದೆ~ ಎಂದರು.ರಂಭಾಪುರಿ ಸ್ವಾಮೀಜಿಯ 3ಡಿ ಚಿತ್ರ ಬಿಡುಗಡೆ ಮಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, `ಜಾತಿ, ಧರ್ಮಗಳ ಮಧ್ಯೆ ಕಿತ್ತಾಟ ನಡೆದಾಗಲೂ ಭಾರತ ಧರ್ಮ ಗುರುಗಳ ಮಾರ್ಗದರ್ಶನದಲ್ಲಿ ಮುನ್ನಡೆದಿದೆ ಎಂದರು.ವಿಧಾನಪರಿಷತ್ ಸದಸ್ಯ ಎಂ.ವಿ. ರಾಜಶೇಖರನ್, `ದ್ವೇಷಗಳನ್ನು ಬಿಟ್ಟು  ಸಹೋದರತ್ವದಿಂದ ಬಾಳಿದಾಗ ನೆಮ್ಮದಿ ಕಾಣಲು ಸಾಧ್ಯ~ ಎಂದರು.ಸಂಶೋಧಕ ಡಾ.ಎ.ಸಿ.ವಾಲಿ, `ಜಗದ್ಗುರು ರೇವಣಸಿದ್ಧರ ಸಾಮಾಜಿಕ ಕ್ರಾಂತಿ~ ಕುರಿತು ಉಪನ್ಯಾಸ ನೀಡಿದರು. ಯಡಿಯೂರು ಕ್ಷೇತ್ರದ ರೇಣುಕಾ ಶಿವಾಚಾರ್ಯರು `ಮಾನವ ಧರ್ಮದ ಹಿರಿಮೆ~ ಕುರಿತು ಮಾತನಾಡಿದರು.ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಕಳಕಪ್ಪ ಬಂಡಿ, ಪುಟ್ಟಣ್ಣ, ರವಿಸುಬ್ರಹ್ಮಣ್ಯ, ಡಾ.ವೈ.ಸಿ.ವಿಶ್ವನಾಥ್, ಎಂ.ಪಿ.ಕುಮಾರಸ್ವಾಮಿ, ನೆ.ಲ.ನರೇಂದ್ರಬಾಬು, ಮಾಜಿ ಸಚಿವೆಯರಾದ ರಾಣಿ ಸತೀಶ್, ಲೀಲಾದೇವಿ ಆರ್.ಪ್ರಸಾದ್ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry