ಮಾಲೇಗಾಂವ್ ಸ್ಫೋಟ: ಮತ್ತೆ ಮೂವರ ಬಂಧನ

7

ಮಾಲೇಗಾಂವ್ ಸ್ಫೋಟ: ಮತ್ತೆ ಮೂವರ ಬಂಧನ

Published:
Updated:

ಗೋಕಾಕ: ಮಹಾರಾಷ್ಟ್ರದ ಮಾಲೇಗಾಂವನಲ್ಲಿ 2008ರಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಮೂವರನ್ನು ಪುಣೆ ಮೂಲದ ಎಟಿಎಸ್ ತನಿಖಾ ತಂಡ ಗುರುವಾರ ವಶಕ್ಕೆ ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.ಗುರುವಾರ ನಗರಕ್ಕೆ ಆಗಮಿಸಿದ್ದ ಎಟಿಎಸ್ ತನಿಖಾ ತಂಡದ ಸಿಪಿಐ ಧನಂಜಯ ಧುಮಾಳೆ ಹಾಗೂ ಸಿಬ್ಬಂದಿ ನಗರದ ವಿಠ್ಠಲ ಗೋಂಧಳಿ, ವಿಶ್ವನಾಥ ಕಂಬಾರ ಮತ್ತು ತಾಲ್ಲೂಕಿನ ಕಲ್ಲೋಳಿ ಗ್ರಾಮದ ನಿವಾಸಿ ಪ್ರಕಾಶ ಮೇತ್ರಿ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದೆ.ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ನಗರದ ಪ್ರವೀಣ ಟಕ್ಕಳಕಿ ಎಂಬಾತನನ್ನು ಬಂಧಿಸಲಾಗಿತ್ತು. ಈ ಮೂವರನ್ನು ವಶಕ್ಕೆ ಪಡೆಯುವ ಮೂಲಕ ಒಟ್ಟು ಬಂಧಿತರ ಸಂಖ್ಯೆ 4ಕ್ಕೇರಿದಂತಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry