ಸೋಮವಾರ, ಮಾರ್ಚ್ 1, 2021
31 °C

ಮಾಹಿತಿ ಹಕ್ಕು ಕಾಯ್ದೆಯಡಿ ಎನ್‌ಎಸ್‌ಎಫ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಹಿತಿ ಹಕ್ಕು ಕಾಯ್ದೆಯಡಿ ಎನ್‌ಎಸ್‌ಎಫ್

ಬೆಂಗಳೂರು: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಒಳಗೊಂಡಂತೆ ಎಲ್ಲ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳು ಉದ್ದೇಶಿತ `ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಮಸೂದೆ~ಯಡಿ ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಯೊಳಗೆ ಬರಲಿವೆ ಎಂದು ಕ್ರೀಡಾ ಸಚಿವ ಅಜಯ್ ಮಾಕೆನ್ ಹೇಳಿದರು.ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳಲ್ಲಿ (ಎನ್‌ಎಸ್‌ಎಫ್) ಹೊಣೆಗಾರಿಕೆ ಹಾಗೂ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವುದು ಈ ಉದ್ದೇಶಿತ ಮಸೂದೆಯ ಗುರಿ ಎಂಬುದನ್ನು ಅವರು ಪುನರುಚ್ಚರಿಸಿದರು. ಅದರಲ್ಲೂ ಫೆಡರೇಷನ್‌ಗಳ ಹಣಕಾಸು ವ್ಯವಹಾರ ಮತ್ತು ಆಡಳಿತದಲ್ಲಿ ಪಾರದರ್ಶಕತೆ ತರುವುದು ಅಗತ್ಯ ಎಂದರು.ಇಲ್ಲಿನ ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ)ದಲ್ಲಿ ಹೊಸದಾಗಿ ನಿರ್ಮಿಸಿದ ಶೂಟಿಂಗ್ ರೇಂಜ್‌ಅನ್ನು ಉದ್ಘಾಟಿಸಿದ ಬಳಿಕ ಮಾಕೆನ್ ಸುದ್ದಿಗಾರರ ಜೊತೆ ಮಾತನಾಡಿದರು. `ಉದ್ದೇಶಿತ ಮಸೂದೆಯೊಂದಿಗೆ ನಾವು ಮುಂದಿನ ಹೆಜ್ಜೆ ಇಡುವೆವು. ಮುಂಗಾರು ಅಧಿವೇಶನದಲ್ಲಿ ಅದನ್ನು ಸಂಸತ್ತಿನ ಮುಂದಿಡಬೇಕೆಂಬುದು ನನ್ನ ಬಯಕೆ~ ಎಂದು ಅವರು ತಿಳಿಸಿದರು.ಹಾಕಿ ಆಡಳಿತದ ಬಗ್ಗೆ ಮಾತನಾಡಿದ ಅವರು, `ಹಾಕಿ ಇಂಡಿಯಾ ಸಂಸ್ಥೆಯು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ನ ಮಾನ್ಯತೆ ಪಡೆದಿದೆ. ಈ ಕಾರಣ ಚಾಂಪಿಯನ್ಸ್ ಟ್ರೋಫಿ ಮತ್ತು ಒಲಿಂಪಿಕ್ ಕೂಟದ ಅರ್ಹತಾ ಪಂದ್ಯಗಳನ್ನು ಆಯೋಜಿಸುವ ಅವಕಾಶವನ್ನು ಅವರಿಗೆ ನೀಡಿದ್ದೇವೆ. ಭಾರತದಲ್ಲಿ ಒಲಿಂಪಿಕ್ ಅರ್ಹತಾ ಪಂದ್ಯಗಳು ನಡೆಯುವುದರಿಂದ ನಮಗೆ ಲಾಭವಿದೆ. ಈ ಅವಕಾಶವನ್ನು ಕಳೆದುಕೊಳ್ಳುವುದು ಸರಿಯಲ್ಲ~ ಎಂದರು.ಅತ್ಯಾಧುನಿಕ ಶೂಟಿಂಗ್ ರೇಂಜ್: ಕ್ರೀಡಾ ಸಚಿವರು ಸೋಮವಾರ ಉದ್ಘಾಟಿಸಿದ ಶೂಟಿಂಗ್ ರೇಂಜ್ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ. ಸುಮಾರು 6.5 ಕೋಟಿ ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ. 50 ಮೀ. ಮತ್ತು 25 ಮೀ. ಶೂಟಿಂಗ್ ರೇಂಜ್‌ನಲ್ಲಿ ಕ್ರಮವಾಗಿ 25 ಹಾಗೂ 30 ಲೇನ್‌ಗಳಿವೆ. ಅದೇ ರೀತಿ 10 ಮೀ. ಶೂಟಿಂಗ್ ರೇಂಜ್ 30 ಲೇನ್‌ಗಳನ್ನು ಹೊಂದಿವೆ.

`ದೇಶದ ಅತ್ಯುತ್ತಮ ಶೂಟಿಂಗ್ ರೇಂಜ್‌ಗಳಲ್ಲಿ ಇದೂ ಒಂದು. ಸದ್ಯದಲ್ಲೇ ಇಲ್ಲಿ ರಾಷ್ಟ್ರೀಯ ಶಿಬಿರ ನಡೆಸಲಾಗುವುದು~ ಎಂದು ರಾಷ್ಟ್ರೀಯ ರೈಫಲ್ಸ್ ಸಂಸ್ಥೆ ಕಾರ್ಯದರ್ಶಿ ಡಿ.ಕೆ. ಶುಕ್ಲಾ ನುಡಿದರು. ಯೋಗ ಮತ್ತು ಫಿಟ್‌ನೆಸ್ ಸೆಂಟರ್ ಒಳಗೊಂಡಿರುವ ದೊಡ್ಡ ಹಾಲ್ ರೇಂಜ್‌ನ ವಿಶೇಷತೆಯಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.